For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿನಲ್ಲಿ ಮತ್ತೊಂದು ಹೊಸ ಮಲ್ಟಿಪ್ಲೆಕ್ಸ್ ಓಪನ್

  |

  ಬೆಂಗಳೂರಿನಲ್ಲಿ ಒಂದೊಳ್ಳೆ ಸಿನಿಮಾ ಎಕ್ಸ್‌ಪೀರಿಯನ್ಸ್ ಬೇಕೆನ್ನುವವರಿಗೇನೂ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಚಿತ್ರಮಂದಿರಗಳೇನೂ ಕಡಿಮೆ ಇಲ್ಲ. ನಗರದ ಪ್ರಮುಖ ಸ್ಥಳಗಳಲ್ಲಿರುವ ಬಹುತೇಕ ಮಾಲ್‌ಗಳಲ್ಲಿ ಒಂದೊಂದು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿದ್ದು, ಭಿನ್ನ ವಿಭಿನ್ನ ಕ್ಲಾಸ್‌ಗಳಲ್ಲಿ ಸಿನಿಮಾಗಳನ್ನು ವೀಕ್ಷಿಬಹುದಾಗಿದೆ. ನಗರದಲ್ಲಿ ಸಾಮಾನ್ಯ ಕ್ಲಬ್ ಕ್ಲಾಸ್‌ನಿಂದ ಹಿಡಿಡು ಐಮ್ಯಾಕ್ಸ್, ಫೋರ್ ಡಿ ಎಕ್ಸ್ ಆಡಿಟೋರಿಯಂವರೆಗಿನ ಮಲ್ಟಿಪ್ಲೆಕ್ಸ್ ಫೆಸಿಲಿಟಿ ಇದ್ದು, ಈಗಾಗಲೇ ಪಿವಿಆರ್, ಐನಾಕ್ಸ್, ಗೋಪಾಲನ್, ಫನ್ ಸಿನಿಮಾಸ್, ಸಿನಿಪೊಲಿಸ್ ರೀತಿಯ ಮಲ್ಟಿಪ್ಲೆಕ್ಸ್ ದೈತ್ಯಗಳು ಕಾರ್ಯ ನಿರ್ವಹಿಸುತ್ತಿವೆ.

  ಹೀಗೆ ಬಹುತೇಕ ಎಲ್ಲಾ ಮಲ್ಟಿಪ್ಲೆಕ್ಸ್‌ಗಳನ್ನು ಹೊಂದಿದ್ದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಇದೀಗ ಮತ್ತೊಂದು ಹೊಸ ಮಲ್ಟಿಪ್ಲೆಕ್ಸ್ ಸೇರ್ಪಡೆಗೊಂಡಿದೆ. ಹೌದು, ದೇಶದ ಹಲವು ಪ್ರಮುಖ ನಗರಗಳಲ್ಲಿ ತನ್ನ ಮಲ್ಟಿಪ್ಲೆಕ್ಸ್ ಶಾಖೆಗಳನ್ನು ಹೊಂದಿರುವ ಮೀರಜ್ ಸಿನಿಮಾಸ್ ಈಗ ಬೆಂಗಳೂರಿನಲ್ಲಿ ತನ್ನ ವ್ಯವಹಾರ ಆರಂಭಿಸಿದೆ. ಬೆಂಗಳೂರಿನ ಸುಂಕದಕಟ್ಟೆ ಏರಿಯಾದ ಮಾಗಡಿ ರಸ್ತೆಯಲ್ಲಿರುವ ಡಿ ಮಾರ್ಟ್ ಕಟ್ಟಡದಲ್ಲಿ ಮೀರಜ್ ಸಿನಿಮಾಸ್ ಅನ್ನು ತೆರೆಯಲಾಗಿದ್ದು, ಈಗಾಗಲೇ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.

  ಇನ್ನು ಮೀರಜ್ ಸಿನಿಮಾಸ್‌ನಲ್ಲಿ ಆರು ಪರದೆಗಳಿದ್ದು, ಬೆಂಗಳೂರಿನಲ್ಲಿ ತನ್ನ ಶಾಖೆ ಆರಂಭಿಸುತ್ತಿರುವುದರ ಕುರಿತು ಮೀರಜ್ ಸಿನಿಮಾಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ. ಚಿತ್ರಮಂದಿರದಲ್ಲಿರುವ ಐಷಾರಾಮಿ ಸವಲತ್ತುಗಳ ವಿಶೇಷ ವಿಡಿಯೊವನ್ನು ಮೀರಜ್ ಸಿನಿಮಾಸ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಒಂದೊಳ್ಳೆ ಸಿನಿಮಾ ಎಕ್ಸ್‌ಪೀರಿಯನ್ಸ್ ಬೇಕೆನ್ನುವವರು ನಮ್ಮ ಸಿನಿಮಾಸ್‌ಗೆ ಬನ್ನಿ ಎಂದು ಬೆಂಗಳೂರಿಗರನ್ನು ಆಹ್ವಾನಿಸಿದೆ.

  Read more about: bengaluru theatre
  English summary
  Miraj Cinemas opened their first multiplex in Bengaluru city
  Monday, December 12, 2022, 6:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X