For Quick Alerts
  ALLOW NOTIFICATIONS  
  For Daily Alerts

  ಜಮೀರ್ ಅಹ್ಮದ್ ಮಗನ ಚೊಚ್ಚಲ ಸಿನಿಮಾದ ಚಿತ್ರೀಕರಣ ಪೂರ್ಣ

  |

  ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮಗ ಸ್ಯಾಂಡಲ್‌ವುಡ್ ಪ್ರವೇಶಿಸಲಿದ್ದಾರೆ ಎಂದು ಬಹಳ ದಿನಗಳಿಂದ ಹೇಳಲಾಗಿತ್ತು. ಕೊನೆಗೂ ಆ ಸಮಯ ಬಂದಾಗಿದೆ. ಜಮೀರ್ ಅಹ್ಮದ್ ಪುತ್ರನ ಚೊಚ್ಚಲ ಸಿನಿಮಾ ಚಿತ್ರೀಕರಣ ಮುಗಿದಿದೆ.

  ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಎಂಟ್ರಿಗೆ ಕೊಡಲು ರೆಡಿಯಾದ ಜಮೀರ್ ಪುತ್ರ | Filmibeat Kannada

  ಜಮೀರ್ ಅಹ್ಮದ್ ಖಾನ್ ಮಗ ಜೈದ್ ಖಾನ್ ನಟಿಸಿರುವ ಬನಾರಸ್ ಸಿನಿಮಾದ ಶೂಟಿಂಗ್ ಇಂದಿಗೆ ಪೂರ್ಣಗೊಂಡಿದೆ. ಬಸವನಗುಡಿಯ ದೊಡ್ಡ ಗಣಪತಿ ‌ಸನ್ನಿಧಾನದಲ್ಲಿ ಬನಾರಸ್ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.

  'ಬೆಲ್ ಬಾಟಂ' ಖ್ಯಾತಿಯ ಜಯತೀರ್ಥ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಯಶಸ್ವಿಯಾಗಿ ಬನಾರಸ್ ಸಿನಿಮಾ ಮುಗಿಸಿ ಕುಂಬಳಕಾಯಿ ಹೊಡೆದಿದ್ದಾರೆ.

  ವೈಬಿ ರಡ್ಡಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಗುರುಮೂರ್ತಿ ಅವರು ಛಾಯಾಗ್ರಹಣ ನಿರ್ವಹಿಸಿದ್ದಾರೆ.

  ಜಮೀರ್ ಅಹ್ಮದ್ ಮಗನನ್ನು ಲಾಂಚ್ ಮಾಡ್ತಿದ್ದಾರೆ ಸ್ಟಾರ್ ಡೈರೆಕ್ಟರ್

  ಜೈದ್ ಖಾನ್‌ಗೆ 'ಪಂಚತಂತ್ರ' ಖ್ಯಾತಿಯ ಸೋನಾಲ್ ಮಾಂಟೆರೋ ನಾಯಕಿಯಾಗಿ ನಟಿಸಿದ್ದಾರೆ. ಹಿರಿಯ ನಟ ದೇವರಾಜ್, ಅಚ್ಯುತ‌ಕುಮಾರ್, ಸುಜಯ್ ಶಾಸ್ತ್ರಿ, ಸ್ವಪ್ನ ರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

  ಪ್ರಸ್ತುತ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಆರಂಭಿಸಲಿದೆ. ಬಿಡುಗಡೆಗೆ ಬಗ್ಗೆ ಈಗ ನಿರ್ಧರಿಸಿಲ್ಲವಾದರೂ ಸರಿಯಾದ ಸಮಯ ನೋಡ್ಕೊಂಡು ತೆರೆಗೆ ಬರಲಿದೆ.

  ಇದಕ್ಕೂ ಮುಂಚೆ ಬಾಲಿವುಡ್‌ನಲ್ಲಿ ಜಮೀರ್ ಅಹ್ಮದ್ ಖಾನ್ ಪುತ್ರನ ಮೊದಲ ಸಿನಿಮಾ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಸಲ್ಮಾನ್ ಖಾನ್ ಸಹೋದರ ಅಥವಾ ಸಂಜಯ್ ದತ್, ಜಮೀರ್‌ ಪುತ್ರನನ್ನು ಲಾಂಚ್ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಅಂತಿಮವಾಗಿ ಕನ್ನಡದಲ್ಲಿಯೇ ಜಮೀರ್ ಪುತ್ರನ ಸಿನಿ ಪಯಣ ಆರಂಭವಾಗಿದೆ.

  English summary
  Jayathirtha Directional, MLA Zammer Ahmed Son Zaid Khan Starrer, Banaras Movie Shooting Completed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X