For Quick Alerts
  ALLOW NOTIFICATIONS  
  For Daily Alerts

  ಈ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸೌತ್ ಸ್ಟಾರ್ಸ್ ಇವರೇ

  |

  ಗೂಗಲ್ ಇಂಡಿಯ ಈ ವರ್ಷದ ಅತಿ ಹೆಚ್ಚು ಸರ್ಚ್ ಆದ ನಟರು, ನಟಿಯರು, ಹಾಡುಗಳು ಮತ್ತು ಸಿನಿಮಾಗಳು ಸೇರಿದಂತೆ ಮನರಂಜನಾ ಕ್ಷೇತ್ರಕ್ಕೆ ಸಂಬಂದಿಸಿದಂತೆ ಟಾಪ್ ಟ್ರೆಂಡಿಂಗ್ ಲಿಸ್ಟ್ ಅನ್ನು ರಿಲೀಸ್ ಮಾಡಿದೆ. ಮನರಂಜನೆ ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಟಾಪ್ ಟ್ರೆಂಡಿಂಗ್ ಪಟ್ಟಿ ಬಹಿರಂಗಪಡಿಸಿದೆ.

  ಈ ಪಟ್ಟಿಯಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಸರ್ಚ್ ಆದ ಕಲಾವಿದರ ಲಿಸ್ಟ್ ಕೂಡ ರಿವೀಲ್ ಆಗಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಕನ್ನಡದ ಏಕೈಕ ನಟಿ ರಶ್ಮಿಕಾ ಮಂದಣ್ಣ. ಅಂದ್ಹಾಗೆ ಟಾಪ್ ಟ್ರೆಂಡಿಂಗ್ ಸೌತ್ ಸ್ಟಾರ್ಸ್ ಲಿಸ್ಟ್ ಇಲ್ಲಿದೆ.

  2019: ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸೌತ್ ಸಿನಿಮಾ ಯಾವುದು?2019: ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸೌತ್ ಸಿನಿಮಾ ಯಾವುದು?

  ಮೊದಲ ಸ್ಥಾನವನ್ನು ನಟ ವಿಜಯ್ ದೇವರಕೊಂಡ ಪಡೆದುಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ನಟಿ ರಶ್ಮಿಕಾ ಮಂದಣ್ಣ, ವೆಂಕಟೇಶ್, ಅರ್ಜುನ್ ರೆಡ್ಡಿ ನಾಯಕಿ ಶಾಲಿಪಾಂಡೆ ಮತ್ತು ಅಕ್ಕಿನೇನಿ ನಾಗಾರ್ಜುನ್ ಇದ್ದಾರೆ.

  ಕಳೆದ ಎರಡು ವರ್ಷಗಳಿಂದ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ಸ್ಟಾರ್ಸ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ. ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ರಶ್ಮಿಕಾ ಟಾಪ್ ಎರಡೇ ಸ್ಥಾನದಲ್ಲಿ ಇದ್ದಾರೆ. ಈ ಪಟ್ಟಿಯಲ್ಲಿ ಬಹುತೇಕ ತೆಲುಗು ಕಲಾವಿದರೆ ಸ್ಥಾನ ಪಡಿದ್ದಾರೆ.

  ಇನ್ನು ಹೆಚ್ಚು ಸರ್ಚ್ ಆದ ಸಿನಿಮಾಗಳ ಲಿಸ್ಟ್ ನಲ್ಲಿ ಕನ್ನಡ ಏಕೈಕ ಸಿನಿಮಾ ಸ್ಥಾನ ಪೆಡೆದುಕೊಂಡಿದೆ. ಹೌದು. ರಾಕಿ ಭಾಯ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಟಾಪ್ ಟ್ರೆಂಡಿಂಗ್ ನಲ್ಲಿ ಸಿನಿಮಾಗಳ ಲಿಸ್ಟ್ ನಲ್ಲಿ ಸ್ಥಾನ ಪಡೆದುಕೊಂಡಿದೆ.

  English summary
  Who is most searched south film stars on google in 2019.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X