Don't Miss!
- Sports
Ind Vs Aus Test: ಟೆಸ್ಟ್ ಸರಣಿಗೆ ಈ ರೀತಿ ಪಿಚ್ ಬೇಕು ಎಂದು ಕ್ಯುರೇಟರ್ಗಳಿಗೆ ಮನವಿ ಮಾಡಿದ ದ್ರಾವಿಡ್ ಮತ್ತು ರೋಹಿತ್ ಶರ್ಮಾ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಒಂಬತ್ತು ಕನ್ನಡ, 13 ತೆಲುಗು ಸಿನಿಮಾಗಳು ಇಂದು ಬಿಡುಗಡೆ: ಯಾವುವವು?
ಮತ್ತೊಂದು ಶುಕ್ರವಾರ ಬಂದಿದೆ. ಪ್ರತಿ ಶುಕ್ರವಾರದಂತೆ ಈ ಶುಕ್ರವಾರವೂ ಹಲವು ಹೊಸ-ಹೊಸ ಸಿನಿಮಾಗಳು ತೆರೆಗೆ ಬರುತ್ತಿವೆ. ಹೊಸ ಸಿನಿಮಾಗಳನ್ನು ಸ್ವಾಗತಿಸಲು ಚಿತ್ರಮಂದಿರಗಳು ಸಹ ಸಜ್ಜಾಗಿ ಕಾದು ನಿಂತಿವೆ.
ವರ್ಷದ ಕೊನೆಯ ತಿಂಗಳು ಡಿಸೆಂಬರ್ ಚಾಲ್ತಿಯಲ್ಲಿದೆ. ಹೊಸ ವರ್ಷದ ಮುಂಚೆಯೇ ಹಲವು ಸಿನಿಮಾಗಳು ತರಾ-ತುರಿಯಲ್ಲಿ ಸಿನಿಮಾಗಳನ್ನು ತೆರೆಗೆ ತರಲು ಯತ್ನಿಸುತ್ತಿವೆ. ಹಾಗಾಗಿ ಇಂದು ಅಂದರೆ ಡಿಸೆಂಬರ್ 09ರ ಶುಕ್ರವಾರ ತುಸು ಹೆಚ್ಚೇ ಸಿನಿಮಾಗಳು ಬಿಡುಗಡೆ ಆಗುತ್ತಿವೆ.
ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳ ಹಲವು ಹೊಸ ಸಿನಿಮಾಗಳು ಈ ವಾರ ತೆರೆಗೆ ಬರುತ್ತಿವೆ. ಅವುಗಳಲ್ಲಿ ಕೆಲವು ಪ್ರಮುಖ ಸಿನಿಮಾಗಳು ಯಾವುವೆಂಬ ಪಟ್ಟಿ ಇಲ್ಲಿದೆ. ವಿಶೇಷವೆಂದರೆ ಈ ಶುಕ್ರವಾರ ಬರೋಬ್ಬರಿ ಒಂಬತ್ತು ಸಿನಿಮಾಗಳು ಬಿಡುಗಡೆ ಆಗುತ್ತಿವೆ.

ವಿಜಯ್ ಸಂಕೇಶ್ವರ್ ಜೀವನ ಆಧರಿತ ಸಿನಿಮಾ
ಉದ್ಯಮಿ, ರಾಜಕಾರಣಿ ವಿಜಯಸಂಕೇಶ್ವರ ಅವರ ಜೀವನ ಆಧರಿಸಿದ 'ವಿಜಯಾನಂದ' ಸಿನಿಮಾ ಈ ಶುಕ್ರವಾರ ತೆರೆಗೆ ಬರುತ್ತಿದೆ. ಸಿನಿಮಾಕ್ಕೆ ವಿಜಯಸಂಕೇಶ್ವರ್ ಪುತ್ರ ಆನಂದ್ ಸಂಕೇಶ್ವರ್ ಬಂಡವಾಳ ಹೂಡಿದ್ದು, ಸಿನಿಮಾದಲ್ಲಿ ಅನಂತ್‌ನಾಗ್, ರವಿಚಂದ್ರನ್ ಸೇರಿದಂತೆ ಕೆಲವು ಪ್ರಮುಖ ನಟರು ನಟಿಸಿದ್ದಾರೆ. ವಿಜಯ್‌ಸಂಕೇಶ್ವರ್ ಪಾತ್ರದಲ್ಲಿ ನಟ ನಿಹಾಲ್, ಆನಂದ್ ಸಂಕೇಶ್ವರ್ ಪಾತ್ರದಲ್ಲಿ ಭರತ್ ಬೋಪಣ್ಣ ನಟಿಸಿದ್ದಾರೆ.

'ಬಾಂಡ್ ರವಿ' ಹಾಗೂ ಇತರೆ ಸಿನಿಮಾಗಳು
ಯುವನಟ ಪ್ರಮೋದ್ ನಟನೆಯ 'ಬಾಂಡ್ ರವಿ' ಸಿನಿಮಾ ಡಿಸೆಂಬರ್ 09 ರಂದು ಬಿಡುಗಡೆ ಆಗಲಿದೆ. ಇವರು ಪ್ರಭಾಸ್‌ರ 'ಸಲಾರ್' ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಇದರ ಜೊತೆಗೆ ಪ್ರಿಯಾಮಣಿ ನಟನೆಯ 'ಡಿ56' ಸಿನಿಮಾ ಬಿಡುಗಡೆ ಆಗುತ್ತಿದೆ. ರಾಹುಲ್, ಕೃಷ್ಣಾ ಭಟ್, ಶೈನ್ ಶೆಟ್ಟಿ ನಟನೆಯ 'ಪ್ರಾಯಷಃ' ಸಿನಿಮಾ ತೆರೆಗೆ ಬರುತ್ತಿದೆ. ಪ್ರಭು, ಭಾವನಾ ನಟನೆಯ 'ಮೈಸೂರು ಡೈರೀಸ್' ಸಿನಿಮಾ ತೆರೆಗೆ ಬರುತ್ತಿದೆ. ಹಾರರ್ ಸಿನಿಮಾ 'ನಾನೇ ನರ ರಾಕ್ಷಸ' ತೆರೆಗೆ ಬರುತ್ತಿದೆ. 'ಪಂಖುರಿ', 'ದ್ವಿಪಾತ್ರ', 'ಸುನಾಮಿ 143' ಸಿನಿಮಾಗಳು ತೆರೆಗೆ ಬರುತ್ತಿವೆ.

ತೆಲುಗಿನ 13 ಸಿನಿಮಾಗಳು ಬಿಡುಗಡೆ
ತೆಲುಗಿನಲ್ಲಿಯೂ ಹಲವು ಸಿನಿಮಾಗಳು ಈ ವಾರ ತೆರೆಗೆ ಬರುತ್ತಿವೆ. ಪ್ರೇಮಕತೆಯುಳ್ಳ 'ಗುರ್ತುಂದಾ ಸೀತಾಕಾಲಂ', 'ಚಪ್ಪಾಲನಿ ವುಂದಿ', ಹಾಸ್ಯಕತೆಯುಳ್ಳ 'ಪಂಚತಂತ್ರಂ', ಯುವಕರ ಸಾಹಸ ಕತೆಯುಳ್ಳ 'ಸಿವಿಲ್ ಎಂಜಿನಿಯರ್', ಕನ್ನಡಿಗ ವಿಕಾಸ್ ವಶಿಷ್ಠ ಹಾಗೂ ವಿಶ್ವಕ್ ಸೇನ್ ನಟನೆಯ 'ಮುಖವಿಚಿತ್ರಂ', ಕಾಲೇಜು ಪ್ರೇಮಕತೆ 'ಲೆಹರಿಯಾ', 'ವಿಜಯಾನಂದ' ತೆಲುಗು ಡಬ್ ಆವೃತ್ತಿ, ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಲೆಸ್ಬಿಯನ್ ಪ್ರೇಮಕತೆ 'ಮಾ ಇಷ್ಟಂ', ಅಡವಿ ಜನರ ಕತೆಯುಳ್ಳ ' ಲವ್', 'ಏಯ್ ಬುಜ್ಜಿ ನೀಕು ನೇನು', ಹಾಸ್ಯ ಸಿನಿಮಾ 'ನಮಸ್ತೆ ಸೇಠ್ ಜೀ', ಇವುಗಳ ಜೊತೆಗೆ ಹಳೆಯ ಸಿನಿಮಾಗಳಾದ 'ಮಾಯಾಬಜಾರ್' ಹಾಗೂ 'ಪ್ರೇಮ ದೇಶಂ' ಮರು ಬಿಡುಗಡೆ ಆಗಲಿದೆ.

ತಮಿಳಿನಲ್ಲೂ ಹಲವು ಸಿನಿಮಾಗಳು ಬಿಡುಗಡೆ
ತಮಿಳಿನಲ್ಲಿ 'ನಾಯಿ ಸರ್ಕಾರ್ ರಿಟರ್ನ್ಸ್', ಜೀವ ನಟನೆಯ 'ವರಲಾರು ಮುಖ್ಯಂ', ಕನ್ನಡದ ಸಿನಿಮಾ 'ವಿಜಯಾನಂದ' ತಮಿಳು ಡಬ್ ಆವೃತ್ತಿ, ಪ್ರಿಯಾಮಣಿ ನಟನೆಯ 'ಡಿ56', ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ 'ಗುರುಮೂರ್ತಿ', ಹಾರರ್ ಸಿನಿಮಾ 'ಎಸ್ಟೇಟ್', ಮತ್ತೊಂದು ಹಾರರ್ ಸಿನಿಮಾ 'ಇವಿಲ್' ಸಿನಿಮಾಗಳು ತೆರೆಗೆ ಬರಲಿವೆ. ಮುಂದಿನ ವಾರ ರಜನೀಕಾಂತ್‌ರ 'ಬಾಬಾ' ರೀ ರಿಲೀಸ್ ಆಗಲಿದೆ.

ಹಿಂದಿಯಲ್ಲಿ ಯಾವ ಸಿನಿಮಾಗಳ ಬಿಡುಗಡೆ
ನಟಿ ಕಾಜೋಲ್ ನಟನೆಯ 'ಸಲಾಮ್ ವೆಂಕಿ' ಈ ಶುಕ್ರವಾರ ತೆರೆಗೆ ಬರುತ್ತಿದೆ. ಅಂಗವಿಕಲ ಮಗನ ತಾಯಿಯ ಪಾತ್ರದಲ್ಲಿ ಕಾಜೋಲ್ ನಟಿಸಿದ್ದಾರೆ. ಸೀರಿಯಲ್ ಕಿಲ್ಲರ್ ಕತೆಯುಳ್ಳ 'ಮಾರಿಚ್' ಸಹ ಇದೇ ವಾರ ಬಿಡುಗಡೆ ಆಗುತ್ತಿದೆ. ಸತ್ಯಘಟನೆ ಆಧರಿತ ವಯೋವೃದ್ಧ ಜೋಡಿಯೊಂದರ ಕತೆ 'ವಧ್' ಬಿಡುಗಡೆ ಆಗುತ್ತಿದೆ. ಇನ್‌ವೆಸ್ಟಿಗೇಶನ್ ಕತೆಯುಳ್ಳ 'ಶಾಡೋಸ್ ಆಫ್ ಅಸ್ಸಾಸಿನ್', ಅಪ್ಪ-ಮಗಳ ಕತೆಯುಳ್ಳ 'ಲೈಫ್ ಈಸ್ ಗುಡ್', ರಾಮ್ ಗೋಪಾಲ್ ವರ್ಮಾರ ಲೆಸ್ಬಿಯನ್ ಕತೆ 'ಡೇಂಜರಸ್', ಭಿನ್ನ ಕತೆಯುಳ್ಳ 'ಜೋಶ್', ಕನ್ನಡದ 'ವಿಜಯಾನಂದ' ಸಿನಿಮಾದ ಹಿಂದಿ ಡಬ್ ತೆರೆಗೆ ಬರುತ್ತಿದೆ ಈ ಶುಕ್ರವಾರ.

ಮಲಯಾಳಂ ಸಿನಿಮಾಗಳ ಪಟ್ಟಿ
ಕೆಲವು ಮಲಯಾಳಂ ಸಿನಿಮಾಗಳು ಈ ಶುಕ್ರವಾರ ತೆರೆಗೆ ಬರುತ್ತಿದ್ದು, ಪಟ್ಟಿ ಇಂತಿದೆ. ಹಾಸ್ಯಮಿಶ್ರಿತ ಗಂಭೀರ ವಿಷಯವುಳ್ಳ 'ಭರತ್ ಸರ್ಕಸ್', ಇನ್‌ವೆಸ್ಟಿಗೇಶನ್ ಕತೆಯುಳ್ಳ 'ವೀಕನ್', ಸರಣಿ ಹಂತಕನ ಕತೆಯುಳ್ಳ 'ರೆಡ್ ಶಾಡೋ', ಭಿನ್ನ ಕಥಾವಸ್ತುವುಳ್ಳ 'ಐ ಆಮ್ ಫಾದರ್', ಕನ್ನಡದ 'ವಿಜಯಾನಂದ' ಸಿನಿಮಾದ ಮಲಯಾಳಂ ಆವೃತ್ತಿಗಳು ತೆರೆಗೆ ಬರುತ್ತಿವೆ.