ಮಾನ್ಸೂನ್ ರಾಗ ಪೇಯ್ಡ್ ಪ್ರೀಮಿಯರ್ ಶೋ; ಹೇಗಿದೆ ಬುಕಿಂಗ್ಸ್?
ತೆಲುಗಿನ ಕೇರ್ ಆಫ್ ಕಾಂಚರಪಾಲೆಂ ಎಂಬ ಸೂಪರ್ ಹಿಟ್ ಚಿತ್ರದ ರಿಮೇಕ್ ಎನ್ನಲಾಗುತ್ತಿರುವ ಮಾನ್ಸೂನ್ ರಾಗ ಚಿತ್ರ ನಾಳೆ ( ಸೆಪ್ಟೆಂಬರ್ 16 ) ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲು ತಯಾರಾಗಿದೆ. ಇದಕ್ಕೂ ಒಂದು ದಿನ ಮುನ್ನ ಚಿತ್ರತಂಡ ಬೆಂಗಳೂರು ಹಾಗೂ ಮೈಸೂರು ನಗರಗಳಲ್ಲಿನ ಆಯ್ದ ಚಿತ್ರಮಂದಿರಗಳಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜಿಸಿದೆ.
ಬೆಂಗಳೂರಿನ ಡಾ ರಾಜ್ ಕುಮಾರ್ ರಸ್ತೆಯಲ್ಲಿರುವ ಒರಾಯನ್ ಮಾಲ್‌ನ ಪಿವಿಆರ್ ಚಿತ್ರಮಂದಿರದಲ್ಲಿ ಇಂದು ( ಸೆಪ್ಟೆಂಬರ್ 15 ) ಸಂಜೆ 7 ಗಂಟೆಗೆ ಹಾಗೂ ಜಿ ಟಿ ವರ್ಲ್ಡ್ ಮಾಲ್‌ನ ಪಿವಿಆರ್ ಪರದೆಯಲ್ಲಿ ಇಂದು ( ಸೆಪ್ಟೆಂಬರ್ 15 ) ಸಂಜೆ 7.20ಕ್ಕೆ ಮಾನ್ಸೂನ್ ರಾಗ ಚಿತ್ರದ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಮೈಸೂರಿನ ಡಿಆರ್ ಸಿ ಸಿನಿಮಾದಲ್ಲಿಯೂ ಇಂದು ಸಂಜೆ 7.15ಕ್ಕೆ ಮಾನ್ಸೂನ್ ರಾಗ ಪೇಯ್ಡ್ ಪ್ರೀಮಿಯರ್ ಶೋ ಆರಂಭವಾಗಲಿದೆ.
ಇನ್ನು ಈ ಮೂರೂ ಪೇಯ್ಡ್ ಪ್ರೀಮಿಯರ್ ಶೋಗಳ ಟಿಕೆಟ್‌ಗಳೂ ಸಹ ವೇಗವಾಗಿ ಮಾರಾಟವಾಗುತ್ತಿದ್ದು, ಸಂಜೆಯಷ್ಟರಲ್ಲಿ ಸೋಲ್ಡ್ ಔಟ್ ಆಗಲಿದೆ. ಚಿತ್ರತಂಡ ಮೊನ್ನೆಯಷ್ಟೇ ಅದ್ಧೂರಿಯಾಗಿ ಪ್ರೀ ರಿಲೀಸ್ ಇವೆಂಟ್ ಆಯೋಜನೆ ಮಾಡಿತ್ತು ಹಾಗೂ ಲೋಕಲ್ ಬಾರುಗಳಿಗೆ ಭೇಟಿ ನೀಡುವ ಮೂಲಕ ನಟ ಧನಂಜಯ್ ಭಿನ್ನವಾಗಿ ಚಿತ್ರದ ಪ್ರಚಾರವನ್ನು ಮಾಡಿದ್ದರು.

ಚಿತ್ರದಲ್ಲಿ ನಟ ಧನಂಜಯ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದರೆ, ನಟಿ ರಚಿತಾ ರಾಮ್ ವೇಷ್ಯೆ ಪಾತ್ರದಲ್ಲಿ ಅಭಿನಯಿಸಿದ್ದಾರೆ, ಯಶಾ ಶಿವಕುಮಾರ್ ವಿದ್ಯಾರ್ಥಿನಿ ಹಾಗೂ ನೃತ್ಯಗಾರ್ತಿಯಾಗಿ ಕಾಣಿಸಿಕೊಂಡಿದ್ದು, ಅಚ್ಯುತ್ ಕುಮಾರ್ ಹಾಗೂ ಸುಹಾಸಿನಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











