For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಜೊತೆ ಸಿನಿಮಾ: ಸಚಿವ ಬಿ.ಸಿ.ಪಾಟೀಲ್ ಹೇಳಿದ್ದು ಹೀಗೆ

  |

  ನಟ ದರ್ಶನ್ ಸಿನಿಮಾವನ್ನು ನಿರ್ಮಾಣ ಮಾಡಲು ಯಾರಿಗಿಲ್ಲ ಆಸೆ ಹೇಳಿ. ದರ್ಶನ್ ಸಿನಿಮಾ ನಿರ್ಮಾಣ ಮಾಡುವುದೆಂದರೆ ಪಕ್ಕಾ ಪೈಸಾ ವಸೂಲ್ ಎಂದೇ ಅರ್ಥ. ಹಾಗಾಗಿ ನಿರ್ಮಾಪಕರು ಸಾಲುಗಟ್ಟಿದ್ದಾರೆ ದರ್ಶನ್ ಎದುರು.

  ಸಿನಿಮಾ ನಿರ್ಮಾಪಕರು ಮಾತ್ರವಲ್ಲ, ರಾಜಕಾರಣಿಗಳಿಗೂ ದರ್ಶನ್ ಮೇಲೆ ಬಂಡವಾಳ ಹೂಡುವ ಬಯಕೆ. ಕೆಲವು ರಾಜಕಾರಣಿಗಳು ದರ್ಶನ್ ಸಿನಿಮಾಕ್ಕೆ ಬಂಡವಾಳ ಹೂಡಲು ತುದಿಗಾಲಮೇಲಿದ್ದಾರೆ. ಅದರಲ್ಲಿ ಒಬ್ಬರು, ಮಾಜಿ ನಟ, ಹಾಲಿ ಕೃಷಿ ಸಚಿವ ಬಿ.ಸಿ.ಪಾಟೀಲ್.

  'ಕೌರವ' ಬಿಸಿ ಪಾಟೀಲ್ ಭೇಟಿ ಮಾಡಿದ ಡಿ-ಬಾಸ್ ದರ್ಶನ್

  ಇತ್ತೀಚೆಗಷ್ಟೆ ಸಚಿವ ಬಿ.ಸಿ.ಪಾಟೀಲ್ ನಿವಾಸಕ್ಕೆ ಭೇಟಿ ನೀಡಿದ್ದರು ನಟ ದರ್ಶನ್. ಇದ್ದಕ್ಕಿದ್ದಂತೆ ನೀಡಲಾದ ಈ ಭೇಟಿ ಕುತೂಹಲ ಕೆರಳಿಸಿತ್ತು. ಆದರೆ ಈ ಭೇಟಿ ಬಗ್ಗೆ ಸ್ವತಃ ಬಿ.ಸಿ.ಪಾಟೀಲ್ ಅವರು ಸ್ಪಷ್ಟನೆ ನೀಡಿದ್ದಾರೆ.

  'ಒಟ್ಟಿಗೆ ಪ್ರಚಾರ ಮಾಡಿದ್ದೆವು, ಹಾಗಾಗಿ ಮನೆಗೆ ಕರೆದಿದ್ದೆ'

  'ಒಟ್ಟಿಗೆ ಪ್ರಚಾರ ಮಾಡಿದ್ದೆವು, ಹಾಗಾಗಿ ಮನೆಗೆ ಕರೆದಿದ್ದೆ'

  'ದರ್ಶನ್, ಮುನಿರತ್ನ ಪರವಾಗಿ ಪ್ರಚಾರ ಮಾಡಿದರು, ಅದೇ ದಿನ ನಾನೂ ಸಹ ಮುನಿರತ್ನ ಪರವಾಗಿ ಪ್ರಚಾರ ಮಾಡಿದೆ. ಹಾಗಾಗಿ ದರ್ಶನ್ ಅವರನ್ನು ಮನೆಗೆ ಆಹ್ವಾನಿಸಿದ್ದೆ. ನನ್ನ ಆಹ್ವಾನ ಮನ್ನಿಸಿ ಮನೆಗೆ ಬಂದರು, ಬೇರೆ ಏನೂ ಇಲ್ಲ' ಎಂದಿದ್ದಾರೆ ಸಚಿವ ಬಿ.ಸಿ.ಪಾಟೀಲ್.

  ಮಾಸ್ಕ್ ಹಾಕದೆ ಪ್ರಚಾರ ಮಾಡಿದ ನಟ ದರ್ಶನ್‌ಗೆ ದಂಡ

  ಕಾಲ್‌ಶೀಟ್ ಹಾಗೂ ಕತೆ ಸಿಕ್ಕರೆ ಸಿನಿಮಾ ಮಾಡುವೆ: ಪಾಟೀಲ್

  ಕಾಲ್‌ಶೀಟ್ ಹಾಗೂ ಕತೆ ಸಿಕ್ಕರೆ ಸಿನಿಮಾ ಮಾಡುವೆ: ಪಾಟೀಲ್

  ಮುಂದುವರೆದು ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, 'ದರ್ಶನ್ ಅವರ ಕಾಲ್‌ಶೀಟ್ ಸಿಕ್ಕರು, ಒಂದೊಳ್ಳೆ ಕತೆ ಸಿಕ್ಕರೆ ಖಂಡಿತ ಅವರೊಂದಿಗೆ ಸಿನಿಮಾ ಮಾಡುತ್ತೇನೆ' ಎಂದರು ಬಿ.ಸಿ.ಪಾಟೀಲ್. ದರ್ಶನ್ ಸಿನಿಮಾ ನಿರ್ಮಿಸಲು ಬಿ.ಸಿ.ಪಾಟೀಲ್ ಉತ್ಸುಕರಾಗಿದ್ದಾರೆ.

  ಮುನಿರತ್ನ ಪರವಾಗಿ ದರ್ಶನ್ ಪ್ರಚಾರ

  ಮುನಿರತ್ನ ಪರವಾಗಿ ದರ್ಶನ್ ಪ್ರಚಾರ

  ಆರ್‌ಆರ್‌ ನಗರ ಉಪಚುನಾವಣೆಯಲ್ಲಿ ನಟ ದರ್ಶನ್, ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಪ್ರಚಾರ ಮಾಡಿದ್ದರು. ನಟಿ ಅಮೂಲ್ಯ, ಪತಿ ಜಗದೀಶ್, ಸಚಿವರಾದ ಆರ್.ಅಶೋಕ್, ಸೋಮಶೇಖರ್, ಭೈರತಿ ಬಸವರಾಜು, ಬಿಸಿ ಪಾಟೀಲ್ ಇನ್ನೂ ಹಲವರು ಅಂದು ಪ್ರಚಾರದಲ್ಲಿ ಹಾಜರಿದ್ದರು.

  'ನವಗ್ರಹ' ಸೀಕ್ವೆಲ್: 12 ವರ್ಷದ ಡಿ ಬಾಸ್ ಅಭಿಮಾನಿಗಳ ಆಸೆ ಈಡೇರುತ್ತಾ?

  K Manju speaks about Ravi Belegere : ನನ್ನ ಅವರ ಒಡನಾಟನೆ ಬೇರೆ !! | Filmibeat Kannada
  ಆಗೊಮ್ಮೆ-ಈಗೊಮ್ಮೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ

  ಆಗೊಮ್ಮೆ-ಈಗೊಮ್ಮೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ

  ಪೊಲೀಸ್ ಅಧಿಕಾರಿಯಾಗದ್ದ ಬಿ.ಸಿ.ಪಾಟೀಲ್, ಕೆಲಸಕ್ಕೆ ರಾಜೀನಾಮೆ ನೀಡಿ ಸಿನಿಮಾ ನಟರಾದರು. ರಾಜಕಾರಣಕ್ಕೆ ಸೇರುವವರೆಗೆ ಸಿನಿಮಾದಲ್ಲಿ ಸಕ್ರಿಯರಾಗಿದ್ದ ಬಿ.ಸಿ.ಪಾಟೀಲ್, ಆ ನಂತರ ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 2017 ರಲ್ಲಿ ನಟಿಸಿದ ಕಾಫಿತೋಟ ಸಿನಿಮಾ ಅವರ ನಟನೆಯ ಈವರೆಗಿನ ಕೊನೆಯ ಸಿನಿಮಾ.

  English summary
  Minister BC Patil said if he get call sheet and a good story then he will produce a movie for actor Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X