»   » ಲಹರಿ ವೇಲು ಆವಾಜ್ಗೆ ಅಲುಗಾಡಿದ ಮಿಸ್ಟರ್ ಐರಾವತ!

ಲಹರಿ ವೇಲು ಆವಾಜ್ಗೆ ಅಲುಗಾಡಿದ ಮಿಸ್ಟರ್ ಐರಾವತ!

Posted By: ಜೀವನರಸಿಕ
Subscribe to Filmibeat Kannada

ನಿಮ್ಗೆ ಗೊತ್ತಿರಬೇಕು ದರ್ಶನ್ ಅವ್ರ ಬುಲ್ ಬುಲ್ ಸಿನಿಮಾ ಮೂಲಕ 'ಡಿ ಬೀಟ್ಸ್' ಅನ್ನೋ ಆಡಿಯೋ ಕಂಪನಿ ಆರಂಭಿಸಿದ್ರು ಸಂಗೀತ ನಿರ್ದೇಶಕ ವಿ ಹರಿಕೃಷ್ಣ. ಒಂದೇ ವರ್ಷದಲ್ಲಿ ಡಿ ಬೀಟ್ಸ್ ಆಡಿಯೋ ಕಂಪೆನಿ 25 ಸಿನಿಮಾ ಆಡಿಯೋ ಪಡೆದುಕೊಳ್ಳೋ ಮೂಲಕ ಭರ್ಜರಿ ಓಪನಿಂಗ್ ಪಡ್ಕೊಳ್ತು.

ದರ್ಶನ್ ಅವ್ರ ಯಾವುದೇ ಸಿನಿಮಾಗಳಾದ್ರೂ ಅದ್ರ ಆಡಿಯೋ ಸಹಜವಾಗೀನೇ 'ಡಿ ಬೀಟ್ಸ್' ಪಾಲಾಗ್ತಿತ್ತು. ಆದ್ರೆ ಈಗ ಅಚ್ಚರಿ ಘಟಿಸಿ ಹೋಗಿದೆ. ಮಿಸ್ಟರ್ ಐರಾವತ ಆಡಿಯೋ ಲಹರಿ ಪಾಲಾಗಿದೆ. ಲಹರಿ ವೇಲು ಐರಾವತ ಆಡಿಯೋಗಾಗಿ ಪಟ್ಟು ಹಿಡಿದಿದ್ದೆ ಇದಕ್ಕೆ ಕಾರಣ ಅನ್ನೋ ಸುದ್ದಿ ಬಂದಿದೆ. [ಬಾಕ್ಸಾಫೀಸ್ ಸುಲ್ತಾನ 'ಐರಾವತ', ನ್ಯೂ ಲುಕ್ ಪೋಸ್ಟರ್ ಔಟ್]


Mr Airavata audio right goes to Lahari Velu

ಲಹರಿ ಆಡಿಯೋ ಸಂಸ್ಥೆಯ ಅಡಿಯಲ್ಲಿ ಬರೋ ಮಹೇಶ್ ಬಾಬು ಅಭಿನಯದ ಆಘಡು ಸಿನಿಮಾದ ಮ್ಯೂಸಿಕ್ ಬಿಟ್ ಒಂದನ್ನ ಮಿಸ್ಟರ್ ಐರಾವತ ಚಿತ್ರದ ಹಾಡೊಂದರಲ್ಲಿ ಬಳಸಿಕೊಳ್ಳಲಾಗಿದೆ. ಹಾಗಾಗಿ ಐರಾವತ ಆಡಿಯೋ ಹಕ್ಕುಗಳನ್ನ ನಮಗೆ ಕೊಡಬೇಕು ಅಂತ ಲಹರಿ ವೇಲು ಪಟ್ಟು ಹಿಡಿದಿದ್ದರಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಯಾವುದೇ ಚಾಲೆಂಜ್ ಹಾಕದೇ ಸುಮ್ಮನಾದ್ರಂತೆ.[ಮುಂಬೈನಲ್ಲಿ 'ಜಗ್ಗು ದಾದಾ' ದರ್ಶನ್ ಜೊತೆ ಸೃಜ ಮಜಾ]


ಹರಿಕೃಷ್ಣ ಹಲವು ಸೂಪರ್ ಡೂಪರ್ ಹಿಟ್ ಆಲ್ಬಂ ಕೊಟ್ಟಿರೋ ನಿರ್ದೇಶಕರು. ಈಗ ಹೊರಬಂದಿರೋ 'ಮಿಸ್ಟರ್ ಐರಾವತ' ಕೂಡ ಅಷ್ಟೇ ಯಶಸ್ವೀ ಆಲ್ಬಂ. ಐರಾವತ ಸಿನಿಮಾ ಅಕ್ಟೋಬರ್ 1ರಂದು ತೆರೆಗೆ ಬರಲಿದ್ದು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಚಿತ್ರಕ್ಕಾಗಿ ಕಾದಿದ್ದಾರೆ.

English summary
Lahari Velu has bought the audio rights of Mr Airavata. The movie is directed by AP Arjun, V Harikrishnan has composed the songs. Darshan, Urvashi Rautela are in the lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada