twitter
    For Quick Alerts
    ALLOW NOTIFICATIONS  
    For Daily Alerts

    ಬಿಡುಗಡೆ ದಿನ ಮನೆಯಲ್ಲಿಯೇ ನೋಡಿ ಸಿನಿಮಾ

    |

    Movies
    ಚಲನಚಿತ್ರ ಬಿಡುಗಡೆಯಾದ ದಿನವೇ ಹೋಗಿ ಚಿತ್ರಮಂದಿರದ ಮುಂದೆ ಇನ್ನು ಕ್ಯೂ ನಿಲ್ಲಬೇಕಾಗಿಲ್ಲ. ಅದೇ ಚಿತ್ರವನ್ನು ಮನೆಯಲ್ಲಿಯೇ ಕುಳಿತು ನೋಡಬಹುದು. ಈ ಬೆಳವಣಿಗೆ ಇನ್ನು ಕೆಲವೇ ಕೆಲವು ದಿನಗಳಲ್ಲಿ ಸಾಧ್ಯವಾಗಲಿದೆ. ಡಿಟಿಎಚ್ ಗಳ ಮೂಲಕ ಈ ಸೌಲಭ್ಯ ಮನೆಬಾಗಿಲಿಗೆ ಬರಲಿದ್ದು 4 ಜಿ (ಪೋರ್ಥ್ ಜನರೇಶನ್ ಆಫ್ ವೈರ್ ಲೆಸ್ ಟೆಲಿಫೋನ್ ಟೆಕ್ನಾಲಜಿ) ಮೂಲಕ ಬಯಸಿದ ಸಮಯಕ್ಕೆ ಸರಿಯಾಗಿ ಚಿತ್ರ ಪ್ರಸಾರವಾಗಲಿದೆ.

    ಈ ರೀತಿಯಲ್ಲಿ ಚಿತ್ರಪ್ರೇಮಿಗಳಿಗೆ ಚಿತ್ರ ಪ್ರಸಾರ ಮಾಡುವ ವಿನೂತನ ವ್ಯವಸ್ಥೆ 2012ರ ಜೂನ್ ತಿಂಗಳಿಂದ ದೆಹಲಿ, ಕೊಲ್ಕೊತ್ತಾ, ಮಂಬೈ, ಹೈದ್ರಾಬಾದ್, ಮಹಾನಗರಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ನಿಗದಿತ ಹಣವನ್ನು ಪಾವತಿಸಿದರೆ ಚಲನಚಿತ್ರ ನಿರ್ಮಾಪಕರು ಚಿತ್ರದ ಹಾರ್ಡ್ ಡಿಸ್ಕ್ ಸಿದ್ಧಪಡಿಸಿ ಡಿಟಿಎಚ್ ಕಂಪನಿಗಳಿಗೆ ನೀಡುತ್ತಾರೆ. ಅವರು ಅಂದೇ ಬಿಡುಗಡೆಯಾದ ನಿಮ್ಮಿಷ್ಟದ ಚಿತ್ರವನ್ನು ಪ್ರಸಾರ ಮಾಡುತ್ತಾರೆ.

    ಇದು ಬಿಡುಗಡೆಯಾದ ದಿನಕ್ಕಷ್ಟೇ ಸೀಮಿತ ಎಂಬುದು ನೆನಪಿರಲಿ. ನಿಮಗೆ ಬೇಕಾದ ಸಮಯ ಹಾಗೂ ಚಾನೆಲ್ ವಿವರಣೆಯೊಂದಿಗೆ ಡಿಟಿಎಚ್ ಕಂಪನಿಗಳು ನೀಡುವ ನಂಬರಿಗೆ ಎಸ್ಎಂಎಸ್ ಮಾಡಿದರೆ ಸಾಕು, ನಿಮ್ಮಿಷ್ಟದ ಸಿನಿಮಾ ನಿಮ್ಮ ಮನೆಯಲ್ಲಿ ನಿಮ್ಮ ಟಿವಿ ಪರದೆ ಮೇಲೆ ಮೂಡುತ್ತದೆ. 'ಇದು ನಮಗೇನೋ ಅನುಕೂಲ, ಆದರೆ ಚಿತ್ರಮಂದಿರಗಳಿಗೆ ದೊಡ್ಡ ಹೊಡೆತವಲ್ಲವೇ' ಎಂಬ ನಿಮ್ಮ ಪ್ರಶ್ನೆಗೆ 'ಖಂಡಿತ ಹೌದು' ಎಂಬುದೇ ಉತ್ತರ. ಕಾಲಾಯ ತಸ್ಮೈ ನಮಃ... (ಒನ್ ಇಂಡಿಯಾ ಕನ್ನಡ)

    English summary
    There is news that anyone can watch movies in their home itself at released day only. It will possible from 4 G DTH facility all over the world. But now, there will be a experiment for few cities like Delhi, kolkata, Mumbai and Hyderabad very soon.
    Monday, May 14, 2012, 13:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X