For Quick Alerts
  ALLOW NOTIFICATIONS  
  For Daily Alerts

  'ಬೆಂಗಳೂರು ಅಂಡರ್ ವರ್ಲ್ಡ್'ಗೆ ಕಾಲಿಟ್ಟ ಮಿಸ್ ಮೈಸೂರು ಯಾರಿವಳು?

  By Suneetha
  |

  ಇತ್ತೀಚೆಗೆ ಮಾಡೆಲ್ ಗಳು ಹಾಗೂ ಪರಭಾಷಾ ನಟಿಯರು ನಾಯಕಿ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಪಡೆದುಕೊಳ್ಳುತ್ತಿರುವುದು ಹೊಸ ಟ್ರೆಂಡ್ ಆಗಿದೆ.

  ಮೊನ್ನೆ ಮೊನ್ನೆ ಬಾಲಿವುಡ್ ನ ಕಿರುತೆರೆ ನಟಿ ಕಮ್ ಮಾಡೆಲ್ ಮುಂಬೈ ಬೆಡಗಿ ಕಾಮ್ನಾ ರಣಾವತ್ ಅವರು ಗುರು ದೇಶಪಾಂಡೆ ಅವರ 'ಜಾನ್ ಜಾನಿ ಜನಾರ್ಧನ' ಚಿತ್ರಕ್ಕೆ ಎಂಟ್ರಿಯಾದ ಬೆನ್ನಲ್ಲೇ ಇದೀಗ 'ಬೆಂಗಳೂರು ಅಂಡರ್ ವರ್ಲ್ಡ್' ಚಿತ್ರದ ಸರದಿ.[ಮುಂಬೈ ನಿಂದ ನೇರವಾಗಿ ಸ್ಯಾಂಡಲ್ ವುಡ್ ಗೆ ಬಂದ ರೂಪದರ್ಶಿ]

  ಹೌದು 'ಡೆಡ್ಲಿ' ಆದಿತ್ಯ ನಟನೆ ಮಾಡುತ್ತಿರುವ 'ಬೆಂಗಳೂರು ಅಂಡರ್ ವರ್ಲ್ಡ್' ಚಿತ್ರಕ್ಕೆ ನಾಯಕಿ ನಟಿಯ ಹುಡುಕಾಟದಲ್ಲಿ ತೊಡಗಿದ್ದ ಚಿತ್ರತಂಡ ಇದೀಗ ಅಪ್ಪಟ ಕನ್ನಡತಿಯನ್ನೇ ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

  ಪಿ.ಎನ್ ಸತ್ಯ ಅವರು ನಿರ್ದೇಶನ ಮಾಡುತ್ತಿರುವ 'ಬೆಂಗಳೂರು ಅಂಡರ್ ವರ್ಲ್ಡ್' ಚಿತ್ರದಲ್ಲಿ ಪ್ರೇಕ್ಷಕರಿಗೆ ಭೂಗತ ಲೋಕದ ಪರಿಚಯವಾಗಲಿದೆ. ಇದೀಗ ಪಕ್ಕಾ ಮಾಸ್ ಚಿತ್ರವಾಗಿರುವ 'ಬೆಂಗಳೂರು ಅಂಡರ್ ವರ್ಲ್ಡ್' ಮೂಲಕ ಮೈಸೂರಿನ 19ರ ಹರೆಯದ ಮಾಡೆಲ್ ಒಬ್ಬರು ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ.['ಡೆಡ್ಲಿ' ಆದಿತ್ಯರ 'ಬೆಂಗಳೂರು ಅಂಡರ್ ವರ್ಲ್ಡ್'ಗೆ ದರ್ಶನ್ ಸಾಥ್]

  ಹೊಸ ನಾಯಕಿಯ ಸಂಪೂರ್ಣ ವಿವರಗಳನ್ನು ತಿಳಿಯಲು ಕೆಳಗಿನ ಸ್ಲೈಡ್ಸ್ ಗಳನ್ನು ಒಂದೊಂದಾಗಿ ಕ್ಲಿಕ್ಕಿಸುತ್ತಾ ಹೋಗಿ...

  ಯಾರೀಕೆ?

  ಯಾರೀಕೆ?

  ಮೂಲತಃ ಮಂಗಳೂರಿನ ಹುಡುಗಿಯಾದ ಪಾಯಲ್ ರಾಧಾಕೃಷ್ಣ ಅವರು ಸದ್ಯಕ್ಕೆ ಮೈಸೂರಿನಲ್ಲಿ ನೆಲೆಸಿದ್ದಾರೆ. ತುಂಬಾ ಸಮಯದಿಂದ ಮೈಸೂರಿನಲ್ಲಿ ಮಾಡೆಲಿಂಗ್ ಮಾಡುತ್ತಿದ್ದರಿಂದ ಮೈಸೂರಿನಲ್ಲೇ ನೆಲೆಸಿದ್ದಾರೆ.['ಬೆಂಗಳೂರು ಅಂಡರ್ ವರ್ಲ್ಡ್ ಗೆ ಕಾಲಿಟ್ಟ 'ಡೆಡ್ಲಿ' ಆದಿತ್ಯ]

  ಬೆಳ್ಳಿತೆರೆಗೆ ಪದಾರ್ಪಣೆ

  ಬೆಳ್ಳಿತೆರೆಗೆ ಪದಾರ್ಪಣೆ

  ಮಾಡೆಲ್ ಕಮ್ ಡ್ಯಾನ್ಸರ್ ಪಾಯಲ್ ರಾಧಕೃಷ್ಣ ಅವರು ಇದೀಗ 'ಡೆಡ್ಲಿ' ಆದಿತ್ಯ ಅವರ ಜೊತೆ 'ಬೆಂಗಳೂರು ಅಂಡರ್ ವರ್ಲ್ಡ್' ಎಂಬ ಭೂಗತ ಪ್ರಪಂಚಕ್ಕೆ ಕಾಲಿಡಲು ಎಲ್ಲಾ ರೀತಿಯಲ್ಲಿ ಸಜ್ಜಾಗುತ್ತಿದ್ದು, ಮೊಟ್ಟ ಮೊದಲ ಬಾರಿಗೆ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿದ್ದಾರೆ.

  19ರ ಹರೆಯದ ಬೆಡಗಿ

  19ರ ಹರೆಯದ ಬೆಡಗಿ

  19ರ ಹರೆಯದ ಬೆಡಗಿ ಪಾಯಲ್ ರಾಧಕೃಷ್ಣ ಅವರು 2005ರಲ್ಲಿ 'ಮಿಸ್ ಮೈಸೂರು' ಆಗಿ ಹೊರಹೊಮ್ಮಿದ್ದಾರೆ. ತದನಂತರ ಹಲವಾರು ಫ್ಯಾಶನ್ ಶೋಗಳಲ್ಲಿ ಭಾಗವಹಿಸಿದ್ದಾರೆ.

  ಕ್ಯಾಮೆರಾ ಎದುರಿಸೋದು ಸುಲಭ

  ಕ್ಯಾಮೆರಾ ಎದುರಿಸೋದು ಸುಲಭ

  'ಹಲವಾರು ಸಮಯಗಳಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿರುವುದರಿಂದ ಸಿನಿಮಾದಲ್ಲಿ ನಟಿಸಲು ತುಂಬಾ ಆತ್ಮವಿಶ್ವಾಸ ತಂದುಕೊಟ್ಟಿದೆ. ಕ್ಯಾಮೆರಾ ಎದುರಿಸಲು ಅಂತಹ ಭಯ ಏನೂ ಇಲ್ಲ, ಸುಲಭ ಎನಿಸುತ್ತಿದೆ' ಎಂದು ಪಾಯಲ್ ರಾಧಾಕೃಷ್ಣ ಅವರು ನುಡಿಯುತ್ತಾರೆ.

  ಮೊದಲ ಚಿತ್ರವೇ ಡಿ-ಗ್ಲಾಮರ್

  ಮೊದಲ ಚಿತ್ರವೇ ಡಿ-ಗ್ಲಾಮರ್

  ಮಾಡೆಲಿಂಗ್ ನಲ್ಲಿ ಸಖತ್ ಗ್ಲಾಮರ್ ಆಗಿ ಕಾಣಿಸುತ್ತಿದ್ದ ಪಾಯಲ್ ಇದೀಗ ತಮ್ಮ ಮೊದಲ ಚಿತ್ರದಲ್ಲಿಯೇ ಡಿ-ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಹೆಚ್ಚಿನ ಆಕ್ಷನ್ ದೃಶ್ಯಗಳಿದ್ದರೂ, ಪ್ರೀತಿಯ ವಿಭಿನ್ನ ಟ್ರ್ಯಾಕ್ ಇದೆ. ಸಿನಿಮಾ ಎಂದರೆ ಬರೀ ಗ್ಲಾಮರ್ ಮಾತ್ರ ಅಲ್ಲ, ಬದಲಾಗಿ ಸಿನಿಮಾದಲ್ಲಿ ಒಳ್ಳೆಯ ಅಭಿನಯ ನೀಡೋದು ಮುಖ್ಯ. ನನಗೆ ಅಭಿನಯ ವಿಷಯದ ಬಗ್ಗೆ ಸ್ಪಷ್ಟತೆ ಇದೆ' ಎನ್ನುತ್ತಾರೆ ಪಾಯಲ್.

  ಬಾಲಿವುಡ್ ನಲ್ಲಿ ಮಿಂಚೋದು ಕನಸು

  ಬಾಲಿವುಡ್ ನಲ್ಲಿ ಮಿಂಚೋದು ಕನಸು

  ಸದ್ಯಕ್ಕೆ ಸ್ಯಾಂಡಲ್ ವುಡ್ ಗೆ ನಾಯಕಿ ನಟಿಯಾಗಿ ಕಾಲಿಟ್ಟಿರುವ ನಟಿ ಪಾಯಲ್ ರಾಧಾಕೃಷ್ಣ ಅವರಿಗೆ ಬಾಲಿವುಡ್ ಕ್ಷೇತ್ರದಲ್ಲಿ ಮಿಂಚಬೇಕು ಅನ್ನೋದು ದೊಡ್ಡ ಕನಸಂತೆ. 'ಇಲ್ಲಿ ನಾನು ಒಳ್ಳೆ ಪ್ರದರ್ಶನ ನೀಡಿದರೆ ಮುಂದೆ ನನಗೆ ಒಳ್ಳೆ ಭವಿಷ್ಯ ಇದೆ' ಎಂದಿದ್ದಾರೆ ಪಾಯಲ್ ರಾಧಾಕೃಷ್ಣ.

  English summary
  Model Paayal Radhakrishna, the 'Miss Mysuru-2015' will make her debut with director PN Sathya's Knnada Movie 'Bengaluru Underworld'. Kannada Actor Aditya in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X