»   » 'ಅಮ್ಮನ' ಆರಾಧನೆಗಾಗಿ ಈ 12 ಹಾಡುಗಳನ್ನ ಮಿಸ್ ಮಾಡದೆ ಕೇಳಿ.!

'ಅಮ್ಮನ' ಆರಾಧನೆಗಾಗಿ ಈ 12 ಹಾಡುಗಳನ್ನ ಮಿಸ್ ಮಾಡದೆ ಕೇಳಿ.!

Posted By:
Subscribe to Filmibeat Kannada

ಮೇ 14, 'ಅಮ್ಮಂದಿರ ದಿನ'....ಸಮಸ್ತ ಓದುಗರಿಗೂ ಅಮ್ಮಂದಿರ ದಿನದ ಶುಭಾಶಯಗಳು...''ಅಮ್ಮನ ಬಗ್ಗೆ ಎಷ್ಟು ಮಾತನಾಡಿದರೂ, ಎಷ್ಟು ಹೇಳಿದರೂ, ಎಷ್ಟು ಬರೆದರೂ ಕಮ್ಮಿ. ಯಾಕಂದ್ರೆ 'ಅಮ್ಮ' ಎಂಬ ಪದಕ್ಕೆ ಇರುವ ಶಕ್ತಿಯೇ ಅಂತದ್ದು''

ಪ್ರಪಂಚದಲ್ಲಿ ಕೆಟ್ಟ ತಂದೆ ಅಥವಾ ಕೆಟ್ಟ ಮಕ್ಕಳು ಇರ್ತಾರೆ. ಆದ್ರೆ, ಕೆಟ್ಟ ತಾಯಿ ಇರುವುದಿಲ್ಲ. ಇದೊಂದು ಸಾಕಲ್ವಾ ತಾಯಿಯ ಮಹತ್ವ ತಿಳಿಯುವುದಕ್ಕೆ. ನಿಷ್ಕಳಂಕ, ನಿಷ್ಕಲ್ಮಷ ಅಮ್ಮನ ಪ್ರೀತಿಗೆ ಬೆಲೆಕಟ್ಟಲಾದೀತೇ?[ಮದರ್ಸ್ ಡೇ ವಿಶೇಷ: ಚಿತ್ರರಂಗದ ಸ್ಟಾರ್ ತಾಯಿ ಮಕ್ಕಳು]

ಅಮ್ಮನ ಆರಾಧನೆಯಲ್ಲಿ ಕನ್ನಡ ಚಿತ್ರರಂಗ ಕೂಡ ಹಿಂದೆ ಬಿದ್ದಿಲ್ಲ. ತಾಯಿಯ ಬಗ್ಗೆ ಅದೆಷ್ಟೋ ಚಿತ್ರಗಳು ಬಂದಿವೆ, ಅದೆಷ್ಟೋ ಹಾಡುಗಳೂ ಇವೆ. ಅಮ್ಮ ಎಂದಾಕ್ಷಣ ಕೆಲವು ಹಾಡುಗಳನ್ನು ಇದ್ದಕ್ಕಿಂದ್ದಂತೆ ಶುರು ಮಾಡ್ತಾರೆ. ಅಂತಹ ಕೆಲವು ಹಾಡುಗಳನ್ನು ಅಮ್ಮನ ದಿನದಂದು ನಿಮ್ಮ ಮುಂದೆ ಇಟ್ಟಿದ್ದಿವಿ. ಮುಂದೆ ನೋಡಿ....

ಅಮ್ಮ ಎಂದರೇ ಏನೋ ಹರುಷವೂ......

ಚಿ.ಉದಯಶಂಕರ್ ಅವರು ಬರೆದಿರುವ ''ಅಮ್ಮ ಎಂದರೇ ಏನೋ ಹರುಷವೂ....'' ಹಾಡನ್ನ ಕೇಳುತ್ತಿದ್ದರೇ ಸಂತೋಷಕ್ಕೆ ಪಾರವೇ ಇಲ್ಲ. ಡಾ.ವಿಷ್ಣುವರ್ಧನ್, ದ್ವಾರಕೀಶ್, ಲೀಲಾವತಿ ಪ್ರಮುಖ ಭೂಮಿಕೆಯಲ್ಲಿರುವ 'ಕಳ್ಳ ಕುಳ್ಳ' ಚಿತ್ರದ ಸೂಪರ್ ಹಿಟ್ ಗೀತೆ ಇದು.[ಈ ಹಾಡು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ]

ಅಮ್ಮಾ ಊರು ಏನೇ, ನೀನು ನನ್ನ ದೇವರು.....'

ರವಿಚಂದ್ರನ್ ಅಭಿನಯದ 'ಅಣ್ಣಯ್ಯ' ಚಿತ್ರದ ''ಅಮ್ಮಾ ಊರು ಏನೇ, ನೀನು ನನ್ನ ದೇವರು......'' ಅಮ್ಮನ ಮೇಲಿನ ಪ್ರೀತಿ ಹೇಗಿರುತ್ತೆ ಎಂಬುದಕ್ಕೆ ಸಾಕ್ಷಿ. ಹಂಸಲೇಖ ಅವರು ಈ ಹಾಡನ್ನ ರಚಿಸಿ ಸಂಗೀತ ನೀಡಿದ್ದರು.[ಈ ಹಾಡು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ]

ಕೈ ತುತ್ತು ಕೊಟ್ಟೋಳೆ....ಮದರ್ ಇಂಡಿಯಾ..

''ಕೈತುತ್ತು ಕೊಟ್ಟೋಳೆ ಐ ಲವ್ ಯು ಮೈ ಮದರ್ ಇಂಡಿಯಾ.....'' ಈ ಹಾಡಿನಲ್ಲಿ ಟೈಗರ್ ಪ್ರಭಾಕರ್ ಮತ್ತು ಪಂಡರೀಭಾಯಿ ಅವರನ್ನ ನೋಡುವುದೇ ಒಂದು ಖುಷಿ. ಅಂದ್ಹಾಗೆ, ಈ ಹಾಡು 'ಕಲಿಯುಗ ಭೀಮ' ಚಿತ್ರದ್ದು. ಹಂಸಲೇಖ ಅವರು ಈ ಹಾಡನ್ನ ಬರೆದು, ಸಂಗೀತ ನೀಡಿದ್ದರು.[ಈ ಹಾಡು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ]

ಅಮ್ಮ ಎನ್ನಲು ಕೋಟಿ ಪುಣ್ಯವೋ.....

ಡಾ.ವಿಷ್ಣುವರ್ಧನ್ ಹಾಗೂ ಪಂಡರೀಬಾಯಿ ಅಭಿನಯದ ಕುಂತಿ ಪುತ್ರದ ''ಅಮ್ಮ ಎನ್ನಲು ಕೋಟಿ ಪುಣ್ಯವೋ.....'' ಎಲ್ಲ ತಾಯಂದಿರಿಗೂ ಅರ್ಪಿಸುವಂತಹ ಹಾಡು.[ಈ ಹಾಡು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ]

ಕಣ್ಣಿಗೆ ಕಾಣೋ ದೇವರು ಎಂದರೇ ಅಮ್ಮ.....

ಮಾಸ್ಟರ್ ಪುನೀತ್ ರಾಜ್ ಕುಮಾರ್ ಹಾಗೂ ಡಾ ರಾಜ್ ಕುಮಾರ್ ಅಭಿನಯದಲ್ಲಿ ಮೂಡಿ ಬಂದ ಸಿನಿಮಾ 'ಯಾರಿವನು'. ಈ ಚಿತ್ರದಲ್ಲಿ ಬರುವ ''ಕಣ್ಣಿಗೆ ಕಾಣೋ ದೇವರು ಎಂದರೇ ಅಮ್ಮ.....'' ಹಾಡಿನಲ್ಲಿ ತಾಯಿಯನ್ನ ದೇವರಿಗೆ ಹೋಲಿಸಿ ಹಾಡು ರಚಿಸಲಾಗಿದೆ. ಚಿ.ಉದಯ ಶಂಕರ್ ಅವರು ಸಾಹಿತ್ಯ ಬರೆದಿದ್ದು, ರಾಜನ್ ನಾಗೇಂದ್ರ ಸಂಗೀತ ನೀಡಿದ್ದಾರೆ. ಸ್ವತಃ ಪುನೀತ್ ರಾಜ್ ಕುಮಾರ್ ಈ ಹಾಡನ್ನ ಹಾಡಿದ್ದಾರೆ.[ಈ ಹಾಡು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ]

ಅಮ್ಮಾ ಅಮ್ಮಾ ಎನ್ನುವ ಮಾತು......

''ಅಮ್ಮಾ ಅಮ್ಮಾ ಎನ್ನುವ ಮಾತು ಬಂತು ಎಲ್ಲಿಂದ......'' ಡಾ.ವಿಷ್ಣುವರ್ಧನ್, ಊರ್ವಶಿ ಬೇಬಿ ಶಾಲಿನಿ ಅಭಿನಯದ 'ಈ ಜೀವ ನಿನಗಾಗಿ' ಚಿತ್ರದ ಸೂಪರ್ ಹಿಟ್ ಗೀತೆ.[ಈ ಹಾಡು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ]

ತುತ್ತು ಕೊಟ್ಟೋಳ ಮರಿಬೇಡ.....

'ತುತ್ತಾ ಮುತ್ತಾ' ಈ ಚಿತ್ರದ ''ಮುತ್ತು ಕೊಡೋವಳು ಬಂದಾಗ ತುತ್ತು ಕೊಟ್ಟೋಳಾ ಮರಿಬೇಡ.....' ಹಾಡು ಪ್ರತಿಯೊಬ್ಬ ಮಗನನ್ನ ಕಾಡುವ ಸಾಲುಗಳು. ರಮೇಶ್ ಅರವಿಂದ್, ಕಸ್ತೂರಿ, ಪ್ರೇಮಾ ಅಭಿನಯಿಸಿದ್ದರು. ಹಂಸಲೇಖ ಅವರು ಈ ಹಾಡನ್ನ ರಚಿಸಿದ್ದರು.[ಈ ಹಾಡು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ]

ಅಮ್ಮಾ ಅಮ್ಮಾ.....

ಅಮ್ಮಾ ಎಂದಾಕ್ಷಣ ಮೊದಲು ಬಹುತೇಕರಿಗೆ ನೆನಪಾಗುವುದು ಡ್ಯಾನ್ಸ್ ರಾಜಾ ಡ್ಯಾನ್ಸ್ ಚಿತ್ರದ 'ಅಮ್ಮಾ ಅಮ್ಮಾ.....'' ಹಾಡು. ವಿನೋದ್ ರಾಜ್ ಅಭಿನಯಿಸಿದ್ದ ಈ ಹಾಡನ್ನ ಚಿ.ಉದಯಶಂಕರ್ ರಚಿಸಿದ್ದು, ಎಸ್.ಪಿ ಬಾಲಸುಬ್ರಮಣ್ಯಂ ದ್ವನಿಯಲ್ಲಿ ಮೂಡಿಬಂದಿತ್ತು.[ಈ ಹಾಡು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ]

ಬೇಡುವನು ವರವನು......

ಜೋಗಿ ಚಿತ್ರದ ''ಬೇಡುವನು ವರವನು ಕೊಡು ತಾಯಿ ಜನ್ಮವನು......'' ಹಾಡು ಆಲ್ ಟೈಮ್ ಸೂಪರ್ ಹಿಟ್ ಗೀತೆ. ತಾಯಿ-ಮಗ ದೂರುವಾದಾಗ ಮೂಡಿ ಬರುವ ಈ ಹಾಡು ರೋಮಾಂಚನವಾಗಿದೆ. ನಿರ್ದೇಶಕ ಪ್ರೇಮ್ ಈ ಹಾಡನ್ನ ರಚಿಸಿದ್ದು, ಗುರುಕಿರಣ್ ಸಂಗೀತ ನಿರ್ದೇಶನವಿದೆ.[ಈ ಹಾಡು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ]

ಬ್ರಹ್ಮ-ವಿಷ್ಣು-ಶಿವ ಎದೆ ಹಾಲು ಕುಡಿದರು....

'ಎಕ್ಸ್ ಕ್ಯೂಸ್ ಮಿ' ಚಿತ್ರದ ''ಬ್ರಹ್ಮ-ವಿಷ್ಣು-ಶಿವ ಎದೆ ಹಾಲು ಕುಡಿದರು....ಅಮ್ಮ ನೀನೇ ದೈವ ಅಂತ ಕಾಲು ಮಗಿದರು......'' ಹಾಡು ಕೇಳುಗರ ಮನ ಕುಲುಕಿಸುತ್ತೆ. ನಾಗೇಂದ್ರ ಪ್ರಸಾದ್ ಈ ಹಾಡನ್ನ ರಚಿಸಿದ್ದು, ಪ್ರೇಮ್ ಹಾಡಿದ್ದಾರೆ.[ಈ ಹಾಡು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ]

ತಾಯಿ ತಾಯಿ......

ನಟ ಪುನೀತ್ ರಾಜ್ ಕುಮಾರ್ ಹಾಗೂ ಲಕ್ಷ್ಮಿ ಅಭಿನಯದ 'ವಂಶಿ' ಚಿತ್ರದ ತಾಯಿ ತಾಯಿ ಸಾಂಗ್ ಅಮ್ಮನ ಮಹತ್ವವನ್ನ ತಿಳಿಸುವ ಸೂಪರ್ ಹಿಟ್ ಹಾಡು. ಈ ಹಾಡಿನಲ್ಲಿ ಪುನೀತ್ ಹಾಗೂ ಲಕ್ಷ್ಮಿ ಅವರ ಅಭಿನಯ ಅಮೋಘ.[ಈ ಹಾಡು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ]

ಅಮ್ಮಾ ಅಮ್ಮಾ ಐ ಲವ್ ಯೂ.....

ಪುನೀತ್ ರಾಜ್ ಕುಮಾರ್ ಹಾಗೂ ರೋಜಾ ಮುಖ್ಯ ಭೂಮಿಕೆಯಲ್ಲಿ ಅಭಿನಯದ 'ಮೌರ್ಯ' ಚಿತ್ರದಲ್ಲೂ ತಾಯಿಯ ಗೀತೆ ಇದೆ. ''ಅಮ್ಮಾ ಅಮ್ಮಾ ಐ ಲವ್ ಯೂ.....'' ಎಂಬ ಹಾಡು ಕೇಳುಗರನ್ನ ಕಾಡುತ್ತೆ.[ಈ ಹಾಡು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ]

English summary
Mother's Day Special Kannada Best Songs on Mothers. Here is the Best 12 Songs on Mother

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X