ಡಾ.ರಾಜಕುಮಾರ್ ಅಕಾಡೆಮಿಗೆ ಕೆಪಿಎಸ್‌ಸಿ ಪರೀಕ್ಷೆಯಲ್ಲೂ ಮೇಲುಗೈ: ಶುಭ ಕೋರಿದ ರಾಘಣ್ಣ!

ರಾಘವೇಂದ್ರ ರಾಜ್‌ಕುಮಾರ್‌ ಸ್ಪರ್ಧಾತ್ಮಕ ಪರೀಕ್ಷೆಗೆ ಮುಂದಾಗಿರೋ ಅಭ್ಯರ್ಥಿಗಳಿಗೆ ಕೋಚಿಂಗ್ ನೀಡಲು ಅಕಾಡೆಮಿ ಕಟ್ಟಿರೋದು ಗೊತ್ತೇ ಇದೆ. ಡಾ.ರಾಜ್‌ಕುಮಾರ್ ಅಕಾಡೆಮಿ ಈಗಾಗಲೇ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುತ್ತಿದೆ.

ಈಗಾಗಲೇ ಐಎಎಸ್ ಹಾಗೂ ಕೆಪಿಎಸ್‌ಸಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡುತ್ತಿದೆ. ಈಗಾಗಲೇ ಈ ಅಕಾಡೆಮಿಯಲ್ಲಿ ತರಬೇತಿ ಪಡೆದ ಹಲವು ಅಭ್ಯರ್ಥಿಗಳು ಐಎಎಸ್‌ ಅನ್ನು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಬಾರಿ ಕೆಪಿಎಸ್‌ಸಿಯಲ್ಲೂ ಡಾ.ರಾಜ್‌ಕುಮಾರ್ ಅಕಾಡೆಮಿಯಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಸಂಬಂಧ ರಾಘವೇಂದ್ರ ರಾಜ್‌ಕುಮಾರ್ ಹಾಗೂ ದಂಪತಿ ಸಾಧನೆ ಮಾಡಿ ಅಭ್ಯರ್ಥಿಗಳಿಗೆ ಶುಭ ಕೋರಿದ್ದಾರೆ.

ಕರ್ನಾಟಕ ಲೋಕ ಸೇವಾ ಆಯೋಗವು ಸೋಮವಾರ (ಸೆಪ್ಟೆಂಬರ್ 6) ರ ಸಂಜೆ 106 ಗ್ರೂಪ್ ಎ ಮತ್ತು ಗ್ರೂಪ್ ಬಿ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿತ್ತು. 2017-2018 ರ ಸಾಲಿನ ಈ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಯನ್ನು ಆಗಸ್ಟ್ 24, 2020ಯಂದು ಪರೀಕ್ಷೆ ನಡೆಸಿದ್ದು, ಮೇನ್ಸ್ ಪರೀಕ್ಷೆಯನ್ನು 2021 ಫೆಬ್ರವರಿಯಲ್ಲಿ ನಡೆಸಿತ್ತು. ಅದರ ಫಲಿತಾಂಶವೇ ಈಗ ಪ್ರಕಟಗೊಂಡಿದೆ.

 More Than 75 Candidates From Dr Rajkumar Academy Selected For KPSC

ಮೇನ್ಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಬಳಿಕ ಸಂದರ್ಶನಕ್ಕೆ ಸುಮಾರು 318 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಇವರಲ್ಲಿ ಸುಮಾರು 200ಕ್ಕೂ ಅಧಿಕ ಅಭ್ಯರ್ಥಿಗಳು ಡಾ. ರಾಜ್‌ಕುಮಾರ್ ಅಕಾಡೆಮಿಯಲ್ಲಿ ವಿವಿಧ ಕೋರ್ಸುಗಳ ಪಡೆದೆ ವಿದ್ಯಾರ್ಥಿಗಳಾಗಿದ್ದರು.

 More Than 75 Candidates From Dr Rajkumar Academy Selected For KPSC

ಸಂದರ್ಶನವೂ ಮುಗಿದ ಬಳಿಕ ಅಂತಿಮ ಫಲಿತಾಂಶದಲ್ಲಿ ಡಾ. ರಾಜ್‌ಕುಮಾರ್ ಅಕಾಡೆಮಿಯಿಂದ ಸುಮಾರು 75ಕ್ಕೂ ಅಧಿಕ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಡಾ.ರಾಜ್‌ಕುಮಾರ್ ಅಕಾಡೆಮಿ ಶೇಕಡ 70ಕ್ಕಿಂತ ಹೆಚ್ಚಿನ ಫಲಿತಾಂಶವನ್ನು ದಾಖಲಿಸಿದ್ದು, ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ.

More from Filmibeat

English summary
More Than 75 Candidates From Dr Rajkumar Academy Selected For KPSC, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X