For Quick Alerts
  ALLOW NOTIFICATIONS  
  For Daily Alerts

  ನಿಯಮ ಮೀರಿ ರಿಲೀಸ್ ಆಗುತ್ತಿದೆ 'ಸೈರಾ': ತೆಲುಗಿನಲ್ಲಿರೊ ರೂಲ್ಸ್ ಇಲ್ಲಿ ಯಾಕೆ ಇಲ್ಲ

  |

  ಮೆಗಾಸ್ಟಾರ್ ಚಿರಂಜೀವಿ, ಬಿಗ್ ಬಿ ಅಮಿತಾಭ್ ಬಚ್ಚನ್, ಕಿಚ್ಚ ಸುದೀಪ್ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ಅಭಿನಯಿಸಿರುವ ಸೈರಾ ನರಸಿಂಹ ರೆಡ್ಡಿ ಸಿನಿಮಾ ನಾಳೆ ದೊಡ್ಡ ಮಟ್ಟಕ್ಕೆ ತೆರೆಗೆ ಬರುತ್ತಿದೆ. ಐದು ಭಾಷೆಯಲ್ಲಿ ಸೈರಾ ರಿಲೀಸ್ ಆಗುತ್ತಿದ್ದು ಕರ್ನಾಟಕದಲ್ಲಿ ಬೆಳ್ಳಂಬೆಳಗ್ಗೆಯೆ ಸೈರಾ ಪ್ರದರ್ಶನವಾಗುತ್ತಿದೆ.

  'ಸೈರಾ' ಸಿನಿಮಾದ ಟಿಕೆಟ್ ರೇಟ್ ಕೇಳಿ ಬೆಚ್ಚಿಬಿದ್ದ ಕನ್ನಡ ಪ್ರೇಕ್ಷಕರು

  ನಿಯಮದ ಪ್ರಕಾರ ಬೆಳ್ಳಂಬೆಳಗ್ಗೆ ಯಾವ ಸಿನಿಮಾ ಪ್ರದರ್ಶನ ಆಗಬಾರದು. ಹೌದು, 2014ರ ಕರ್ನಾಟಕ ಸಿನಿಮಾ ನಿಯಮದ ಪ್ರಕಾರ "ಬೆಳಿಗ್ಗೆ 8ರ ಒಳಗೆ ಯಾವುದೆ ಪರವಾನಗಿದಾರರು ಸಿನಿಮಾ ಪ್ರದರ್ಶಿಸಬಾರದು. ಅಲ್ಲದೆ ರಾತ್ರಿ 10 ಗಂಟೆ ನಂತರ ಯಾವುದೆ ಶೋ ಪ್ರಾರಂಭಿಸುವಂತಿಲ್ಲ" ಈ ನಿಯಮದ ಬಗ್ಗೆ ಎಷ್ಟು ಜನಕ್ಕೆ ಅರಿವಿದೆಯೊ ಇಲ್ಲವೂ ಗೊತ್ತಿಲ್ಲ. ಆದ್ರೆ ರೂಲ್ಸ್ ಜಾರಿಯಲ್ಲಿದೆ.

  ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತವೆ

  ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತವೆ

  ಕರ್ನಾಟಕದಲ್ಲಿ ಹೆಸರಿಗೆ ಮಾತ್ರ ಈ ನಿಯಮವಿದೆ. ಆದ್ರೆ ಇದನ್ನು ಯಾರು ಅನುಸರಿಸುವುದಿಲ್ಲ. ಕನ್ನಡದ ಸಾಕಷ್ಟು ಚಿತ್ರಗಳು ಸಹ ಬೆಳಗ್ಗೆಯೆ ಪ್ರಾರಂಭವಾಗುತ್ತೆ. ಇತ್ತೀಚಿಗೆ ರಿಲೀಸ್ ಆದ ಪೈಲ್ವಾನ್ ಮತ್ತು ಕುರುಕ್ಷೇತ್ರ ಸಿನಿಮಾಗಳು ಬೆಳ್ಳಂಬೆಳಗ್ಗೆ ಶೋ ಪ್ರಾರಂಭವಾಗಿತ್ತು.

  ಸೈರಾ ಬೆಳಗ್ಗೆ 3 ಗಂಟೆಗೆ ಪ್ರದರ್ಶನ

  ಸೈರಾ ಬೆಳಗ್ಗೆ 3 ಗಂಟೆಗೆ ಪ್ರದರ್ಶನ

  ತೆಲುಗಿನ ಸೈರಾ ಸಿನಿಮಾವಂತೂ ರಾತ್ರಿ 3 ಗಂಟೆಗೆ ಪ್ರದರ್ಶನವಾಗುತ್ತಿದೆ. ಬೆಂಗಳೂರಿನ ಎರಡು ಚಿತ್ರಮಂದಿರಗಳಲ್ಲಿ ಬೆಳಗ್ಗೆ 3 ಗಂಟೆಗೆ ಶೋ ಪ್ರಾರಂಭವಾಗುತ್ತಿದೆ. ಎಂಜಿ ರಸ್ತೆಯಲ್ಲಿರುವ ಶಂಕರ್ ನಾಗ್ ಚಿತ್ರಮಂದಿರ ಮತ್ತು ಊರ್ವಶಿ ಚಿತ್ರಮಂದಿರಗಳಲ್ಲಿ ಬೆಳಗ್ಗೆಯೆ ಚಿತ್ರ ಪ್ರದರ್ಶನವಾಗುತ್ತಿದೆ. ನಂತರ 6 ಗಂಟೆಗೆ ಸಾಕಷ್ಟು ಶೋಗಳು ಇವೆ.

  ಅಮಿತಾಭ್ ಬಚ್ಚನ್ ಅಂದು ಹೇಳಿದ್ದ ಮಾತನ್ನ ಚಿರಂಜೀವಿ ಕೇಳಲೇ ಇಲ್ಲ

  6 ಗಂಟೆ ಒಳಗೆ 42 ಶೋಗಳು

  6 ಗಂಟೆ ಒಳಗೆ 42 ಶೋಗಳು

  ಮುಂಗಡ ಬುಕ್ಕಿಂಗ್ ಪ್ರಕಾರ ಬೆಳ್ಳಂಬೆಳಗ್ಗೆ ಕರ್ನಾಟಕದಲ್ಲಿ ಸುಮಾರು 42 ಶೋಗಳು ಪ್ರಾರಂಭವಾಗುತ್ತಿವೆ. ಸಿಂಗಲ್ ಸ್ಕ್ರೀನ್ ಮಾತ್ರವಲ್ಲದೆ ಮಲ್ಟಿಫ್ಲೆಕ್ಸ್ ನಲ್ಲಿಯೋ ನಿಯಮ ಮೀರಿ ಚಿತ್ರ ಪ್ರದರ್ಶನವಾಗುತ್ತಿದೆ. ನಿಯಮ ಮೀರಿ ರಿಲೀಸ್ ಆಗುತ್ತಿರುವುದಲ್ಲದೆ ಟಿಕೆಟ್ ಬೆಲೆ ಕೇಳಿದ್ರೆ ಅಚ್ಚರಿ ಪಡುತ್ತೀರಾ. ಸೈರಾ ಚಿತ್ರದ ರಾತ್ರಿ ಮೊದಲ ಶೋ ಟಿಕೆಟ್ ಬೆಲೆ 1200 ರೂಪಾಯಿ.

  ಹೈದರಾಬಾದ್ ನಲ್ಲಿ ಅನುಸರಿಸುತ್ತಾರೆ ರೂಲ್ಸ್

  ಹೈದರಾಬಾದ್ ನಲ್ಲಿ ಅನುಸರಿಸುತ್ತಾರೆ ರೂಲ್ಸ್

  ಈ ರೀತಿ ನಡೆಯುತ್ತಿರುವುದು ಕರ್ನಾಟಕದಲ್ಲಿ ಮಾತ್ರ. ಆದ್ರೆ ಇದೇ ಸಿನಿಮಾ ಆಂಧ್ರಪ್ರದೇಶಕ್ಕೂ ಅನ್ವಯ ಆಗುತ್ತೆ. ಆದ್ರೆ ಅಲ್ಲಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ. ಹೈದರಾಬಾದ್ ನಲ್ಲಿ ಒಂದು ಟಿಕೆಟ್ ಬೆಲೆ ಸಿಂಗಲ್ ಸ್ಕ್ರೀನ್ ನಲ್ಲಿ 40 ರಿಂದ 150 ರೂಪಾಯಿಗಳು ಮಾತ್ರ. ಅಲ್ಲದೆ ತೆಲುಗು ಚಿತ್ರರಂಗದಲ್ಲಿ ಈ ರೀತಿಯ ಶೋಗಳನ್ನು ಮಾಡುವುದಿಲ್ಲ.

  ಮತ್ತೊಂದು ವಿವಾದದಲ್ಲಿ ಸಿಲುಕಿದ ಚಿರಂಜೀವಿ ಅಭಿನಯದ 'ಸೈರಾ' ಸಿನಿಮಾ

  ಕರ್ನಾಟಕದಲ್ಲಿ ಯಾಕೆ ಹೀಗೆ?

  ಕರ್ನಾಟಕದಲ್ಲಿ ಯಾಕೆ ಹೀಗೆ?

  ರಾತ್ರೋ ರಾತ್ರಿ ಶೋಗಳನ್ನು ಹಾಕಿ ಸಾವಿರಕ್ಕು ಹೆಚ್ಚಿನ ಬೆಲೆಯಲ್ಲಿ ಟಿಕೆಟ್ ಮಾರಾಟ ಮಾಡುವುದಿಲ್ಲ. ಅಲ್ಲಿ ಪರಭಾಷೆಯ ಚಿತ್ರಗಳಿಗೆ ಹೆಚ್ಚು ಪ್ರಚಾರವೂ ನೀಡುವುದಿಲ್ಲ. ಆದ್ರೆ ಕರ್ನಾಟಕದಲ್ಲಿ ಯಾಕೆ ಹೀಗೆ. ಇದನ್ನ ಕೇಳುವವರು ಯಾರು ಇಲ್ಲವ ಎನ್ನುವುದೆ ಕನ್ನಡಿಗರ ದೊಡ್ಡ ಪ್ರಶ್ನೆ.

  English summary
  Chiranjeevi starrer Sye Ra Narasimha Reddy film release at early moring is illegal in Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X