twitter
    For Quick Alerts
    ALLOW NOTIFICATIONS  
    For Daily Alerts

    ಯಾರಿಗೆ ಬೇಕು 'ಮಿರ್ಚಿ ಮಂಡಕ್ಕಿ ಕಡಕ್ ಚಾಯ್'?

    By Rajendra
    |

    ಚುಮುಚುಮು ಚಳಿಗೆ ಮಿರ್ಚಿ ಮಂಡಕ್ಕಿ ಕಡಕ್ ಚಾಯ್ ಕೊಟ್ಟರೆ ಯಾರು ಬೇಡ ಅಂತಾರೆ ಹೇಳಿ? ಈಗ ಭಿನ್ನ ರುಚಿಯನ್ನು ಬಯಸುತ್ತಿರುವ ಪ್ರೇಕ್ಷಕ ವರ್ಗಕ್ಕೆ ಹೊಸ ಸೊಗಡಿನ ಚಿತ್ರ ಕೊಡಲು ಬರುತ್ತಿದೆ ಹೊಸಬರ ತಂಡ. ಚಿತ್ರದ ಹೆಸರು 'ಮಿರ್ಚಿ ಮಂಡಕ್ಕಿ ಕಡಕ್ ಚಾಯ್'.

    ಕನ್ನಡ ಚಿತ್ರರಸಿಕರು ಉದ್ದುದ್ದ ಶೀರ್ಷಿಕೆಗಳನ್ನು ನೋಡಿ ಬಹಳ ದಿನಗಳೇ ಆಗಿದ್ದವು. ಈಗ 'ಮಿರ್ಚಿ ಮಂಡಕ್ಕಿ ಕಡಕ್ ಚಾಯ್' ಹೆಸರಿನ ಚಿತ್ರ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ತನು ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವಿದು. [ಚಹಾ ಅಂಗಡಿ ಮಾಲಿಕರ ಮೇಲೆ ಕೇಂದ್ರ ಬ್ರಹ್ಮಾಸ್ತ್ರ]

    Mirchi Mandakki Kadak Chai
    ಎರಡನೇ ಹಂತದ ಚಿತ್ರೀಕರಣ ಆರಂಭವಾಗಿದ್ದು, ಈ ಹಂತದಲ್ಲಿ ಮೂರು ಹಾಡುಗಳ ಚಿತ್ರೀಕರಣ ನಡೆಯಲಿದೆ. ಖ್ಯಾತ ನಿರ್ದೇಶಕರಾದ ಶಶಾಂಕ್ ಹಾಗೂ ಮಹೇಶ್ ರಾವ್ ಬಳಿ ಸಹಾಯಕರಾಗಿದ್ದ ಸಂಜೋತಾ ಭಂಡಾರಿ ಈ ಚಿತ್ರದ ನಿರ್ದೇಶಕರು. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಸಂಜೋತಾ ಅವರೇ ಬರೆದಿದ್ದಾರೆ.

    ಚಿತ್ರದ ನಿರ್ದೇಶಕಿ ಸಂಜೋತಾ ಅವರು ಬಹುರಾಷ್ಟ್ರೀಯ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ಬಾಂಗೆಯ ಡಿಜಿಟಲ್ ಅಕಾಡೆಮಿಯಲ್ಲಿ ಫಿಲಂ ಮೇಕಿಂಗ್ ಕೋರ್ಸ್ ಮಾಡಿದ ಬಳಿಕ ಚಿತ್ರರಂಗಕ್ಕೆ ಅಡಿಯಿಟ್ಟರು.

    ಈಗಾಗಲೆ ಕಾರ್ಪೊರೇಟ್ ಚಿತ್ರಗಳು, ಆಡ್ ಫಿಲಂಸ್, ಸಾಕ್ಷ್ಯಚಿತ್ರಗಳನ್ನು ಮಾಡಿದ ಅನುಭವವೂ ಜೊತೆಗಿದೆ. ಮುರಳಿ ಮೀಟ್ಸ್ ಮೀರಾ, ಭದ್ರ, ಜರಾಸಂಧ ಹಾಗೂ ಆಕ್ರಮಣ ಚಿತ್ರಗಳಿಗೆ ಸಹಾಯಕಿಯಾಗಿ ಕೆಲಸ ಮಾಡಿದ್ದಾರೆ.

    ಈಗ ತಮ್ಮದೇ ಆದಂತಹ ನಿರ್ಮಾಣ ಸಂಸ್ಥೆ ತನು ಟಾಕೀಸ್ ಮೂಲಕ ಮಿರ್ಚಿ ಮಂಡಕ್ಕಿ ಕಡಕ್ ಚಾಯ್ ಕೈಗೆತ್ತಿಕೊಂಡಿದ್ದಾರೆ. "ಬಂಗಾರದ ಬಿಂದಿಗೇಲಿ ಕೊಳೆನೀರು ತುಂಬ್ಸೋದಕ್ಕಿಂತ ಮಣ್ಣಿನ ಗಡಿಗೇಲಿ ಎಳನೀರು ತುಂಬ್ಸೋದು ಲೇಸು ಅನ್ನೋದು ಮನವರಿಕೆಯಾದಾಗಲೇ ಹುಟ್ಟಿಕೊಂಡಿದ್ದು ಈ ತನು ಟಾಕೀಸ್" ಎನ್ನುತ್ತಾರೆ ಸಂತೋಜಾ.

    ಮೂವರು ಸ್ನೇಹಿತರು ಹಾಗೂ ಕಾಲೇಜು ದಿನಗಳ ಬಳಿಕದ ಕಥಾಹಂದರವನ್ನು 'ಮಿರ್ಚಿ ಮಂಡಕ್ಕಿ ಕಡಕ್ ಚಾಯ್' ಚಿತ್ರ ಒಳಗೊಂಡಿದೆ. ಜೀವನ ಹಾಗೂ ಸಂಬಂಧಗಳಿಗೆ ಹೊಸ ಅರ್ಥ ಹುಡುಕುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆ.

    ರತೀಶ್ ಛಾಯಾಗ್ರಹಣರುವ ಈ ಚಿತ್ರಕ್ಕೆ ಎಂ.ಎಸ್.ಬಾಲ ಅವರ ಸಂಕಲನವಿದೆ. ಹರಿಕಾವ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಕೆ.ಕಲ್ಯಾಣ್ ಹಾಗೂ ಸಂಜೋತಾ ಬರೆದಿದ್ದಾರೆ. ಪ್ರದೀಪ್, ನಮ್ರತಾ, ಸಚಿನ್, ನಿಮಿಷ, ಬಸವಲಿಂಗಯ್ಯ ಹೀರೆಮಠ್, ವಿಶ್ವೇಶ್ವರಿ ಹಿರೇಮಠ್, ವಿಶಾಲ್, ಅಪೂರ್ವ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. (ಒನ್ಇಂಡಿಯಾ ಕನ್ನಡ)

    English summary
    “Mirchi- Mandakki Kadak Chai”, film by Sanjotha Bhandari, is all about exploring the uniqueness in our relationships, complementing our values and give a wholesome, fuller experience and meaning to relationships and life. The movie revolves around three friends and their life after college and how their strengths and weaknesses complement each other to make their team complete and competent.
    Tuesday, February 4, 2014, 15:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X