For Quick Alerts
  ALLOW NOTIFICATIONS  
  For Daily Alerts

  ಮಂಡ್ಯದಲ್ಲಿ ಸತೀಶನ ಲವ್ ಒಪ್ಕೊಂಡ್ ಬಿಟ್ಲು ಕಣ್ಲಾ

  By ಜೀವನರಸಿಕ
  |

  ಈ ಸಿನಿಮಾದ ಮೊದಲ ಝಲಕ್ ಬಿಟ್ಟಾಗಲೇ ಪ್ರೇಕ್ಷಕರು ಥ್ರಿಲ್ಲಾಗಿದ್ದರು. ಸಿನಿಮಾದ ನಿರ್ದೇಶಕರು ಹೊಸಬರು, ನಾಯಕ ನಟ ನಟಿ ಕೂಡ ಅಂತಹಾ ಅನುಭವಿಗಳೇನಲ್ಲ. ಲಿರಿಕ್ಸ್ ರೈಟರ್ ಅರಸು ಅಂತಾರೆ ಮೊದಲ ಬಾರಿಗೆ ಡೈರೆಕ್ಷನ್ ಗೆ ಇಳಿದಿದ್ದಾರೆ. ಚಿತ್ರದ ಮೊದಲ ಲುಕ್ ನಲ್ಲಿ ದಾರಿಯಲ್ಲಿ ಸಿಕ್ಕ ಸಿಕ್ಕವರನ್ನ ಅವರವರ ಪ್ರೀತಿಯ ಬಗ್ಗೆ ಕೇಳಿದ್ರು.

  ಒಬ್ಬೊಬ್ಬರ ಪ್ರೀತಿ ಒಂದೊಂದು ರೀತಿ. ಕೆಲವರು ತೆಗಳಿದ್ರೆ ಕೆಲವರು ಹೊಗಳಿದ್ರು ಮತ್ತೊಂದಿಷ್ಟು ಜನ ಪ್ರೀತಿ ಮಾಡ್ಬೇಡಿ ಅನ್ನೋ ಎಚ್ಚರಿಕೆ ನೀಡಿದ್ರು. ಪ್ರೀತಿಯ ಬಗ್ಗೆ ಅರಸು ಅಂತಾರೆ ಸಿನಿಮಾ ಮಾಡೋಕೂ ಮೊದ್ಲು ಪ್ರೀತಿಯ ಬಗ್ಗೆ ಸುಂದರವಾದ ಸಾಲುಗಳನ್ನ ಹಲವು ಸಿನಿಮಾಗಳಿಗೆ ಬರೆದಿದ್ದಾರೆ. 'ಡ್ರಾಮಾ'ದ ಜೋಡಿ ಸತೀಶ್-ಸಿಂಧುವನ್ನ ಮತ್ತೆ ಜೋಡಿ ಮಾಡಿದ್ದಾರೆ. [ಸತೀಶನ ಲವ್ ಇನ್ ಮಂಡ್ಯ, ಇದು ಕರ್ಣನ್ ಕಥೆ]

  'ಲವ್ ಇನ್ ಮಂಡ್ಯ' ಸಿನಿಮಾ ಹಾಡುಗಳು ಮಾರ್ಕೆಟ್ ನಲ್ಲಿದ್ದು ಭರ್ಜರಿ ಸೌಂಡ್ ಮಾಡ್ತಿವೆ. ಅನೂಪ್ ಸೀಳಿನ್ ಸಂಗೀತದಲ್ಲಿ ಆರು ಹಾಡುಗಳು ಸುಂದರವಾಗಿ ಮೂಡಿ ಬಂದಿವೆ. ಲವ್ ಇನ್ ಮಂಡ್ಯ ತಂಡ ಹೊಸಬರೇ ಆಗಿದ್ರೂ ಗಮನ ಸೆಳೆಯೋ ಅಂಶಗಳು ಹಲವಿವೆ. ಅದೇನು ಅಂತ ಈ ಸ್ಲೈಡ್ ನಲ್ಲಿದೆ ಮಿಸ್ ಮಾಡ್ದೇ ನೋಡಿ.

  30 ವರ್ಷಗಳ ಹಿಂದಿನ ಕ್ಯಾಮೆರಾ ಲೆನ್ಸ್

  30 ವರ್ಷಗಳ ಹಿಂದಿನ ಕ್ಯಾಮೆರಾ ಲೆನ್ಸ್

  ಚಿತ್ರತಂಡ 90ರ ದಶಕದ ಹಾಡೊಂದನ್ನ ಚಿತ್ರದಲ್ಲಿ ಚಿತ್ರೀಕರಿಸಿದೆ. ಇದರ ಎಫೆಕ್ಟ್ ಗಾಗಿ ಹಳೆಯ ಕಾಲದ ಕ್ಯಾಮೆರಾಮನ್ ಗಳ ಮನೆಯನ್ನ ತಡಕಾಡಿ ಅವತ್ತು ಕ್ಯಾಮೆರಾಗೆ ಬಳಸುತ್ತಿದ್ದ ಲೆನ್ಸ್ ಗಳನ್ನ ಬಳಸಿ ಶೂಟ್ ಮಾಡಲಾಗಿದೆ. ಹಳೆಯ ಕಾಲದ ರೆಟ್ರೋ ಶೈಲಿಯ ಸಾಂಗ್ ಫೀಲ್ ನಿಮಗೆ ಇಲ್ಲೂ ಸಿಗೋದು ಖಂಡಿತ.

  ಮಂಡ್ಯದ ಗಂಡು ಅಂಬಿ ಝಲಕ್

  ಮಂಡ್ಯದ ಗಂಡು ಅಂಬಿ ಝಲಕ್

  ಚಿತ್ರದ ಹಾಡೊಂದರಲ್ಲಿ ಮಂಡ್ಯದ ಗಂಡು ಅಂಬಿಯ 'ಮಂಡ್ಯದ ಗಂಡು' ಹಾಡಿನ ರೀತಿಯ ಸೆಟ್ ಹಾಕಿ ನೀನಾಸಂ ಸತೀಶ್ ಕೂಡ ಸೈಕಲ್ ಹತ್ತಿ ಅಂಬಿಯ ತರಹಾನೇ ಮಂಡ್ಯದ ಗಂಡು ಅಂತ ಸೈಕಲ್ ತುಳಿಯೋದು ಚಿತ್ರಪ್ರೇಮಿಗಳಿಗೆ ಥ್ರಿಲ್ ಕೊಡಲಿದೆ. ಇನ್ನು ಎಲ್ಲಾದ್ರೂ ಗ್ಯಾಪಲ್ಲಿ ಹಳೆಯ ಅಂಬಿ ಡೈಲಾಗ್ ಜೊತೆ ಎಂಟ್ರಿಕೊಟ್ರೂ ಅಚ್ಚರಿಯಿಲ್ಲ.

  ಬಪ್ಪಿ ಲಹಿರಿ ಕರೆಂಟ್ ಸಾಂಗು

  ಬಪ್ಪಿ ಲಹಿರಿ ಕರೆಂಟ್ ಸಾಂಗು

  ಬಪ್ಪಿ ಲಹಿರಿ ಹಾಡೋದನ್ನ ಕೇಳೋದೇ ಒಂಥರಾ ಮಜಾ. ಈಗ ಬಪ್ಪಿ ಕನ್ನಡದಲ್ಲಿ ಕರೆಂಟು ಹೋದ ಟೈಮಲ್ಲಿ ಅನ್ನೋ ಕರೆಂಟ್ ಶಾಕ್ ಕೊಡೋ ಹಾಡನ್ನ ಹಾಡಿದ್ದಾರೆ. ಇದರಲ್ಲಿ ಸಿಂಧು-ಸತೀಶ್ ರೋಮ್ಯಾನ್ ಪ್ರೇಕ್ಷಕರಿಗೆ ಕಿಕ್ ಕೊಡಲಿದೆ.

  ಒಪ್ಕೊಂಬುಟ್ಲು ಕಣ್ಲಾ ಸೂಪರ್ ಹಿಟ್

  ಒಪ್ಕೊಂಬುಟ್ಲು ಕಣ್ಲಾ ಸೂಪರ್ ಹಿಟ್

  ಚಿತ್ರದಲ್ಲಿ ಸುಂದರವಾಗಿ ಮೂಡಿ ಬಂದಿರೋ "ಒಪ್ಕೊಂಬುಟ್ಲು ಕಣ್ಲಾ..." ಹಾಡು ಈಗಾಗ್ಲೇ ಪ್ರೇಕ್ಷಕರ ಎದೆಬಡಿತ ಹೆಚ್ಚಿಸ್ತಿದೆ. ಅನೂಪ್ ಸಂಗೀತಕ್ಕೆ ಅರಸು ಅಂತಾರೆ ಲಿರಿಕ್ಸ್ ಹದವಾಗಿ ಬೆರೆತಿದೆ.

  ಮಂಡ್ಯ ಜೋಡಿಯ ಚಿತ್ರ

  ಮಂಡ್ಯ ಜೋಡಿಯ ಚಿತ್ರ

  ಲವ್ ಇನ್ ಮಂಡ್ಯ ಪ್ಯೂರ್ ಮಂಡ್ಯ ಮಣ್ಣಿನ ಚಿತ್ರ. ಇದಕ್ಕೆ ಕಾರಣ ಚಿತ್ರದ ನಾಯಕ ಮತ್ತು ನಿರ್ದೇಶಕ ಇಬ್ಬರೂ ಮಂಡ್ಯದವರೇ ಆಗಿರೋದು. ಚಿತ್ರದ ನಾಯಕ ಸತೀಶ್ ಮತ್ತು ನಿರ್ದೇಶಕ ಅರಸು ಅಂತಾರೆ ಇಬ್ಬರೂ ಮಂಡ್ಯದವರೇ ಆಗಿರೋದ್ರಿಂದ ಮಂಡ್ಯ ಸಿನಿಮಾ ಅನ್ನೋದ್ರಲ್ಲಿ ಅನುಮಾನವಿಲ್ಲ. ಇನ್ನು ಟೈಟಲ್ಲೇ ಲವ್ ಇನ್ ಮಂಡ್ಯ.

  ಆರೂ ಹಾಡುಗಳ ಅರಸು

  ಆರೂ ಹಾಡುಗಳ ಅರಸು

  ಚಿತ್ರದಲ್ಲಿ ಆರು ಹಾಡುಗಳಿದ್ದು ಅಷ್ಟೂ ಹಾಡುಗಳನ್ನ ನಿರ್ದೇಶಕ ಕಮ್ ಲಿರಿಕ್ಸ್ ರೈಟರ್ ಅರಸು ಅಂತಾರೆಯವರೇ ಬರೆದಿದ್ದಾರೆ. ಇನ್ನು ಚಿತ್ರದಲ್ಲಿ ಸುಜ್ಙಾನ್ ಕ್ಯಾಮೆರಾ ಕೈಚಳಕ ನಿಮಗೆ ಮೋಡಿ ಮಾಡಲಿದೆ.

  English summary
  sathish ninasam and Sindhu Lokanath lead Kannada movie 'Love in Mandya' highlights. The movie directed by Arasu Anthare and Produced by Uday K Mehtha. The movie songs became very popular on FM channels. [Photo Courtesy: Prathik Jain, Tumkur]

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X