Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಯಾಂಡಲ್ ವುಡ್ ನಲ್ಲಿ 'ಸರಿಗಮಪ' ಹನುಮಂತನ ಬಯೋಪಿಕ್.! ಹೀರೋ ಯಾರು?
ಜೀ ಕನ್ನಡದಲ್ಲಿ ಪ್ರಸಾರವಾಗುವ ಖ್ಯಾತ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪ ಸೀಸನ್ 15ರಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ಹನುಮಂತ, ತದನಂತರ ಸಿಕ್ಕಾಪಟ್ಟೆ ಸದ್ದು ಮಾಡಿದ. ಆ ಶೋನಲ್ಲಿ ವಿನ್ ಆಗಿದ್ದ ಕೀರ್ತನ್ ಹೊಳ್ಳ ಅವರಿಗಿಂತ ಹನುಮಂತನ ಹವಾ ಹೆಚ್ಚಾಯಿತು.
ದಿನ ನಿತ್ಯ ಟಿವಿ ವಾಹಿನಿಯಲ್ಲಿ ಹನುಮಂತನೇ ಮಿಂಚುತ್ತಿದ್ದ. ಹಾವೇರಿಯಲ್ಲಿ ಚುನಾವಣೆ ರಾಯಾಭಾರಿಯೂ ಆಗಿ ಆಯ್ಕೆಯಾಗಿದ್ದ. ಸರಿಗಮಪ ಶೋ ಬಳಿಕ ಅನೇಕ ಲೈವ್ ಕಾರ್ಯಕ್ರಮದಲ್ಲಿ ಮೋಡಿ ಮಾಡುತ್ತಿರುವ ಹನುಮಂತ ಬಹುಶಃ ಸ್ಯಾಂಡಲ್ ವುಡ್ ಗೂ ಪ್ರವೇಶ ಮಾಡಬಹುದು ಎಂದು ಜನ ನಿರೀಕ್ಷೆ ಮಾಡುತ್ತಿದ್ದರು.
'ಸರಿಗಮಪ ಸೀಸನ್ 15'ರ ವಿನ್ನರ್ ಆದ ಕ್ಲಾಸಿಕಲ್ ಕಿಂಗ್ ಕೀರ್ತನ್ ಹೊಳ್ಳ
ಇದೀಗ, ಆ ಸಮಯವೂ ಬಂದಾಗಿದೆ. ಹನುಮಂತ ಕನ್ನಡ ಇಂಡಸ್ಟ್ರಿಯಲ್ಲಿ ಮಿಂಚಲು ಸಜ್ಜಾಗುತ್ತಿದ್ದಾನಂತೆ. ಈ ಬಗ್ಗೆ ಸ್ವತಃ ನಿರ್ದೇಶಕರೇ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ, ಹನುಮಂತನ ಸಿನಿಮಾ ಬರ್ತಿದ್ಯಾ? ಯಾರೂ ಹೀರೋ? ಯಾವಾಗ ಆರಂಭ? ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.....

ಹನುಮಂತನ ಕುರಿತು ಸಿನಿಮಾ
ಹನುಮಂತ ಹೇಗೆ ಹಾಡ್ತಾನೆ ಎಂಬುದು ಎಲ್ಲರಿಗೂ ಗೊತ್ತಿದೆ. ಸರಿಗಮಪ ವೇದಿಕೆ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಹನುಮಂತನ ಪ್ರತಿಭೆ ಏನು ಎಂಬುದು ನೋಡಿರ್ತೀರಾ. ಇದೀಗ, ಹನುಮಂತನ ಲೈಫ್ ಸ್ಟೈಲ್ ಬಗ್ಗೆ ಸಿನಿಮಾ ಮಾಡಲು ಯುವ ನಿರ್ದೇಶಕನೊಬ್ಬ ಆಸಕ್ತಿ ತೋರಿದ್ದಾರೆ. ಹನುಮಂತನ ಜೀವನ ಶೈಲಿಯನ್ನ ಸಿನಿಮಾ ಮಾಡಲು ಮುಂದಾಗಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಕೀರ್ತನ್, ಹನುಮಂತಣ್ಣನಿಗೆ ಅನುಶ್ರೀ ಅಭಿನಂದನೆ

ಇಸ್ರೇಲ್ ಮೂಲದ ವ್ಯಕ್ತಿಯಿಂದ ನಿರ್ಮಾಣ
ಕರಾವಳಿ ಮೂಲದ ಯುವ ನಿರ್ದೇಶಕನೊಬ್ಬ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದು, ಈ ಬಗ್ಗೆ ಸ್ವತಃ ಹನುಮಂತನ ಬಳಿಯೂ ಒಂದು ಸುತ್ತಿನ ಮಾತುಕತೆ ಆಗಿದೆಯಂತೆ. ವಿಶೇಷ ಅಂದ್ರೆ ಇಸ್ರೇಲ್ ಮೂಲದ ವ್ಯಕ್ತಿಯೊಬ್ಬರು ಈ ಚಿತ್ರಕ್ಕೆ ಬಂಡವಾಳ ಹಾಕಲಿದ್ದು, ಸುಮಾರು 1 ಕೋಟಿಗೂ ಹೆಚ್ಚು ಬಜೆಟ್ ಹಾಕಲು ಸಿದ್ಧರಿದ್ದಾರಂತೆ.

ಹೀರೋ ಯಾರಾಗಬಹುದು?
ಪಂಚೆ, ಹೆಗಲ ಮೇಲೊಂದು ಟವಲ್....ಇದು ಹನುಮಂತನ ಸ್ಟೈಲ್. ಹನುಮಂತನ ಕುರಿತು ಮೂಡಿಬರಲಿರುವ ಸಿನಿಮಾದಲ್ಲಿ ಈ ಸ್ಟೈಲ್ ಇದ್ದೇ ಇರುತ್ತೆ. ಹಾಗಾಗಿ, ಹನುಮಂತನ ಪಾತ್ರ ಯಾರು ಮಾಡಬಹುದು ಎಂಬುದಕ್ಕೆ ಸದ್ಯಕ್ಕೆ ಉತ್ತರವಿಲ್ಲ. ಒಂದು ವೇಳೆ ಹನುಮಂತನೇ ಮಾಡಿದ್ರು ಅಚ್ಚರಿಯಿಲ್ಲ.
ಹನುಮಂತ ಫೈನಲ್ ಗೆ ಬಂದರೂ ಅಣ್ಣನಿಗೆ ಬೇಸರವಿದೆ!

ಮೆಹಬೂಬ್ ಹಾಡ್ತಾರಂತೆ
ವಿಶೇಷ ಅಂದ್ರೆ ಸರಿಗಮಪ ಕಾರ್ಯಕ್ರಮದ ಮಾಜಿ ಸ್ಪರ್ಧಿ ಮೆಹಬೂಬ್ ಅವರು ಈ ಚಿತ್ರಕ್ಕಾಗಿ ಒಂದು ಹಾಡನ್ನ ಹಾಡಲಿದ್ದಾರೆ ಎಂದು ಕೂಡ ತಿಳಿದು ಬಂದಿದೆ. ಸದ್ಯಕ್ಕೆ ಕಥೆ ತಯಾರಾಗುತ್ತಿದ್ದು, ಸದ್ಯದಲ್ಲೇ ಸಿನಿಮಾ ಆರಂಭಿಸುವ ಪ್ಲಾನ್ ಮಾಡಲಾಗಿದೆ.
ಸಂದರ್ಶನ: ಜೀವನ ಮತ್ತು ಸ್ಪರ್ಧೆ.. ಎರಡರಲ್ಲೂ ಗೆದ್ದ ಮೆಹಬೂಬ್ ಸಾಬ್

ಸಿನಿಮಾನಾ, ಬರಿ ಪ್ರಚಾರನಾ?
ಅಂದ್ಹಾಗೆ, ಈ ರೀತಿ ಕಡಿಮೆ ಅವಧಿಯಲ್ಲಿ ಹೆಚ್ಚು ಖ್ಯಾತಿ ಹೊಂದಿದವರ ಬಗ್ಗೆ ಸಿನಿಮಾ ಮಾಡೋದು ಅಥವಾ ಅವರನ್ನ ಸಿನಿಮಾದಲ್ಲಿ ನಟಿಸುವಂತೆ ಮಾಡುವುದು ಹೊಸದೇನಲ್ಲ. ಈ ಹಿಂದೆ ಈ ರೀತಿಯ ಸಾಕಷ್ಟು ಉದಾಹರಣೆಗಳಿವೆ. ಆದ್ರೆ, ಇದು ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತೆ ಅಥವಾ ಬರಿ ಪ್ರಚಾರಕ್ಕೆ ಹನುಮಂತ ಸೀಮಿತವಾಗುತ್ತಾನ ಎಂಬುದು ಸದ್ಯಕ್ಕೆ ಪ್ರಶ್ನೆಯಾಗಿಯೇ ಇರುತ್ತೆ.