For Quick Alerts
  ALLOW NOTIFICATIONS  
  For Daily Alerts

  ಬಂಗಾರು ಬಾಬಾ ಅವತಾರದಲ್ಲಿ ಮೋಹನ್‌ಲಾಲ್

  By Rajendra
  |

  ಪುಟ್ಟಪರ್ತಿ ಸತ್ಯಸಾಯಿ ಬಾಬಾ ಅವರ ಜೀವನ ಚರಿತ್ರೆಯನ್ನು ಬೆಳ್ಳೆಪರದೆಗೆ ತರುತ್ತಿರುವ ಸುದ್ದಿಯನ್ನು ಸುದೀರ್ಘ ಸಮಯದ ಹಿಂದೆಯೇ ಒನ್‌ಇಂಡಿಯಾ ಕನ್ನಡ ವರದಿ ಮಾಡಿತ್ತು. ಆದರೆ ಆ ಪಾತ್ರವನ್ನು ಯಾರು ಪೋಷಿಸಲಿದ್ದಾರೆ ಎಂಬ ಬಗ್ಗೆ ಇದೀಗ ಉತ್ತರ ಸಿಕ್ಕಿದೆ.

  ಪುಟ್ಟಪರ್ತಿ ಸಾಯಿ ಬಾಬಾ ಪಾತ್ರವನ್ನು ಮಲಯಾಳಂನ ಸೂಪರ್ ಸ್ಟಾರ್ ಮೋಹನ್‌ಲಾಲ್ ಪೋಷಿಸಲಿದ್ದಾರೆ. ದುಂಡಾದ ಮುಖ ಚಹರೆ, ಆಕಾರ, ಗಾತ್ರ ಎಲ್ಲರೂ ಸತ್ಯಸಾಯಿಬಾಬಾ ಅವರ ಪಾತ್ರಕ್ಕೆ ಹೇಳಿಮಾಡಿಸಿರುವಂತಿರುವುದೇ ಅವರನ್ನು ಆಯ್ಕೆ ಮಾಡಲು ಕಾರಣ ಎನ್ನುತ್ತಾರೆ ಚಿತ್ರದ ನಿರ್ದೇಶಕ ಕೋಡಿ ರಾಮಕೃಷ್ಣ.

  ಇದೊಂದು ಬಹುಭಾಷಾ ಚಿತ್ರವಾಗಿದ್ದು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಚಿತ್ರಿಸಲಾಗುತ್ತದಂತೆ. ಭಾರತದ ಎಲ್ಲ ಪ್ರಮುಖ ಭಾಷೆಗಳಲ್ಲೂ ತರುವುದಾಗಿ ಕೋಡಿ ರಾಮಕೃಷ್ಣ ಹೇಳಿಕೊಂಡಿದ್ದಾರೆ. ಆದರೆ ಕನ್ನಡದಲ್ಲಿ ಬರುತ್ತದೋ ಇಲ್ಲವೋ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.

  ಕೋಡಿ ರಾಮಕೃಷ್ಣ ಅವರು ಪುಟ್ಟಪರ್ತಿಯ ಸಾಯಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿ ಹಲವಾರು ಮಹತ್ವದ ಸಂಗತಿಗಳನ್ನು ಹೆಕ್ಕಿಕೊಂಡು ಹೋಗಿದ್ದಾರೆ. ಸತ್ಯ ಸಾಯಿ ಬಾಬಾ ಅವರ ಅಪಾರ ಭಕ್ತಕೋಟಿ ಈ ಚಿತ್ರವನ್ನು ನಿರೀಕ್ಷಿಸುವಂತಾಗಿದೆ. (ಏಜೆನ್ಸೀಸ್)

  English summary
  Tollywood director Kodi Ramakrishna has approached Malayalam superstar Mohanlal to play the role of Puttaparthy Satya Sai Baba. This bio-pic was planned a year ago when the spiritual guru Satya Sai Baba passed away on April 24.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X