For Quick Alerts
  ALLOW NOTIFICATIONS  
  For Daily Alerts

  ರಾಧಿಕಾ ನಟನೆಯ 'ದಮಯಂತಿ' ಪೋಸ್ಟರ್ ಬಿಡುಗಡೆ ಮಾಡಿದ ಮೋಹನ್ ಲಾಲ್

  |

  ನಟಿ ರಾಧಿಕಾ ಕುಮಾರಸ್ವಾಮಿ ತೆರೆ ಮೇಲೆ ಮಿಂಚಿ ನಾಲ್ಕು ವರ್ಷಗಳು ಉರುಳಿವೆ. 'ರುದ್ರ ತಾಂಡವ' ಬಳಿಕ 'ಕಾಂಟ್ರ್ಯಾಕ್ಟ್', 'ರಾಜೇಂದ್ರ ಪೊನ್ನಪ್ಪ' ಸೇರಿದಂತೆ ಮೂರ್ನಾಲ್ಕು ಚಿತ್ರಗಳಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಬಿಜಿಯಿದ್ದರೂ, ಇನ್ನೂ ಅವರ ಯಾವ ಚಿತ್ರವೂ ಬಿಡುಗಡೆಗೊಂಡಿಲ್ಲ.

  ಸದ್ಯ ರಾಧಿಕಾ ಕುಮಾರಸ್ವಾಮಿ ಅಭಿನಯದ 'ದಮಯಂತಿ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ನಾಲ್ಕು ಭಾಷೆಗಳಲ್ಲಿ ತಯಾರಾಗಿರುವ 'ದಮಯಂತಿ' ಸಿನಿಮಾದ ಮಲಯಾಳಂ ಪೋಸ್ಟರ್ ಇದೀಗ ರಿಲೀಸ್ ಆಗಿದೆ.

  ಇತ್ತೀಚೆಗಷ್ಟೇ ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್​ ಲಾಲ್ 'ದಮಯಂತಿ'​ ಪೋಸ್ಟರ್ ಅನಾವರಣಗೊಳಿಸಿದರು. 'ದಮಯಂತಿ' ಫಸ್ಟ್ ಲುಕ್ ಪೋಸ್ಟರ್ ನಲ್ಲಿ ರಾಧಿಕಾ ಲುಕ್ ಭಯಂಕರವಾಗಿದ್ದು ಸಿನಿ ಪ್ರಿಯರಲ್ಲಿ ಭರವಸೆ ಮೂಡಿಸಿದೆ.

  ಯಾವ ಸಿನಿಮಾಗಾಗಿ ಈ ರೀತಿ ಬದಲಾದರು ರಾಧಿಕಾ ಕುಮಾರಸ್ವಾಮಿ?

  ಈಗಾಗಲೇ 'ದಮಯಂತಿ' ಚಿತ್ರದ ಕನ್ನಡ ಅವತರಣಿಕೆಯ ಟೀಸರ್ ಬಿಡುಗಡೆಯಾಗಿದೆ. ಅರಮನೆಯೊಂದರಲ್ಲಿ ರಾತ್ರಿ ವೇಳೆ ಕೆಂಪು ಸೀರೆಯನ್ನು ಧರಿಸಿದ ರಾಣಿಯ ಅವತಾರದಲ್ಲಿ ಕಾಣುವ ರಾಧಿಕಾ ಸಿಂಹಾಸನದ ಮೇಲೆ ಕುಳಿತುಕೊಂಡು ಗಂಭೀರ ನೋಟ ಬೀರುವ ಟೀಸರ್ ಎಲ್ಲೆಡೆ ಸದ್ದು ಮಾಡುತ್ತಿದೆ.

  'ದಮಯಂತಿ' ಮಹಿಳಾ ಪ್ರಧಾನ ಚಿತ್ರವಾಗಿದ್ದು, ಇದರಲ್ಲಿ ರಾಧಿಕಾ ಕುಮಾರಸ್ವಾಮಿ, 'ಭಜರಂಗಿ' ಖ್ಯಾತಿಯ ಲೋಕಿ, ಸಾಧು ಕೋಕಿಲ, ತಬಲಾ ನಾಣಿ, ಮಿತ್ರ, ಮಜಾ ಟಾಕೀಸ್​ ನ ಪವನ್​ ಅಭಿನಯಿಸಿದ್ದಾರೆ. ಚಿತ್ರವನ್ನು ನವರಸನ್​ ನಿರ್ದೇಶನ ಮಾಡಿದ್ದಾರೆ. ಕಥೆ-ಚಿತ್ರಕಥೆ ಜೊತೆಗೆ ನಿರ್ಮಾಣದ ಹೊಣೆಯೂ ನವರಸನ್ ಹೆಗಲ ಮೇಲಿದೆ.

  ಆರ್.ಎಸ್.ಗಣೇಶ್​ ನಾರಾಯಣ್​ ಸಂಗೀತ ಸಂಯೋಜನೆ ಮಾಡಿರುವ ಈ ಚಿತ್ರ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ.

  English summary
  Malayalam Actor Mohan Lal releases Radhika Kumaraswamy starrer Damayanthi movie poster.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X