Don't Miss!
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Exclusive: ಹುಟ್ಟುಹಬ್ಬಕ್ಕೆ ಯಶ್ ವೃತ್ತಿ ಜೀವನಕ್ಕೆ ತಿರುವು ಕೊಟ್ಟ ಸಿನಿಮಾ ರೀ ರಿಲೀಸ್
ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಇದೇ ಭಾನುವಾರ ಯಶ್ 37ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಅಭಿಮಾನಿಗಳು ಆ ದಿನ ನೆಚ್ಚಿನ ನಟನನ್ನು ನೋಡಿ ವಿಶ್ ಮಾಡಲು ಕಾಯುತ್ತಿದ್ದಾರೆ. ಈ ಸಂಭ್ರಮ ಡಬಲ್ ಮಾಡಲು 'ರಾಮಾಚಾರಿ' ಕೂಡ ಬರ್ತಿದ್ದಾನೆ.
ಟಾಲಿವುಡ್, ಕಾಲಿವುಡ್‌ನಲ್ಲಿ ಸೂಪರ್ ಹಿಟ್ ಸಿನಿಮಾಗಳ ರೀ ರಿಲೀಸ್ ಟ್ರೆಂಡ್ ನಡೀತಿದೆ. ಸ್ಟಾರ್ ನಟರ ಹುಟ್ಟುಹಬ್ಬಕ್ಕೆ ಅವರ ಸೂಪರ್ ಹಿಟ್ ಸಿನಿಮಾಗಳನ್ನು ಹೊಸ ರೂಪದಲ್ಲಿ ತೆರೆಗೆ ತರುವ ಪ್ರಯತ್ನ ನಡೀತಿದ್ದು, ಅದಕ್ಕೆ ಸಕ್ಸಸ್ ಕೂಡ ಸಿಗುತ್ತಿದೆ. ಇತ್ತೀಚೆಗೆ ಹೊಸ ವರ್ಷದ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ ಪವನ್ ಕಲ್ಯಾಣ್ ನಟನೆಯ 'ಖುಷಿ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಈ ಬಾರಿ ಯಶ್ ಹುಟ್ಟುಹಬ್ಬಕ್ಕೆ 'Mr & Mrs ರಾಮಾಚಾರಿ' ಸಿನಿಮಾ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದೆ. ಅಭಿಮಾನಿಗಳು ಕೂಡ ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ.
Exclusive:
ಯಶ್,
ರಾಮ್‌ಚರಣ್,
ವಿಜಯ್
ಮೂವರಲ್ಲಿ
ಯಾರ
ಜೊತೆ
ನರ್ತನ್
2ನೇ
ಚಿತ್ರ?
ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'Mr & Mrs ರಾಮಾಚಾರಿ' ಸಿನಿಮಾ 8 ವರ್ಷಗಳ ಹಿಂದೆ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಅಲ್ಲಿಯವರೆಗಿನ ಎಲ್ಲಾ ಕನ್ನಡ ಸಿನಿಮಾಗಳ ಬಾಕ್ಸಾಫೀಸ್ ದಾಖಲೆ ಅಳಿಸಿ ಇಂಡಸ್ಟ್ರಿ ಹಿಟ್ ಲಿಸ್ಟ್ ಸೇರಿತ್ತು.

ಜನವರಿ 8ಕ್ಕೆ ಚಿತ್ರ ರೀ ರಿಲೀಸ್
ಜಯಣ್ಣ ಕಂಬೈನ್ಸ್ ಬ್ಯಾನರ್‌ನಲ್ಲಿ 'Mr & Mrs ರಾಮಾಚಾರಿ' ಸಿನಿಮಾ ನಿರ್ಮಾಣವಾಗಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅಂದಾಜು 50 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಈ ಬಾರಿ ಯಶ್ ಹುಟ್ಟುಹಬ್ಬಕ್ಕೆ ಈ ಚಿತ್ರವನ್ನು ರೀ ರಿಲೀಸ್ ಮಾಡುತ್ತಿರುವುದಾಗಿ ನಿರ್ಮಾಪಕರಾದ ಜಯಣ್ಣ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ. ಆ ಒಂದು ದಿನ ಮಾತ್ರ ಸಿನಿಮಾ ಪ್ರದರ್ಶನ ನಡೆಯಲಿದೆ. ಮುಂದೆ ಪ್ರೇಕ್ಷಕರ ರೆಸ್ಪಾನ್ಸ್ ನೋಡಿಕೊಂಡು ಸಿನಿಮಾ ಪ್ರದರ್ಶನ ಮುಂದುವರೆಸಲಾಗುತ್ತದೆ.

ಸಿನಿಮಾ ರೀ ರಿಲೀಸ್‌ಗೆ ಸಿದ್ಧತೆ
'Mr & Mrs ರಾಮಾಚಾರಿ' ಚಿತ್ರದಲ್ಲಿ 'ನಾಗರಹಾವು' ವಿಷ್ಣುವರ್ಧನ್ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದರು. ಕಾಲೇಜು ಹುಡುಗನಾಗಿ ಅಬ್ಬರಿಸಿದ್ದರು. ನಾಯಕಿಯಾಗಿ ರಾಧಿಕಾ ಪಂಡಿತ್ ಮಿಂಚಿದ್ದರು. ಈ ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರಕ್ಕೆ ವಿ. ಹರಿಕೃಷ್ಣ ಮ್ಯೂಸಿಕ್ ಪ್ಲಸ್ ಆಗಿತ್ತು. ಯಶ್ ಚಿತ್ರದ ಕಥೆಯ ಬಗ್ಗೆ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ತಿದ್ದಿ ತೀಡಿದ್ದರು. ತಮ್ಮದೇ ರಿಯಲ್ ಲವ್‌ಸ್ಟೋರಿಯನ್ನು ತೆರೆಮೇಲೆ ತೋರಿಸುವ ಪ್ರಯತ್ನ ಮಾಡಿದ್ದರು. ಈಗಾಗಲೇ 10ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ರೀ ರಿಲೀಸ್ ಆಗೋದು ಪಕ್ಕಾ ಆಗಿದ್ದು, ಶನಿವಾರದ ವೇಳೆಗೆ ಸಂಖ್ಯೆ ಮತ್ತಷ್ಟು ಹೆಚ್ಚುವ ಸುಳಿವು ಸಿಕ್ತಿದೆ.

8 ವರ್ಷ ಪೂರೈಸಿದ್ದ ಸಿನಿಮಾ
2014, ಡಿಸೆಂಬರ್ 25ರಂದು 'Mr & Mrs ರಾಮಾಚಾರಿ' ಸಿನಿಮಾ ಬಿಡುಗಡೆ ಆಗಿತ್ತು. ಮೊದಲ ವಾರ ಸಿನಿಮಾ ಎಲ್ಲಾ ಕಡೆ ಹೌಸ್‌ಫುಲ್ ಆಗಿತ್ತು. ಕೆಲವೆಡೆ ಪ್ರೇಕ್ಷಕರು ಟಿಕೆಟ್‌ಗಾಗಿ ಪರದಾಡುವಂತಾಗಿತ್ತು. ಇತ್ರೀಚೆಗಷ್ಟೆ ಸಿನಿಮಾ 8 ವರ್ಷ ಪೂರೈಸಿತ್ತು. ಸಂತೋಷ್ ಆನಂದ್ ರಾಮ್ ನಿರ್ದೇಶನ, ವೈದಿ ಕ್ಯಾಮರಾ ವರ್ಕ್ ಎಲ್ಲವೂ ಚಿತ್ರಕ್ಕೆ ಬಲ ತುಂಬಿತ್ತು. ಶ್ರೀನಾಥ್, ಅಚ್ಯುತ್ ಕುಮಾರ್, ಮಾಳವಿಕಾ, ಅರುಣಾ ಬಾಲರಾಜ್ ಚಿತ್ರದ ತಾರಾಗಣದಲ್ಲಿದ್ದರು. ಎಲ್ಲಾ ಕಮರ್ಷಿಯಲ್ ಅಂಗಳನ್ನು ಹದವಾಗಿ ಬೆರಸಿ ಚಿತ್ರವನ್ನು ಸೊಗಸಾಗಿ ಕೊಟ್ಟಿಕೊಟ್ಟಿದ್ದರು.

ಬರ್ತ್‌ಡೇಗೆ ಯಶ್19 ಅನೌನ್ಸ್
'KGF - 2' ಸಿನಿಮಾ ರಿಲೀಸ್ ಆಗಿ 8 ತಿಂಗಳು ಕಳೆದರೂ ಯಶ್ ಹೊಸ ಸಿನಿಮಾ ಘೋಷಿಸಲಿಲ್ಲ. ಒಂದಷ್ಟು ಅಂತೆ ಕಂತೆ ಸುದ್ದಿಗಳು ಹರಿದಾಡಿದರೂ ಯಾವುದು ನಿಜ ಅಲ್ಲ ಎಂದು ಯಶ್ ಹೇಳಿದ್ದರು. ಹುಟ್ಟುಹಬ್ಬದ ಸಂಭ್ರಮದಲ್ಲೇ ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಡುವ ಸುಳಿವು ಸಿಗುತ್ತಿದೆ. ಇನ್ನು ಅಭಿಮಾನಿಗಳು ಮಧ್ಯರಾತ್ರಿಯಿಂದಲೇ ಯಶ್ ಮನೆ ಮುಂದೆ ಜಮಾಯಿಸಿ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಲು ತೀರ್ಮಾನಿಸಿದ್ದಾರೆ. 'Mr & Mrs ರಾಮಾಚಾರಿ' ರೀ ರಿಲೀಸ್ ಆಗಿ ಈ ಸಂಭ್ರಮ ಡಬಲ್ ಮಾಡಲಿದೆ.