For Quick Alerts
  ALLOW NOTIFICATIONS  
  For Daily Alerts

  'ಕನ್ನಡದ ಕೋಟ್ಯಧಿಪತಿ' ಶೋ ವಿರುದ್ಧ ಪ್ರತಾಪ್ ಸಿಂಹ ಪತ್ನಿ ಅಸಮಾಧಾನ

  By Bharath Kumar
  |
  Kannadada Kotyadipathi season 3: ಕನ್ನಡದ ಕೋಟ್ಯಾಧಿಪತಿ ವಿರುದ್ಧ ಪ್ರತಾಪ್ ಸಿಂಹ ಪತ್ನಿ ಗರಂ...!!

  'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಒಂದು ಅವಾಂತರ ನಡೆದಿರುವ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರ ಪತ್ನಿ ಅರ್ಪಿತಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಎಪಿಸೋಡ್ ಒಂದರಲ್ಲಿ ಸ್ಪರ್ಧಿಯೊಬ್ಬರು ಸರಿ ಉತ್ತರ ಕೊಟ್ಟಿದ್ದರೂ, ತಪ್ಪು ಉತ್ತರವೆಂದು ಘೋಷಿಸಿದ್ದಾರೆ ಎಂದು ವಿವರಣೆ ಕೇಳುತ್ತಿದ್ದಾರೆ.

  ಮಹಾಭಾರತದ ಪ್ರಕಾರ, ಪಾಂಡವರ ರಾಜಧಾನಿ ಯಾವುದು.? ಎಂದು ಕೇಳಲಾಗಿತ್ತು. ಇದಕ್ಕೆ A-ಇಂದ್ರಪ್ರಸ್ಥ B-ಹಸ್ತಿನಾಪುರ C-ಕುರುಕ್ಷೇತ್ರ D-ಅಂಗ ಎಂಬ ಆಯ್ಕೆಗಳನ್ನ ನೀಡಲಾಗಿತ್ತು. ವಿದ್ಯಾರಾಣಿ ಎಂಬುವವರು B ಹಸ್ತಿನಾಪುರ ಎಂದು ಉತ್ತರ ನೀಡಿದ್ದರು. ಇದು ತಪ್ಪು ಉತ್ತರವೆಂದು ಘೋಷಿಸಲಾಯಿತು. ಆದ್ರೆ, ಇದು ಸರಿ ಉತ್ತರ ಎಂದು ಅರ್ಪಿತಾ ಅವರು ಸಮರ್ಥಿಸಿಕೊಂಡಿದ್ದಾರೆ.

  ಸರಳ ಪ್ರಶ್ನೆಗೆ ಕನ್ ಪ್ಯೂಸ್ ಮಾಡಿಕೊಂಡು ಆಟದಿಂದ ಹೊರಬಿದ್ದ ಸ್ಪರ್ಧಿಸರಳ ಪ್ರಶ್ನೆಗೆ ಕನ್ ಪ್ಯೂಸ್ ಮಾಡಿಕೊಂಡು ಆಟದಿಂದ ಹೊರಬಿದ್ದ ಸ್ಪರ್ಧಿ

  ವಿದ್ಯಾರಾಣಿ ಅವರು ನೀಡಿದ್ದ ಉತ್ತರ ಸರಿ ಎಂದು ವಾದ ಮಂಡಿಸಿರುವ ಅರ್ಪಿತಾ ಸಿಂಹ ಅವರು ಪಾಂಡವರ ರಾಜಧಾನಿ ಯಾವುದು ಎಂಬುದರ ಒಂದು ವಿವರಣೆ ಕೂಡ ನೀಡಿದ್ದಾರೆ. ಪೂರ್ತಿ ಓದಿ ನಿಮ್ಮ ಅಭಿಪ್ರಾಯ ತಿಳಿಸಿ.?

  ಹಸ್ತಿನಾಪುರದ ಇತಿಹಾಸ

  ಹಸ್ತಿನಾಪುರದ ಇತಿಹಾಸ

  ಚಂದ್ರವಂಶದ ಹಸ್ತಿ ಹೆಸರಿನ ಒಬ್ಬ ರಾಜ ರಾಜ್ಯ ಅಭಿವೃದ್ದಿ ಮಾಡುವ ದೃಷ್ಠಿಯಿಂದ ಅಂದಿನ ಹೆಸರಾಂತ ಕಲಾಶಿಲ್ಪಿಗಳನ್ನ ಕರೆಸಿ ಈ ಪಟ್ಟಣದ ಮೂಲ ನಕ್ಷೆ ನಿರ್ಮಿಸಿ, ಪಟ್ಟಣವನ್ನ ಕಟ್ಟಿ, ಅದಕ್ಕೆ ಹಸ್ತಿನಾವತಿ ಎಂದು ನಾಮಕರಣ ಮಾಡುತ್ತಾನೆ ,ಇದೇ ಸ್ಥಳದಲ್ಲಿ ಪಾಂಡವರು ನೆಲೆಸಿದ್ದರು. ದೃತರಾಷ್ಟ್ರ ಪಾಂಡವರನ್ನ ಕರೆದು ಅರ್ಧ ರಾಜ್ಯವನ್ನ ಹಂಚಿದಾಗ ಹಸ್ತಿನಾವತಿ ಪಾಂಡವರ ಬಳಿಯೇ ಉಳಿಯುತ್ತದೆ. ಆದರೆ ಅವರು ಜೂಜಿನಲ್ಲಿ ಇಡೀ ರಾಜ್ಯವನ್ನ ಸೋತಿರುತ್ತಾರೆ. ಅಲ್ಲದೆ ಜೂಜಿನಲ್ಲಿ ಸೋತ ನಂತರ ಪಾಂಡವರು ಸಂಪೂರ್ಣವಾಗಿ ಹಸ್ತಿನಾವತಿಯಲ್ಲೆ ನೆಲೆಸಿರುತ್ತಾರೆ ಅದನ್ನೇ ರಾಜಧಾನಿ ಎಂದು ಘೋಷಣೆ ಸಹ ಮಾಡುತ್ತಾರೆ.

  ಯಾವುದು ನಿಜವಾದ ರಾಜಧಾನಿ

  ಯಾವುದು ನಿಜವಾದ ರಾಜಧಾನಿ

  ಇದಾದ ಕೆಲ ವರ್ಷಗಳ ಬಳಿಕ ಮರಳುಗಾಡಿನ ಪ್ರದೇಶವಾಗಿದ್ದ ಹಸ್ತಿನಾವತಿಗೆ ಭಾರೀ ಗಾಳಿ ಬೀಸಿ ಹಳ್ಳದ ಪ್ರದೇಶದಲ್ಲಿದ್ದ ಹಸ್ತಿನಾವತಿ ಮರಳಿನಲ್ಲಿ ಮುಳುಗಡೆಯಾಗುತ್ತದೆ. ಆಗ ಹಸ್ತಿನಾಪುರದ ಪಕ್ಕದಲ್ಲೇ ಇಂದ್ರಪ್ರಸ್ಥ ಪಟ್ಟಣವನ್ನ ಪಾಂಡವರು ವಿಶ್ವಕರ್ಮ ಎಂಬ ಶಿಲ್ಪಿಯ ಸೂಚನೆಯಂತೆ ನಿರ್ಮಾಣ ಮಾಡಿಸುತ್ತಾರೆ. ಕೊನೆಗೆ ಅದೇ ರಾಜಧಾನಿಯಾಗಿ ಉಳಿಯುತ್ತದೆ. ಇದು ಮಹಾಭಾರತದಲ್ಲಿ ಇರುವ ಮಾಹಿತಿ ಹಾಗೂ ಅದರ ಉಪಕಥೆಗಳಲ್ಲಿ ಉಲ್ಲೇಖವಾಗಿರುವ ಅಂಶಗಳು.

  ಸ್ಪಷ್ಟನೆ ನೀಡಿ

  ಸ್ಪಷ್ಟನೆ ನೀಡಿ

  ನಿಮ್ಮ ವಾಹಿನಿಯಲ್ಲಿ ಪ್ರಸಾರವಾದ ಪ್ರಶ್ನೆಗೆ ನನ್ನೊಬ್ಬಳದ್ದೆ ಮಾತ್ರ ತಕರಾರು ಇದ್ದ ಹಾಗೆ ಇಲ್ಲ ರಾಜ್ಯದ ಇತರೆ ಭಾಗದಿಂದ ಕೆಲ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ನಿಮ್ಮನ್ನ ಪ್ರಶ್ನಿಸಿದ್ದಾರೆ ಆದರೆ ನೀವು ಉತ್ತರಿಸುವ ಗೋಜಿಗೇ ಹೋಗಿಲ್ಲ. ಜೊತೆಗೆ ರಾಜ್ಯದ ಪ್ರತಿಷ್ಠಿತ ಪತ್ರಿಕೆಯಾದ ಪ್ರಜಾವಾಣಿಯ ಜುಲೈ 13ರ ಸಂಚಿಕೆಯಲ್ಲಿ ಡಾ.ಈಶ್ವರ ಶಾಸ್ತ್ರಿ ಮೋಟಿನಸರ ಎಂಬುವವರು ಬರೆದಿರುವ ಪತ್ರದ ಸಾರಾಂಶವು ಪತ್ರಿಕೆಯಲ್ಲಿ ಮುದ್ರಣವಾಗಿದೆ.

  ಗೊಂದಲ ಯಾರದ್ದು.?

  ಗೊಂದಲ ಯಾರದ್ದು.?

  ಹಾಗಾದ್ರೆ ಮಹಾಭಾರತದ ಪ್ರಕಾರ ನಿಮ್ಮ ಪ್ರಶ್ನೆಗೆ ಇಂದ್ರಪ್ರಸ್ಥ ಪಾಂಡವರ ರಾಜಧಾನಿಯೋ ಅಥವ ಸ್ಟಾರ್‌ ಸುವರ್ಣ ವಾಹಿನಿಯವರ ಪ್ರಕಾರವೋ...ಇತಿಹಾಸದಲ್ಲಿರುವುದನ್ನ ಬಿತ್ತರಿಸುವ ಮೊದಲು ಅವಲೋಕನ ಮಾಡಿ ಬಿತ್ತರಿಸಬೇಕಲ್ಲವೇ ... ನಿಮಗೆ ತಿಳಿದ ಇತಿಹಾಸಕ್ಕೂ ದಾಖಲೆಯಲ್ಲಿರುವ ಇತಿಹಾಸಕ್ಕೂ ಹೊಂದಾಣಿಕೆ ಏಕೆ ಇಲ್ಲ ?.....

  ದಾಖಲೆ ಒದಗಿಸಿ

  ದಾಖಲೆ ಒದಗಿಸಿ

  ''ಕೊನೆಯದಾಗಿ ನೀವು ಯಾವ ಆದಾರದ ಮೇಲೆ ಉತ್ತರವನ್ನು ತಪ್ಪು ಎಂದು ನಿರ್ಧರಿಸಿದಿರೆಂದು ತಿಳಿಸಿ... ನೀವು ಕೇಳಿದ ಪ್ರಶ್ನೆಗೆ 'ಹಸ್ತಿನಾಪುರ' ಉತ್ತರ ತಪ್ಪು ಎಂದಾದರೆ ನಿಮ್ಮ ಪ್ರಶ್ನೆಯಲ್ಲಿಯೇ ಲೋಪ ಕಾಣುವುದಿಲ್ಲವೇ ? ನಿಮಗೆ ನಿಮ್ಮ ನಿಲುವು ಸರಿ ಇದೆ ಎಂದಾದರೆ ಅಥವ ದಾಖಲೆ ಇದ್ರೆ ಯಾವ ರೂಪದಲ್ಲಾದ್ರು ಇದಕ್ಕೆ ಸ್ಪಷ್ಠೀಕರಣ ನೀಡಿ ಇಲ್ಲವಾದಲ್ಲಿ ನಾವಂದುಕೊಂಡದ್ದೇ ಕೋಟ್ಯಾಧೀಪತಿ ಕಾರ್ಯಕ್ರಮದಲ್ಲಿ ನಡೆದಿದೆ ಎಂದು ಭಾವಿಸಬೇಕಾಗುತ್ತದೆ .... ನಿಮ್ಮ ಸ್ಪಷ್ಠೀಕರಣದ ನಿರೀಕ್ಷೆಯಲ್ಲಿ...'' ಎಂದು ಬರೆದುಕೊಂಡಿದ್ದಾರೆ.

  English summary
  Mp Pratap Simha's wife has expressed displeasure over the Kannadada Kotyadhipathi programme.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X