For Quick Alerts
  ALLOW NOTIFICATIONS  
  For Daily Alerts

  ಮಿ. ಐರಾವತ ದರ್ಶನ್‌ಗೆ ಗೆಲುವಿನ ಸವಿ ನೀಡುವುದಾ?

  By ಜೀವನರಸಿಕ
  |

  ಆನೆ ಇದ್ದರೂ ಸಾವಿರ. ಸತ್ತರೂ ಸಾವಿರ ಅನ್ನೋ ಮಾತಿನಂತೇ ಮಿ. ಐರಾವತ ನಡೀತಿದೆ ಅನ್ನಿಸ್ತಿದೆ. ಐರಾವತ ಚಿತ್ರ ಅಕ್ಟೋಬರ್ ಒಂದಕ್ಕೆ ರಿಲೀಸಾಗೋದು ಪಕ್ಕಾ ಆಗ್ತಿದ್ದಂತೇ ಚಿತ್ರಮಂದಿರಗಳ ಓನರ್ಗಳು ಐರಾವತನ ಆಗಮನಕ್ಕೆ ರತ್ನಗಂಬಳಿ ಹಾಸಿ ಕಾದಿದ್ದಾರೆ.

  ಚಿತ್ರ ಒಂದೇ ದಿನ ವಿಶ್ವದಾದ್ಯಂತ ರಿಲೀಸಾಗ್ತಿದೆ. ಐರಾವತನ ಅಬ್ಬರದ ಆಗಮನಕ್ಕೆ ಕರ್ನಾಟಕದ 300 ಚಿತ್ರಮಂದಿರಗಳು ವೆಲ್ಕಮ್ ಹೇಳಲಿವೆ. ಎಲ್ಲವೂ ಸರಿ, ಆದ್ರೆ ಮಿ. ಐರಾವತನ ಬಗ್ಗೆ ಒಳಗೊಳಗೇ ಚಿತ್ರತಂಡಕ್ಕೇ ಆತಂಕವಿದ್ಯಾ ಅನ್ನೋ ಅನುಮಾನವೂ ಕಾಡೋಕೆ ಶುರುವಾಗಿದೆ.[ಮಿಸ್ಟರ್ ಐರಾವತನ ಬಗ್ಗೆ ಚಾಲೆಂಜಿಂಗ್ ಸ್ಟಾರ್ಗೇ ಡೌಟು!]

  ಐರಾವತ ಚಿತ್ರದ ಬಗ್ಗೆ ದರ್ಶನ್ ಮತ್ತು ಚಿತ್ರತಂಡದ ನಡೆಗಳು ಸ್ಯಾಂಡಲ್ವುಡ್ನಲ್ಲಿ ಅಚ್ಚರಿ ಮೂಡಿಸ್ತಿವೆ. ಶೂಟಿಂಗ್ಗೆ ನಾಲ್ಕು ತಿಂಗಳು ಮೀಸಲಿಟ್ಟ ದರ್ಶನ್ ಚಿತ್ರದ ಪ್ರೊಮೋಷನ್ಗೆ ನಾಲ್ಕು ದಿನವನ್ನೂ ಕೊಡ್ತಿಲ್ಲ ಯಾಕೆ? ಅನ್ನೋ ಅನುಮಾನ ಸಹಜವಾಗಿ ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಸದ್ಯಕ್ಕೆ ಎಲ್ಲವೂ ಪ್ರೇಕ್ಷಕ ದೊರೆಯ ಕೈಯಲ್ಲಿದೆ.

  ಬಾಂಬೆಯಲ್ಲಿದ್ದಾರೆ ದರ್ಶನ್

  ಬಾಂಬೆಯಲ್ಲಿದ್ದಾರೆ ದರ್ಶನ್

  ಐರಾವತ ರಿಲೀಸ್ಗೆ ಇನ್ನೊಂದು ವಾರವಷ್ಟೇ ಬಾಕಿ ಇದೆ. ಆದ್ರೆ ದರ್ಶನ್ ಜಗ್ಗೂದಾದ ಚಿತ್ರದ ಇನ್ನೊಂದು ಶೆಡ್ಯೂಲ್ನ ಶೂಟಿಂಗ್ಗಾಗಿ ಬಾಂಬೆಯಲ್ಲಿದ್ದಾರೆ. ಸದ್ಯಕ್ಕೆ ರಿಲೀಸ್ ದಿನದವರೆಗೂ ದರ್ಶನ್ ಬರೋದೂ ಇಲ್ಲ ಅಂತಿದೆ ಆಪ್ತವಲಯ.

  ಪ್ರೊಮೋಷನ್ ಮಾಡಲ್ಲ

  ಪ್ರೊಮೋಷನ್ ಮಾಡಲ್ಲ

  ಇನ್ನು ಮಿ. ಐರಾವತ ಚಿತ್ರಕ್ಕೆ ರಿಲೀಸ್ಗೂ ಮೊದಲು ಪ್ರೊಮೋಷನ್ ಮಾಡಲ್ಲ ಅಂತಿದೆ ಚಿತ್ರತಂಡ. ಚಿತ್ರವನ್ನ ರಿಲೀಸ್ನ ನಂತ್ರ ಪ್ರೊಮೋಷನ್ ಮಾಡೋ ಪ್ಲ್ಯಾನ್ ಹಾಕಿದ್ದೇವೆ ಅನ್ನೊದು ನಿರ್ದೇಶಕರ ಮಾತು.

  ದರ್ಶನ್ರಿಗೇ ಆಸಕ್ತಿ ಇಲ್ಲ?

  ದರ್ಶನ್ರಿಗೇ ಆಸಕ್ತಿ ಇಲ್ಲ?

  ಮಿಸ್ಟರ್ ಐರಾವತ ಚಿತ್ರಕ್ಕೆ ದರ್ಶನ್ ಡೆಡಿಕೇಷನ್ ನೋಡಿ ಸ್ಯಾಂಡಲ್ವುಡ್ ಸಿನಿಪ್ರೇಮಿಗಳು ಶಹಬ್ಬಾಸ್ ಅಂದಿದ್ದಾರೆ. ದರ್ಶನ್ ಚಿತ್ರಕ್ಕಾಗಿ ನಾಲ್ಕೈದು ತಿಂಗಳು ಜಿಮ್ನಲ್ಲಿ ಬೆವರು ಹರಿಸಿದ್ದಾರೆ. ಮಗ ವಿನೀತ್ನ ಎಂಟ್ರಿಯಾಗಿರೋ ಸಿನಿಮಾ ಕೂಡ ಐರಾವತ. ಆದ್ರೆ ಹಿಂದಿನ ಎರಡು ಸೋಲುಗಳನ್ನ ತೂಗಿಸಿಕೊಳ್ಳೋಕೆ ದರ್ಶನ್ ಈ ಚಿತ್ರಕ್ಕೆ ಹೆಚ್ಚಿನ ಪಬ್ಲಿಸಿಟಿ ಕೊಡಬೇಕಿತ್ತಲ್ವಾ?

  ಮಾಧ್ಯಮದ ಬಗ್ಗೆ ಅಸಡ್ಡೆ

  ಮಾಧ್ಯಮದ ಬಗ್ಗೆ ಅಸಡ್ಡೆ

  ದರ್ಶನ್ ಸಹಜವಾಗಿ ಮಾಧ್ಯಮಗಳಿಂದ ಒಂದು ಅಂತರ ಕಾಪಾಡಿಕೊಳ್ಳೋ ನಟ. ಸೋ ತಾವೇ ರಿಲೀಸ್ಗೂ ಮೊದಲೇ ಮೀಡಿಯಾ ಮುಂದೆ ಬರೋದು ಬೇಡ ಅಂತ ನಿರ್ಧಾರ ಮಾಡಿದ್ದಾರೆ. ಇದ್ರಿಂದ ಹಲವು ಮುಜುಗರದ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಬಹುದು ಅನ್ನೋ ಯೋಚನೆ ಇರಬಹುದು.

   ಖಾನ್ ರಂಥ ಸೂಪರ್ಸ್ಟಾರ್ಗಳೇ ಬರ್ತಾರೆ

  ಖಾನ್ ರಂಥ ಸೂಪರ್ಸ್ಟಾರ್ಗಳೇ ಬರ್ತಾರೆ

  ಆದ್ರೆ ಸಲ್ಮಾನ್ ಶಾರುಖ್ರಂತಹಾ ಸೂಪರ್ಸ್ಟಾರ್ಗಳು ತಮ್ಮ ಸಿನಿಮಾ ರಿಲೀಸ್ ಅಂದ್ರೆ ಹಿಂದಿಯಲ್ಲಿರೋ 10-15 ಚಾನೆಲ್ಗಳಿಗೂ ಹೋಗಿಬರ್ತಾರೆ. ಇವ್ರಿಗೆ ಅದ್ರ ಅವಶ್ಯಕತೆ ಇಲ್ಲವಾ ಅಂತ ಕೇಳುತ್ತಿದೆ ಮಾಧ್ಯಮ ವಲಯ..

  ಸೋತರೆ ದರ್ಶನ್‌ಗೆ ಹ್ಯಾಟ್ರಿಕ್

  ಸೋತರೆ ದರ್ಶನ್‌ಗೆ ಹ್ಯಾಟ್ರಿಕ್

  ಮಿ. ಐರಾವತದ ಬಗ್ಗೆ ದರ್ಶನ್ ಇದು ನೂರು ದಿನದ ಸಿನಿಮಾ ಅಲ್ಲ ಅಂತ ಹೇಳಿರೋದು ನೋಡಿದ್ರೆ, ಚಿತ್ರದ ಬಗ್ಗೆ ಚಾಲೆಂಜಿಂಗ್ಸ್ಟಾರ್ ಯಾಕೆ ಹೀಗಂದ್ರು ಅನ್ನೋ ಚರ್ಚೆ ಶುರುವಾಗಿದೆ. ಆದ್ರೆ ಸೋತರೆ ಬೃಂದಾವನ, ಅಂಬರೀಷ ನಂತ್ರ ದರ್ಶನ್ ಎರಡು ವರ್ಷಗಳಲ್ಲಿ ಸೋಲಿನ ಹ್ಯಾಟ್ರಿಕ್ ಹೊಡೆಯಲಿದ್ದಾರೆ.

  ಮೂರನೇ ಗೆಲುವಿನ ನಿರೀಕ್ಷೆಯಲ್ಲಿ ಅರ್ಜುನ್

  ಮೂರನೇ ಗೆಲುವಿನ ನಿರೀಕ್ಷೆಯಲ್ಲಿ ಅರ್ಜುನ್

  ನಿರ್ದೇಶಕ ಅರ್ಜುನ್ಗೆ ಇದು ಗೆಲುವಿನ ಹ್ಯಾಟ್ರಿಕ್ ಹೊಡೆಯೋ ಸಿನಿಮಾ. ಈ ಹಿಂದೆ ಬಂದ ಅಂಬಾರಿ, ಅದ್ಧೂರಿ ನಂತ್ರ ಅರ್ಜುನ್ ರಾಟೆಯನ್ನ ಮಾಡಿ ಮೂರನೇ ಸಿನಿಮಾದಲ್ಲಿ ಸೋತಿದ್ದಾರೆ. ಹಾಗಾಗಿ ಇದು ಮೂರನೇ ಗೆಲವು ಪಡೆಯೋ ಖುಷಿಯಲ್ಲಿದ್ದಾರೆ ಅರ್ಜುನ..

   ವರ್ಕೌಟ್ ಆಗೋದು ಯಾರ ಟ್ರಿಕ್ಕು?

  ವರ್ಕೌಟ್ ಆಗೋದು ಯಾರ ಟ್ರಿಕ್ಕು?

  ಚಿತ್ರಕ್ಕಾಗಿ ನಿರ್ದೇಶಕ ಅರ್ಜುನ್ ಬೆವರಿನ ಜೊತೆ `ರಕ್ತ'ವನ್ನೂ ಸುರಿಸಿ ದುಡಿದಿದ್ದಾರೆ ಅಂತಿದೆ ಚಿತ್ರತಂಡ. ಯಾರಿಗೆ ಹ್ಯಾಟ್ರಿಕ್ ಯಾವ ಹ್ಯಾಟ್ರಿಕ್ಕು. ವರ್ಕೌಟ್ ಆಗೋದು ಯಾರ ಟ್ರಿಕ್ಕು.. ಕಾದುನೋಡ್ಬೇಕು..

  English summary
  Challenging Star Darshan's ambitious Kannada movie Mr. Airavata is getting released on October 1 all over the world on same day. Expectations are huge on Darshan's shoulder. But, recent developments are telling some other story. Will Darshan taste success or face hattrick defeat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X