twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾದವರು ಸರ್ಕಾರಕ್ಕೆ ಧಮ್ಕಿ ಹಾಕಿದರು: ಸಿಟಿ ರವಿ

    |

    ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ತೀವ್ರ ಹೆಚ್ಚಳವಾಗಿ ಪರಿಸ್ಥಿತಿ ಕೈಮೀರಿ ಹೋಗಲು ಸಿನಿಮಾ ರಂಗದವರು ಪರೋಕ್ಷ ಕಾರಣ ಎಂದಿದ್ದಾರೆ ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ.

    ಇಂದು (ಏಪ್ರಿಲ್ 22) ಸಿಟಿ ರವಿ ಅವರು ಸುಮನಹಳ್ಳಿಗೆ ಭೇಟಿ ನೀಡಿದ್ದ ಸಂದರ್ಭ ಅಲ್ಲಿ ಮೃತರ ಕುಟುಂಬದವರು ಇತರ ಗ್ರಾಮಸ್ಥರು ಸಿಟಿ ರವಿಗೆ ಮುತ್ತಿಗೆ ಹಾಕಿದರು. ಘಟನೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಟಿ ರವಿ, ಕೊರೊನಾ ಹೆಚ್ಚಳವಾಗಲು ಸರ್ಕಾರ ಕಾರಣವಲ್ಲ ಎಂದು 'ಡಿಫೆಂಡ್' ಮಾಡುತ್ತಾ 'ಸರ್ಕಾರದ ಮೇಲೆ ಸಿನಿಮಾ ರಂಗದವರು ಹಾಗೂ ಇತರರು ಹೇರಿದ ಒತ್ತಡದಿಂದ ಇಂದು ಕೊರೊನಾ ಪರಿಸ್ಥಿತಿ ಉಲ್ಬಣವಾಗಿದೆ' ಎಂದರು.

    ''ಎಂಟು ಹತ್ತು ದಿನದ ಹಿಂದೆ ಥಿಯೇಟರ್ ಬಂದ್ ಮಾಡಬೇಕು, ಜಿಮ್ ಬಂದ್ ಮಾಡಬೇಕು ಎಂದು ಸರ್ಕಾರ ನಿರ್ಧರಿಸಿದಾಗ ಸಿನಿಮಾದವರು ಬಂದು ಧಮ್ಕಿ ಹಾಕಿದರು, ಸರ್ಕಾರ ನಿರ್ಧಾರದಿಂದ ಹಿಂದೆ ಸರಿಯಿತು. ಜಿಮ್‌ಗಳನ್ನು ಬಂದ್ ಮಾಡೋಣ ಎಂದು ನಿರ್ಧರಿಸಿದಾಗ ಮತ್ತೆ ಜಿಮ್‌ ನವರು ಬಂದು ಧಮ್ಕಿ ಹಾಕಿದರು, ಸರ್ಕಾರ ಮತ್ತೆ ತನ್ನ ನಿರ್ಧಾರವನ್ನು ಹಿಂದೆ ಪಡೆಯಬೇಕಾಯಿತು'' ಎಂದರು ಸಿ.ಟಿ.ರವಿ.

    ಅದರಿಂದಾಗಿಯೇ ಇಂದು ದೊಡ್ಡ ಬೆಲೆ ತೆರಬೇಕಾಗಿದೆ: ಸಿಟಿ ರವಿ

    ಅದರಿಂದಾಗಿಯೇ ಇಂದು ದೊಡ್ಡ ಬೆಲೆ ತೆರಬೇಕಾಗಿದೆ: ಸಿಟಿ ರವಿ

    ''ವಿಪಕ್ಷವೂ ಸೇರಿದಂತೆ ''ಯಾಕೆ ಚಿತ್ರಮಂದಿರ ಬಂದ್ ಮಾಡಬೇಕು'' ಎಂದು ಪ್ರಶ್ನೆ ಮಾಡಿದರು. ಮಾಧ್ಯಮಗಳು ಸಹ ಅದನ್ನೇ ತೋರಿಸಿದವು. ಯಾರೋ ಸೆಲೆಬ್ರಿಟಿ ಬಂದು ಸ್ಟೇಟ್‌ಮೆಂಟ್ ಕೊಟ್ಟ ಕೂಡಲೇ ಮಾಧ್ಯಮಗಳೆಲ್ಲಾ ಆ ಕಡೆ ಫೋಕಸ್ ಕೊಟ್ಟವು. ಅದಕ್ಕೆ ದೊಡ್ಡ ಬೆಲೆ ಇಂದು ತೆರಬೇಕಾಗಿದೆ' ಎಂದಿದ್ದಾರೆ ಸಿಟಿ ರವಿ.

    ಮನವಿ ಮೇರೆಗೆ ಆದೇಶ ಸಡಿಲಿಸಿತ್ತು ಸರ್ಕಾರ

    ಮನವಿ ಮೇರೆಗೆ ಆದೇಶ ಸಡಿಲಿಸಿತ್ತು ಸರ್ಕಾರ

    ಪುನೀತ್ ರಾಜ್‌ಕುಮಾರ್ ನಟನೆಯ 'ಯುವರತ್ನ' ಸಿನಿಮಾ ಬಿಡುಗಡೆ ಆಗಿ ಎರೆಡೇ ದಿನಕ್ಕೆ ಏಪ್ರಿಲ್‌ ಮೂರರಿಂದ ಚಿತ್ರಮಂದಿರಗಳಲ್ಲಿ 50% ಪ್ರೇಕ್ಷಕರಿಗಷ್ಟೆ ಅವಕಾಶ ಕೊಡಬೇಕೆಂದು ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವರು ತೀವ್ರವಾಗಿ ಖಂಡಿಸಿದ್ದರು. ಜಿಮ್‌ಗಳನ್ನು ಬಂದ್ ಮಾಡುವ ವಿಷಯವಾಗಿಯೂ ಹೀಗೆಯೇ ಆಗಿತ್ತು.

    ಸಿಎಂಗೆ ಮನವಿ ಮಾಡಿದ್ದ ಪುನೀತ್ ರಾಜ್‌ಕುಮಾರ್

    ಸಿಎಂಗೆ ಮನವಿ ಮಾಡಿದ್ದ ಪುನೀತ್ ರಾಜ್‌ಕುಮಾರ್

    ಪುನೀತ್ ರಾಜ್‌ಕುಮಾರ್ ಹಾಗೂ 'ಯುವರತ್ನ' ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು,ನಿರ್ದೇಶಕ ಸಂತೋಶ್ ಆನಂದ್ ರಾಮ್ ಅವರು ಸಿಎಂ ಅವರನ್ನು ಭೇಟಿಯಾಗಿ ಮನವಿ ಮಾಡಿದ ಬಳಿಕ ಏಪ್ರಿಲ್ 7 ರಿಂದ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಲಾಗುತ್ತದೆ ಎಂದು ಆದೇಶವನ್ನು ಸಡಿಲಿಸಿದರು. ನಂತರ ಏಪ್ರಿಲ್ 7 ರಿಂದ ಸಿನಿಮಾ ಮಂದಿರಗಳಲ್ಲಿ 50% ಪ್ರೇಕ್ಷಕರಿಗಷ್ಟೆ ಅವಕಾಶ ನೀಡಲಾಗುತ್ತಿತ್ತು. ಈಗ ಹೊಸ ಆದೇಶದಂತೆ ಏಪ್ರಿಲ್ 21 ರಿಂದ ಮೇ 4 ರವರೆಗೆ ರಾಜ್ಯದಾದ್ಯಂತ ಚಿತ್ರಮಂದಿರಗಳು ಸಂಪೂರ್ಣ ಬಂದ್ ಆಗಿರಲಿವೆ.

    Recommended Video

    Troll ಆಯ್ತು ರಶ್ಮಿಕಾ ಅವರ ಬೋಳುತಲೆಯ ಫೋಟೋ | Filmibeat Kannada
    ರಾಜ್ಯದಲ್ಲಿ ಕೊರೊನಾ ಅಟ್ಟಹಾಸ

    ರಾಜ್ಯದಲ್ಲಿ ಕೊರೊನಾ ಅಟ್ಟಹಾಸ

    ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹಠಾತ್ತನೆ ಏರಿಕೆಯಾಗಿವೆ. ಬೆಂಗಳೂರಿನಲ್ಲಿ ಬಹುತೇಕ ಆಸ್ಪತ್ರೆಗಳು ಭರ್ತಿಯಾಗಿವೆ. ಆಮ್ಲಜನಕದ ಸಿಲಿಂಡರ್‌ ಕೊರತೆ ಹಾಗೂ ರೆಮ್ಡಿಸಿವಿರ್ ಲಸಿಕೆಯ ತೀವ್ರ ಕೊರತೆ ಕಾಡುತ್ತಿದೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ 23,500 ಹೊಸ ಪ್ರಕರಣಗಳು ದಾಖಲಾಗಿದ್ದು, 116 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಏಪ್ರಿಲ್‌ 21 ರವರೆಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 13726 ಆಗಿದೆ.

    English summary
    Ex minister CT Ravi said movie industry people threatened state government in closing theaters issue.
    Thursday, April 22, 2021, 16:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X