For Quick Alerts
  ALLOW NOTIFICATIONS  
  For Daily Alerts

  ಚೆನ್ನೈ ರೂಪದರ್ಶಿ ಬಿದುಶಿ ಮುಂಬೈನಲ್ಲಿ ಹತ್ಯೆ

  By Mahesh
  |

  ಮುಂಬೈ,ಅ .25: ಚೆನ್ನೈ ಮೂಲದ ಬ್ಯೂಟಿ ಕ್ವೀನ್, 23ರ ಹರೆಯದ ಬಿದುಶಿ ದಾಶ್ ಬರ್ಡೆ ಎಂಬ ರೂಪದರ್ಶಿ ಪಶ್ಚಿಮ ಅಂಧೇರಿಯಲ್ಲಿನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಅಮಾನುಷವಾಗಿ ಹತ್ಯೆಗೀಡಾದಿದ್ದಾರೆ.

  ಕೊಲೆಯಾದ ದಿನ ಆಕೆ ತನ್ನ ಅಪಾರ್ಟ್‌ಮೆಂಟ್ನಲ್ಲಿ ಒಬ್ಬಂಟಿಯಾಗಿದ್ದುಯಾವುದೇ ಮೊಬೈಲ್ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ ಎಂದು ಆಕೆಯ ಪತಿ ಕೇದಾರ್ ಬರ್ಡೆ ಹೇಳಿದ್ದಾರೆ.

  ಪತಿ ಕೇದಾರ್ ಅನೇಕ ಬಾರಿ ಫೋನ್ ಮಾಡಿದಾಗಲೂ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಕೆಲಸದಾಕೆ ಬಾಗಿಲು ಬಡಿದಾಗಲೂ ಬಾಗಿಲು ತೆಗೆಯಲಿಲ್ಲ. ಪತಿ ಕಚೇರಿಯಿಂದ ಸಂಜೆ ಹಿಂದಿರುಗಿದಾಗ ಮನೆಯಲ್ಲಿ ಬಿದುಶಿ ಶವವಾಗಿ ಬಿದ್ದಿರುವುದು ಕಂಡುಬಂದಿದೆ.

  ಆದರೆ, ಕೊಲೆಗೂ ಮುನ್ನ ಆಕೆಗೆ ನೂರಾರು ಮಿಸ್ ಕಾಲ್ ಗಳು ಬಂದಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

  ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಕೇದಾರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಬಿದುಶಿ ಅವರು ಪತಿಯೊಂದಿಗೆ ಈ ಅಪಾರ್ಟ್‌ಮೆಂಟ್‌ಗೆ ಕಳೆದ 18 ತಿಂಗಳಿನಿಂದ ವಾಸವಿದ್ದರು.

  ಬಿದುಶಿ ಸಕ್ಕರೆ ಕಾಯಿಲೆಯಿಂದ ನರಳುತ್ತಿದ್ದರು. ಲೋ ಶುಗರ್ ಆಗಿ ತಲೆ ಸುತ್ತಿ ಬಿದ್ದು ಗಾಜಿನ ಮೇಲೆ ಬಿದ್ದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಆರಂಭ ದಲ್ಲಿ ಶಂಕೆ ವ್ಯಕ್ತಪಡಿಸಿದ್ದರು. ಆದರೆ, ಆಕೆ ದೇಹದ ಮೇಲಾಗಿರುವ ಗಾಯಗಳಿಂದ
  ಹತ್ಯೆ ನಡೆದಿರುವುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಾಬೀತಾಗಿದೆ.

  ಘಟನೆ ನಡೆದಾಗ ಮನೆಯ ಲೈಟ್‌ಗಳು ಸ್ವಿಚ್ ಆಫ್ ಆಗಿದ್ದವು. ಆದರೆ ಟೆಲಿವಿಷನ್ ಮಾತ್ರ ಆನ್ ಆಗಿತ್ತು. ಬಾತ್‌ರೂಂನಿಂದ ಬೆಡ್‌ರೂಂಗೆ ಹೋಗುವ ದಾರಿಯಲ್ಲಿಬಿದುಶಿ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿರುವುದು ಕಂಡುಬಂತು. ಆಕೆಯ ಸನಿಹದಲ್ಲಿ ಇದ್ದ ಗಾಜಿನ ಬೀರು ಒಡೆದಿತ್ತು. ಮುಖ ಹಾಗೂ ಕತ್ತಿನ ಮೇಲೆ ಗಾಜಿನಿಂದಸೀಳಿದ ಗುರುತುಗಳಿದ್ದವು ಎಂದು ಪೊಲೀಸರು ಹೇಳಿದ್ದಾರೆ. ಹಲವು ತಮಿಳು ಚಲನಚಿತ್ರಗಳಲ್ಲಿ ನಟಿಸಿದ್ದ ಬಿದುಶಿ ಸದ್ಯ ಮುಂಬಯಿಯಲ್ಲಿ ರೂಪದರ್ಶಿಯಾಗಿದ್ದರು.

  English summary
  A former Miss Chennai and south Indian actress Bidushi Dash Barde (23) found murdered at her Mumbai residence. Bidushi's blood-soaked body was found by her husband Kedar Barde (26).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X