twitter
    For Quick Alerts
    ALLOW NOTIFICATIONS  
    For Daily Alerts

    ಬಾಹುಬಲಿ ವೀಕ್ಷಿಸಲು ನರೇಂದ್ರ ಮೋದಿಗೆ ಪ್ರಭಾಸ್ ಆಹ್ವಾನ

    By Suneetha
    |

    ಎಸ್.ಎಸ್ ರಾಜಮೌಳಿ ನಿರ್ದೇಶನದ ಈ ವರ್ಷದ ಬಿಗ್ಗೆಸ್ಟ್ ಮೂವಿ 'ಬಾಹುಬಲಿ' ಚಿತ್ರದ ನಾಯಕ ಪ್ರಭಾಸ್ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ 'ಬಾಹುಬಲಿ' ಚಿತ್ರ ವೀಕ್ಷಿಸಲು ಆಹ್ವಾನ ನೀಡಿದ್ದಾರೆ.

    ಭಾನುವಾರದಂದು ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರದಾನಿಯವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದ ತೆಲುಗು ನಟ ಪ್ರಭಾಸ್ ಸಮಯ ಸಿಕ್ಕರೆ ತಮ್ಮ ಚಿತ್ರ 'ಬಾಹುಬಲಿ' ವೀಕ್ಷಿಸುವಂತೆ ಪ್ರಧಾನಿಯವರಿಗೆ ಮನವಿ ಮಾಡಿದ್ದಾರೆ. [ಬಾಹುಬಲಿ ವಿಮರ್ಶೆ : ಓಕೆ, ಆದರೆ ಅಂಥ ನಿರೀಕ್ಷೆ ಬೇಡ]

    ಸದ್ಯಕ್ಕೆ ತಮ್ಮ ಕೆಲಸದಲ್ಲಿ ತುಂಬಾ ಒತ್ತಡಗಳಿರುವ ಕಾರಣ ಚಿತ್ರ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಮುಂದೆ ಅವಕಾಶ ಸಿಕ್ಕಾಗ ಬಾಹುಬಲಿ ನೋಡುತ್ತೇನೆ. ಬಿಡುವು ಮಾಡಿಕೊಂಡು ಆದಷ್ಟು ಬೇಗನೆ 'ಬಾಹುಬಲಿ' ಚಿತ್ರ ನೋಡುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.

    ಅಲ್ಲದೇ ಶನಿವಾರದಂದು ಗೃಹಮಂತ್ರಿಗಳನ್ನು ಭೇಟಿ ಮಾಡಿದ ಪ್ರಭಾಸ್, ರಾಜನಾಥ್ ಸಿಂಗ್ ಅವರನ್ನು ತಮ್ಮ ಚಿತ್ರ ನೋಡಲು ಆಹ್ವಾನ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಗೃಹಮಂತ್ರಿ ರಾಜನಾಥ್ ಸಿಂಗ್ ಶೀಘ್ರದಲ್ಲೇ 'ಬಾಹುಬಲಿ' ನೋಡುವುದಾಗಿ ಹೇಳಿದ್ದಾರೆ. ಮುಂದೆ ಓದಿ....

    ಪ್ರಧಾನಿ ನರೇಂದ್ರ ಮೋದಿ- 'ಬಾಹುಬಲಿ' ಪ್ರಭಾಸ್

    ಪ್ರಧಾನಿ ನರೇಂದ್ರ ಮೋದಿ- 'ಬಾಹುಬಲಿ' ಪ್ರಭಾಸ್

    ಭಾನುವಾರ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಿ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿ, 'ಬಾಹುಬಲಿ' ವೀಕ್ಷಿಸಲು ಮೋದಿ ಅವರನ್ನು ಆಹ್ವಾನಿಸಿದ 'ಬಾಹುಬಲಿ' ನಾಯಕ ಪ್ರಬಾಸ್. ಒಂದು ವೇಳೆ ಮೋದಿ ಬಾಹುಬಲಿ ನೋಡಿದರೆ ಕೆಳಗಿನ ಯಾವ ಪಾತ್ರ ಅವರಿಗೆ ಇಷ್ಟವಾಗಬಹುದು?

    ಪ್ರಭಾಸ್ (ಬಾಹುಬಲಿ)
    ಸತ್ಯರಾಜ್ (ಕಟ್ಟಪ್ಪ)
    ರಮ್ಯಕೃಷ್ಣ (ಸಿವಗಾಮಿ)

    ತೆಲುಗು ನಟ ಪ್ರಭಾಸ್ ('ಬಾಹುಬಲಿ' ನಾಯಕ)

    ತೆಲುಗು ನಟ ಪ್ರಭಾಸ್ ('ಬಾಹುಬಲಿ' ನಾಯಕ)

    ತಾವು ಮೋದಿಯವರ ದೊಡ್ಡ ಅಭಿಮಾನಿಯಾಗಿದ್ದು, ಅವರೊಂದಿಗಿನ ಆ ಒಂದು ಭೇಟಿ ತಮ್ಮ ಜೀವನದ ಅಮೂಲ್ಯ ಕ್ಷಣ ಎಂದು ಪ್ರಧಾನಿ ಮೋದಿಯವರೊಂದಿಗಿನ ತಮ್ಮ ಭೇಟಿಯನ್ನು ಕುರಿತು ತಮ್ಮ ಫೇಸ್ ಬುಕ್ಕ್ ಸೈಟ್ ನಲ್ಲಿ ಹಂಚಿಕೊಂಡಿದ್ದಾರೆ.

    ಪ್ರಧಾನಿ ಮೋದಿ ಅವರೊಂದಿಗೆ ಪ್ರಭಾಸ್, ಕೃಷ್ಣಮ್ ರಾಜು, ಹಾಗೂ ಪ್ರಭಾಸ್ ಸೋದರ ಸಂಬಂಧಿ ಗಳು

    ಪ್ರಧಾನಿ ಮೋದಿ ಅವರೊಂದಿಗೆ ಪ್ರಭಾಸ್, ಕೃಷ್ಣಮ್ ರಾಜು, ಹಾಗೂ ಪ್ರಭಾಸ್ ಸೋದರ ಸಂಬಂಧಿ ಗಳು

    ಭಾನುವಾರದಂದು ಪ್ರಧಾನಿ ನಿವಾಸದಲ್ಲಿ ಪ್ರಭಾಸ್ ಹಾಗೂ ಸಂಬಂಧಿಕರೊಡನೆ ಮೋದಿಯವರ ಉಭಯ ಕುಶಲೋಪರಿ

    'ಬಾಹುಬಲಿ' ಜೊತೆ ಪ್ರಧಾನಿ ಮಾತು-ಕತೆ

    'ಬಾಹುಬಲಿ' ಪ್ರಬಾಸ್ ಅವರ ಭೇಟಿಯ ಸಂದರ್ಭವನ್ನು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮೈಕ್ರೋ ಬ್ಲಾಗಿಂಗ್ ಸೈಟ್ ನಲ್ಲಿ ಹಂಚಿಕೊಂಡಿದ್ದಾರೆ.

    ಗೃಹ ಮಂತ್ರಿ ರಾಜನಾಥ್ ಸಿಂಗ್- ಪ್ರಭಾಸ್, ಹಾಗೂ ಚಿಕ್ಕಪ್ಪ ಎಂ.ಪಿ ಕೃಷ್ಣಮ್ ರಾಜು

    ಗೃಹ ಮಂತ್ರಿ ರಾಜನಾಥ್ ಸಿಂಗ್- ಪ್ರಭಾಸ್, ಹಾಗೂ ಚಿಕ್ಕಪ್ಪ ಎಂ.ಪಿ ಕೃಷ್ಣಮ್ ರಾಜು

    ನಟ ಪ್ರಭಾಸ್ ಹಾಗೂ ಪೆದ್ದಣ್ಣಗಾರು ಎಂ.ಪಿ ಕೃಷ್ಣಮ್ ರಾಜು, ಗೃಹ ಮಂತ್ರಿ ರಾಜನಾಥ್ ಸಿಂಗ್ ಅವರನ್ನು ಶನಿವಾರದಂದು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಅವರು ಖಂಡಿತವಾಗಿಯೂ 'ಬಾಹುಬಲಿ' ಚಿತ್ರ ನೋಡುವುದಾಗಿ ಭರವಸೆ ನೀಡಿದರು.

    ಈ ವರ್ಷದ ಬಿಗ್ಗೆಸ್ಟ್ ಬ್ಲಾಕ್ ಬ್ಲಾಸ್ಟರ್ 'ಬಾಹುಬಲಿ'

    ಈ ವರ್ಷದ ಬಿಗ್ಗೆಸ್ಟ್ ಬ್ಲಾಕ್ ಬ್ಲಾಸ್ಟರ್ 'ಬಾಹುಬಲಿ'

    ಎಸ್.ಎಸ್. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರ ಈ ವರ್ಷದ ಬಿಗ್ಗೆಸ್ಟ್ ಬ್ಲಾಕ್ ಬಾಸ್ಟರ್ ಹಿಟ್ ಕಂಡಿದ್ದು, ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ. ಚಿತ್ರದಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ, ರಮ್ಯಕೃಷ್ಣ ಲೀಡ್ ರೋಲ್ ನಲ್ಲಿ ಮಿಂಚಿದ್ದಾರೆ.

    ಪ್ರಭಾಸ್, ಹಾಗೂ ಗೃಹಮಂತ್ರಿ ರಾಜನಾಥ್ ಸಿಂಗ್ ಜೊತೆ ಕೃಷ್ಣಮ್ ರಾಜು

    ಇತ್ತೀಚೆಗೆ ಎಲ್ಲೆಡೆ ಖ್ಯಾತಿಯಾಗುತ್ತಿರುವ 'ಬಾಹುಬಲಿ' ಚಿತ್ರದ ನಾಯಕ ಪ್ರಭಾಸ್ ಜೊತೆ ಗೃಹಮಂತ್ರಿ ರಾಜನಾಥ್ ಸಿಂಗ್, ಹಾಗೂ ಕೃಷ್ಣಮ್ ರಾಜು ಜೊತೆ ಇರುವ ಕ್ಷಣವನ್ನು ಗೃಹಮಂತ್ರಿಗಳು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    English summary
    Telugu Rebel star Prabhas met the Prime Minister Narendra Modi and India's Home Minister, Rajanath Singh, requested him to watch 'Baabubali'. Rajanath Singh promised to watch 'Baahubali'. The movie is directed by S.S Rajamouli.
    Monday, July 27, 2015, 13:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X