For Quick Alerts
  ALLOW NOTIFICATIONS  
  For Daily Alerts

  ಮಗಳಿಗಾಗಿ ಕಾರು ಮಾರಾಟಕ್ಕಿಟ್ಟ ನಟಿ ರಾಗಿಣಿ ಪೋಷಕರು

  |

  ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

  ಸೆಪ್ಟೆಂಬರ್ 4 ರಂದು ನಟಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ನಂತರ ರಾಗಿಣಿಯನ್ನು ವಿಚಾರಣೆಗೆ ಕರೆಸಿ ಬಂಧಿಸಿದ್ದರು. ಜಾಮೀನಿಗಾಗಿ ನಟಿ ರಾಗಿಣಿ ಸತತ ಪ್ರಯತ್ನಗಳನ್ನು ಮಾಡುತ್ತಿದ್ದಾರಾದರೂ ಈ ವರೆಗೆ ಜಾಮೀನು ದೊರೆತಿಲ್ಲ. ಜಾಮೀನು ದೊರೆಯುವುದು ಸುಲಭ ಕಾರ್ಯದಂತಿಲ್ಲ.

  ಆದರೆ ರಾಗಿಣಿ ಪೋಷಕರು ಮಗಳನ್ನು ಆದಷ್ಟು ಶೀಘ್ರವಾಗಿ ಜೈಲಿನಿಂದ ಹೊರಗೆ ಕರೆದುಕೊಂಡು ಬರಲು ಹರಸಾಹಸ ಪಡುತ್ತಿದ್ದು, ಕಾನೂನು ಸಮರಕ್ಕೆ ಅವರಿಗೆ ಹಣಕಾಸು ಮುಗ್ಗಟ್ಟು ಎದುರಾಗಿದೆ. ಹಾಗಾಗಿ ಕಾರು ಮಾರಾಟ ಮಾಡುತ್ತಿದ್ದಾರೆ.

  ಯಲಹಂಕದಲ್ಲಿರುವ ಫ್ಲ್ಯಾಟ್ ಮಾರಾಟ

  ಯಲಹಂಕದಲ್ಲಿರುವ ಫ್ಲ್ಯಾಟ್ ಮಾರಾಟ

  ಈ ಮೊದಲು ಯಲಹಂಕದಲ್ಲಿರುವ ಫ್ಲ್ಯಾಟ್ ಅನ್ನು ಮಾರಾಟ ಮಾಡಲು ಯೋಚಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಈಗ ತಮ್ಮ ಎರಡು ಕಾರನ್ನು ಮಾರಾಟ ಮಾಡಿ, ಮುಂದಿನ ಕಾನೂನು ಸಮರಕ್ಕೆ ಹಣಕಾಸು ಹೊಂದಿಸುವ ಯತ್ನದಲ್ಲಿದ್ದಾರೆ.

  ಇನ್ನೊವಾ ಹಾಗೂ ಎಸ್‌ಎಕ್ಸ್ 4 ಕಾರು ಮಾರಾಟ

  ಇನ್ನೊವಾ ಹಾಗೂ ಎಸ್‌ಎಕ್ಸ್ 4 ಕಾರು ಮಾರಾಟ

  ರಾಗಿಣಿ ಓಡಾಡಲು ಬಳಸುತ್ತಿದ್ದ ಬಿಳಿ ಬಣ್ಣದ ಇನ್ನೋವಾ ಕಾರು ಹಾಗೂ ಎಸ್‌ಎಕ್‌4 ಕಾರನ್ನು ರಾಗಿಣಿ ಪೋಷಕರು ಮಾರಾಟ ಮಾಡಲು ನಿರ್ಧರಿಸಿದ್ದು, ತಮ್ಮ ಪರಿಚಯದವರಿಗೆ ಕಾರಿನ ಫೊಟೊಗಳು, ಬೆಲೆ, ತಮಗಿರುವ ತುರ್ತು ಪರಿಸ್ಥಿತಿಯನ್ನು ವಿವರಿಸಿ ಸಂದೇಶ ಕಳಿಸುತ್ತಿದ್ದಾರೆ ಎನ್ನಲಾಗುತ್ತಿದೆ.

  ಇನ್ನೊವಾ ಕಾರಿಗೆ 9 ಲಕ್ಷ ಬೆಲೆ ನಿಗದಿ

  ಇನ್ನೊವಾ ಕಾರಿಗೆ 9 ಲಕ್ಷ ಬೆಲೆ ನಿಗದಿ

  ರಾಗಿಣಿ ಬಳಸುತ್ತಿದ್ದ ಇನ್ನೊವಾ ಕಾರಿಗೆ 9 ಲಕ್ಷ, ಎಸ್‌ಎಕ್ಸ್ 4 ಕಾರಿಗೆ 4 ಲಕ್ಷ ಬೆಲೆ ನಿಗದಿ ಪಡಿಸಿದ್ದಾರೆ. ಹಣದ ಅವಶ್ಯಕತೆ ತುರ್ತಾಗಿ ಇರುವ ಕಾರಣ ಕಡಿಮೆ ಬೆಲೆಗೆ ಕಾರನ್ನು ಮಾರಲು ಮುಂದಾಗಿದ್ದಾರೆ ರಾಗಿಣಿ ಪೋಷಕರು.

  K Manju speaks about Ravi Belegere : ನನ್ನ ಅವರ ಒಡನಾಟನೆ ಬೇರೆ !! | Filmibeat Kannada
  ಜಾಮೀನು ಅರ್ಜಿ ವಜಾ ಮಾಡಿರುವ ಹೈಕೋರ್ಟ್

  ಜಾಮೀನು ಅರ್ಜಿ ವಜಾ ಮಾಡಿರುವ ಹೈಕೋರ್ಟ್

  ನಟಿ ರಾಗಿಣಿ, ಸಂಜನಾ ಗಲ್ರಾನಿ ಸೇರಿದಂತೆ ಇನ್ನೂ ಹಲವು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೆಲವು ದಿನಗಳ ಹಿಂದಷ್ಟೆ ಹೈಕೋರ್ಟ್ ವಜಾ ಮಾಡಿದೆ. ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ಗೆ ಹೋಗುವ ಅವಕಾಶ ಇದೆ.

  English summary
  Actress Ragini's parents selling their cars to get money for legal fights and their daughter out of the jail.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X