For Quick Alerts
  ALLOW NOTIFICATIONS  
  For Daily Alerts

  ದುನಿಯಾ ವಿಜಯ್ ಚಿತ್ರಕ್ಕೆ ನಾಯಕಿಯಾದ 'ಪಾರು' ಖ್ಯಾತಿಯ ಮೋಕ್ಷಿತಾ

  |

  ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಈಗ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸಲಗ ಸಿನಿಮಾದ ಮುಗಿಸಿರುವ ವಿಜಿ ಈಗ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ವಿಜಯ್ ನಿರ್ದೇಶನದ ಮೊದಲ ಸಿನಿಮಾ ಸಲಗ ರಿಲೀಸ್ ಗೆ ಸಿದ್ಧವಾಗಿದೆ. ಈ ಸಿನಿಮಾ ರಿಲೀಸ್ ಗೂ ಮೊದಲೇ ಮತ್ತೊಂದು ಸಿನಿಮಾದಲ್ಲಿ ನಿರತರಾಗಿದ್ದಾರೆ.

  ಅಂದಹಾಗೆ ಈ ಬಾರಿ ವಿಜಯ್ ರಾ ಲವ್ ಸ್ಟೋರಿ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಚಿತ್ರರಂಗಕ್ಕೆ ಹೊಸಬರನ್ನು ಪರಿಚಯಿಸಬೇಕೆಂದು ಕೊಂಡಿದ್ದ ವಿಜಿ ಈಗಾಗಲೇ ನಾಯಕ ಲಕ್ಷ್ಮಣ್ ಅಲಿಯಾನ್ ಲಕ್ಕಿ ಗೋಪಾಲ್ ನನ್ನು ಪರಿಚಯಿಸಿದ್ದಾರೆ. ಇದೀಗ ನಾಯಕಿಯನ್ನು ಪರಿಚಯಿಸಿದ್ದಾರೆ.

  ಸ್ಯಾಂಡಲ್ ವುಡ್ ಗೆ 'ಲಕ್ಕಿ' ನಾಯಕನನ್ನು ಪರಿಚಯಿಸಿದ ನಟ ದುನಿಯಾ ವಿಜಯ್ಸ್ಯಾಂಡಲ್ ವುಡ್ ಗೆ 'ಲಕ್ಕಿ' ನಾಯಕನನ್ನು ಪರಿಚಯಿಸಿದ ನಟ ದುನಿಯಾ ವಿಜಯ್

  ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾದಲ್ಲಿ ಪಾರು ಧಾರಾವಾಹಿ ಖ್ಯಾತಿಯ ನಟಿ ಮೋಕ್ಷಿತಾ ಪೈ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮೂಲಕ ಮೋಕ್ಷಿತಾ ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಬಹುತೇಕ ಹೊಸಬರಿಗೆ ಅವಕಾಶ ಕೊಡಲು ಮುಂದಾಗಿರುವ ದುನಿಯಾ ವಿಜಯ್ ಈ ಸಿನಿಮಾ ಮೂಲಕ ಬಹುತೇಕ ಹೊಸಬರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

  ಲಕ್ಕಿ ಗೋಪಾಲ್ ಗೆ ನಾಯಕಿಯಾಗಿ ನಟಿ ಮೋಕ್ಷಿತಾ ಬಣ್ಣಹಚ್ಚುತ್ತಿದ್ದಾರೆ. ಪಾರು ಧಾರಾವಾಹಿ ಮೂಲಕ ಮೋಡಿ ಮಾಡಿದ್ದ ಮೋಕ್ಷಿತಾ ಸಿನಿಮಾ ಮೂಲಕ ಎಲ್ಲರ ಮನ ಗೆಲ್ಲುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.

  K Manju speaks about Ravi Belegere : ನನ್ನ ಅವರ ಒಡನಾಟನೆ ಬೇರೆ !! | Filmibeat Kannada

  ಇನ್ನೂ ಹೆಸರಿಡದ ಸಿನಿಮಾಗೆ ವಾಸುಕಿ ವೈಭವ್ ಮತ್ತು ಚರಣ್ ರಾಜ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮಾಸ್ತಿ ಮಂಜು ಸಂಭಾಷಣೆ ಚಿತ್ರಕ್ಕಿರಲಿದೆ. ಸದ್ಯ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಸಿನಿಮಾತಂಡ ಸದ್ಯದಲ್ಲೇ ಚಿತ್ರೀಕರಣಕ್ಕೆ ಹೊರಡುವ ಸಾಧ್ಯತೆ ಇದೆ.

  English summary
  Serial Actress Mokshitha Pai makes her silver screen debut with Duniya Vijay Second directorial venture.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X