»   » ಬಾಕ್ಸ್ ಆಫೀಸಲ್ಲಿ ಭರ್ಜರಿ ಓಪನಿಂಗ್ ಪಡೆದ 'ರಾಮಾಚಾರಿ'

ಬಾಕ್ಸ್ ಆಫೀಸಲ್ಲಿ ಭರ್ಜರಿ ಓಪನಿಂಗ್ ಪಡೆದ 'ರಾಮಾಚಾರಿ'

Posted By:
Subscribe to Filmibeat Kannada

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ಬಾಕ್ಸ್ ಆಫೀಸಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ ಮಿಂಚಿದ್ದಾರೆ. 1972ರಲ್ಲಿ ತೆರೆಕಂಡ 'ನಾಗರಹಾವು' ಚಿತ್ರದಲ್ಲಿ ವಿಷ್ಣುವರ್ಧನ್ ಪೋಷಿಸಿದ್ದ ಪಾತ್ರದಲ್ಲಿ ಯಶ್ ಗಮನಸೆಳೆಯುತ್ತಾರೆ.

ರಾಧಿಕಾ ಪಂಡಿತ್ ಹಾಗೂ ಯಶ್ ಜೋಡಿ ಮತ್ತೊಮ್ಮೆ ತೆರೆಯ ಮೇಲೆ ಮೋಡಿ ಮಾಡಿದ್ದು, ಅಭಿಮಾನಿಗಳ ಕಣ್ಣಿಗೆ ದೀಪಾವಳಿ ಹಬ್ಬದಂತೆ ಮೂಡಿಬಂದಿದೆ. ಇದಿಷ್ಟೇ ಅಲ್ಲದೆ ಮೂಗಿನ ತುದಿಯಲ್ಲೇ ಕೋಪ, ಸೊಕ್ಕು, ಓದು ಅಂದ್ರೆ ಅಲರ್ಜಿ, ನೋಡೋಕೆ ಒರಟ ಆದ್ರೂ ಹೃದಯವಂತ 'ರಾಮಾಚಾರಿ'ಯಾಗಿ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ ಯಶ್. [ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರ ವಿಮರ್ಶೆ]

Mr and Mrs Ramachari Box Office report

ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿಯಾಗಿ, ಹುಡುಗಿಯರಿಂದ ಮಾರುದ್ದ ದೂರ ನಿಲ್ಲುವ ಯುವ ರಾಮಾಚಾರಿಯ (ಯಶ್) ಹಿಂದೆ 'ಮಾರ್ಗರೇಟ್' ಬೀಳುತ್ತಾಳೆ. ''ನಾನು ಪಕ್ಕಾ ಮಾಸ್'' ಅಂತ ಬೀಗುವ ರಾಮಾಚಾರಿಗೆ ಕ್ಲಾಸ್ ಹುಡುಗಿ ಮಾರ್ಗರೇಟ್ (ರಾಧಿಕಾ ಪಂಡಿತ್) ಕ್ಲೀನ್ ಬೌಲ್ಡ್ ಆಗುತ್ತಾಳೆ. ಅಲ್ಲಿಂದ ನಡೆಯುವುದೇ ಇಬ್ಬರ ಲವ್ವಿ-ಡವ್ವಿ ಕಹಾನಿ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಡಿಸೆಂಬರ್ 25ರ ಕ್ರಿಸ್ಮಸ್ ಹಬ್ಬಕ್ಕೆ ತೆರೆಕಂಡಿರುವ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ಒಂದೇ ದಿನಕ್ಕೆ ರು.3 ಕೋಟಿ ಕಲೆಕ್ಷನ್ ಮಾಡಿದೆ ಎನ್ನುತ್ತವೆ ಬಾಕ್ಸ್ ಆಫೀಸ್ ಮೂಲಗಳು. ವಾರಾಂತ್ಯ ಕಳೆಯುವಷ್ಟರದಲ್ಲಿ ಸಿಕ್ಕಾಪಟ್ಟೆ ಕಲೆಕ್ಷನ್ ಆಗುವ ಸಾಧ್ಯತೆಗಳು ಇವೆ.

'ಗಜಕೇಸರಿ' ಚಿತ್ರದ ಬಳಿಕ ಯಶ್ ಚಿತ್ರವನ್ನು ಪ್ರೇಕ್ಷಕರು ನಿರೀಕ್ಷಿಸುವಂತಾಗಿತ್ತು. ಅವರ ನಿರೀಕ್ಷೆಗೆ ತಕ್ಕಂತೆ 'ರಾಮಾಚಾರಿ' ಸಹ ಇರುವುದು ನಿರ್ಮಾಪಕರ ಪಾಲಿಗೆ ಡಾರ್ಲಿಂಗ್ ಆಗಿದ್ದಾರೆ ಯಶ್. ಸ್ವಾಭಿಮಾನಕ್ಕೂ ಜೈ ಪ್ರೀತಿಗೂ ಸೈ ಎನ್ನುವ ರಾಮಾಚಾರಿ ಅತ್ತ ವಿಷ್ಣು ಇತ್ತ ಯಶ್ ಅಭಿಮಾನಿಗಳಿಗೆ ಭರ್ಜರಿ ಸಿನಿಮಾ. (ಫಿಲ್ಮಿಬೀಟ್ ಕನ್ನಡ)

English summary
A Must Watch Mr and Mrs Ramachari, which was already making news even before its release has broken all the records and has collected Rs 3 crores on the first day at box office. The makers are pretty sure that the movie will collect even more in the upcoming days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada