»   » 'ಅಮ್ಮನೇ ಎಲ್ಲ, ಅವಳಿಲ್ಲದೇ ಬೇರೇನಿಲ್ಲ' ಚಂದದ ನಟಿಯರ ಪ್ರೀತಿಯ ಅಮ್ಮಂದಿರು

'ಅಮ್ಮನೇ ಎಲ್ಲ, ಅವಳಿಲ್ಲದೇ ಬೇರೇನಿಲ್ಲ' ಚಂದದ ನಟಿಯರ ಪ್ರೀತಿಯ ಅಮ್ಮಂದಿರು

Posted By: Naveen
Subscribe to Filmibeat Kannada

ಇವತ್ತು 'ವಿಶ್ವ ಅಮ್ಮಂದಿರ ದಿನ'. ಅಮ್ಮ ಅಂದರೆ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ. 'ಅಪ್ಪ ಜನಕ, ಅಮ್ಮ ಆಮ್ಲ ಜನಕ' ಅನ್ನುವ ಮಾತು ಇದೆ. ಅದೇ ರೀತಿ ನಮ್ಮ ನಟಿಯರಿಗೂ ಸಹ ಅವರ ಅಮ್ಮ ಅಂದರೆ ಪಂಚಪ್ರಾಣ ಅಂತೆ.['ಮದರ್ಸ್ ಡೇ'ಗೆ ಜೋಗಿ ಪ್ರೇಮ್ ಕೊಟ್ರು ವಿಶೇಷ ಉಡುಗೊರೆ]

ವಿಶ್ವ ಅಮ್ಮಂದಿರ ದಿನವಾದ ಇಂದು ನಟಿಯರಾದ ಅನುಷ್ಕಾ ಶೆಟ್ಟಿ, ರವೀನಾ ಟಂಡನ್, ರಾಧಿಕಾ ಪಂಡಿತ್, ಹರಿಪ್ರಿಯಾ, ನಭಾ ನಟೇಶ್ ತಮ್ಮ ತಾಯಿಯ ಬಗ್ಗೆ ಮಾತನಾಡಿದ್ದಾರೆ. ಅಮ್ಮ ಅಂದರೆ ಎಲ್ಲ, ಅಮ್ಮ ಇಲ್ಲದೆ ಬೇರೆನೂ ಇಲ್ಲ ಅಂತ ಹೇಳಿದ್ದಾರೆ.['ಅಮ್ಮನ' ಆರಾಧನೆಗಾಗಿ ಈ 12 ಹಾಡುಗಳನ್ನ ಮಿಸ್ ಮಾಡದೆ ಕೇಳಿ.!]

ಯಾವಾಗಲೂ ಸಿನಿಮಾದ ಕೆಲಸದಲ್ಲಿಯೇ ಇರುವ ಈ ನಟಿಯರು ಅಮ್ಮನ ಮಹತ್ವದ ಬಗ್ಗೆ ತುಂಬ ಅರ್ಥ ಪೂರ್ಣವಾಗಿ ಹೇಳಿದ್ದಾರೆ. ಮುಂದಿದೆ ಓದಿ...

ಅಮ್ಮ ಬೇಕು ಅನಿಸುತ್ತದೆ....

ಕಳೆದ ತಿಂಗಳುಗಳ ಹಿಂದೆಯಷ್ಟೇ ಮದುವೆಯಾಗಿ ಗಂಡನ ಮನೆಯಲ್ಲಿರುವ ನಟಿ ರಾಧಿಕಾ ಪಂಡಿತ್ ತಮ್ಮ ಅಮ್ಮನನ್ನ ಹೆಚ್ಚು ಮಿಸ್ ಮಾಡ್ಕೊಳ್ತಿದ್ದಾರಂತೆ. '' ಚಿಕ್ಕ ಸಮಸ್ಯೆಯಾದರು ಅಲ್ಲಿ ಅಮ್ಮ ಬೇಕು ಅಂತ ಅನಿಸುತ್ತದೆ. ತುಂಬಾ ಮಿಸ್ ಮಾಡ್ಕೊಳ್ತಿದ್ದೀನಿ. ಮದುವೆಯಾದ ನಂತರ ಅಮ್ಮನ ಮಹತ್ವ ಮತ್ತಷ್ಟು ಗೊತ್ತಾಯಿತು'' - ರಾಧಿಕಾ ಪಂಡಿತ್ [ಮದುವೆ ಬಳಿಕ ಮೊದಲ ಹುಟ್ಟುಹಬ್ಬ ಆಚರಿಸಿಕೊಂಡ ರಾಧಿಕಾ ಪಂಡಿತ್!]

ಅಮ್ಮ- ಅಪ್ಪ ಎರಡು ಅಮ್ಮನೇ.....

''ನಾನು 9ನೇ ತರಗತಿಯಲ್ಲಿ ಇದ್ದಾಗ ತಂದೆಯನ್ನ ಕಳೆದುಕೊಂಡೆ. ಅಲ್ಲಿಂದ ಅಪ್ಪ ಅಮ್ಮ ಎರಡು ನನ್ನ ತಾಯಿಯೇ ಆಗಿದ್ದಾರೆ. ಅಮ್ಮ ಲಲಿತಾರನ್ನು ಬಿಟ್ಟು ನಾನು ಏನನ್ನೂ ಯೋಚಿಸುವುದಿಲ್ಲ. ನನ್ನ ಪ್ರತಿ ಕೆಲಸದ ಹಿಂದೆಯೂ ಅವರಿದ್ದಾರೆ. ನಾನು ಪಕ್ಕಾ ಅಮ್ಮನ ಮಗಳು''.- ಹರಿಪ್ರಿಯಾ, ನಟಿ

ಅಮ್ಮನೇ ಜಗತ್ತು.....

''ನಾವು ಭೂಮಿಯ ಮೇಲೆ ಇರುವುದಕ್ಕೆ ಮುಖ್ಯ ಕಾರಣವೇ ಅಮ್ಮ. ಅಮ್ಮನೆಂದರೆ ಪ್ರೀತಿ, ಮಮತೆ, ಆತ್ಮಸ್ಥರ್ಯ ಹೀಗೆ ಎಲ್ಲವನ್ನು ತುಂಬಿಕೊಂಡುವ ಒಂದು ಜಗತ್ತು ಆಕೆ. ನಾವು ಎಷ್ಟೇ ತಪ್ಪು ಮಾಡಿದರು, ಅಮ್ಮನಿಂದ ಒಂದೇ ಒಂದು ತಪ್ಪು ಆಗಲಾರದು''. - ನಭಾ ನಟೇಶ್, ನಟಿ.

ಎಲ್ಲ ಅಮ್ಮನಿಂದ.....

''ನಾನು ಹುಟ್ಟಿದಾಗಿನಿಂದ ನನ್ನ ಕಣ್ಣ ಮುಂದೆ ಸುಂದರವಾದ ವ್ಯಕ್ತಿಯನ್ನ ನೋಡುತ್ತಲೇ ಇದ್ದೇನೆ. ಅದು ನಮ್ಮ ಅಮ್ಮ. ನಾನು ಇಂದು ಸಾಧಿಸಿರುವುದು ಎಲ್ಲವು ಅಮ್ಮನಿಂದ. ಇದಕ್ಕೆಲ್ಲ ಥ್ಯಾಂಕ್ ಯೂ ಹೇಳುವುದು ತುಂಬ ಚಿಕ್ಕದು''. - ರವೀನಾ ಟಂಡನ್, ನಟಿ

ಅಮ್ಮ ಅಂದರೆ ಪ್ರೀತಿ.....

''ಅಮ್ಮ ಅಂದರೆ ಪ್ರೀತಿ. ಅಮ್ಮಂದಿರ ದಿನ ಮಾತ್ರವಲ್ಲದೆ ಅಮ್ಮನ ಮೇಲಿನ ಪ್ರೀತಿ ಯಾವಾಗಲು ಇರಬೇಕು. ಅಪ್ಪ, ಅಮ್ಮ ಇಬ್ಬರ ಒಳ್ಳೆಯ ಕೆಲಸಗಳು ನಮಗೆ ಪುಣ್ಯವಾಗಿ ಬರುತ್ತೆ'' - ಅನುಷ್ಕಾ ಶೆಟ್ಟಿ, ನಟಿ

English summary
Popular Actress Radhika Pandith, Haripriya, Anushka Shetty, Raveena Tandon, and Nabha Natesh speaks about There Mothers for Mothers Day Special.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada