»   » ರಾಕಿಂಗ್ ಸ್ಟಾರ್ v/s ರಾಕ್ ಸ್ಟಾರ್ ನಡುವೆ ಫೈಟ್

ರಾಕಿಂಗ್ ಸ್ಟಾರ್ v/s ರಾಕ್ ಸ್ಟಾರ್ ನಡುವೆ ಫೈಟ್

Posted By:
Subscribe to Filmibeat Kannada

ಕ್ರಿಸ್ಮಸ್ ಹಬ್ಬದಂದು ಸ್ಯಾಂಡಲ್ ವುಡ್ ನಲ್ಲಿ ಸಿನಿಮಾಗಳ ಜಾತ್ರೆ ನಡೆಯಲಿದೆ. ಒಂದ್ಕಡೆ ರಾಕಿಂಗ್ ಸ್ಟಾರ್ ಯಶ್, ಪ್ರೇಕ್ಷಕರನ್ನ ರಾಕ್ ಮಾಡುವುದಕ್ಕೆ ತೆರೆಮೇಲೆ ಬರಲಿದ್ರೆ, ಇನ್ನೊಂದ್ಕಡೆ, ನಿಜಜೀವನದಲ್ಲಿ ಜನರನ್ನ ಹುಬ್ಬೇರಿಸುವಂತೆ ಮಾಡಿದ್ದ ರಾಕ್ ಸ್ಟಾರ್ 'ಜೋತಿ ಅಲಿಯಾಸ್ ಕೋತಿರಾಜ್' ಬೆಳ್ಳಿಪರದೆ ಮೇಲೆ ಪ್ರತ್ಯಕ್ಷವಾಗ್ತಿದ್ದಾರೆ.

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಮೂಲಕ ತೆರೆಮೇಲೆ ಹಳೇ 'ರಾಮಾಚಾರಿ'ಯನ್ನು ನೆನಪಿಸುವುದರ ಜೊತೆಗೆ ರಾಕಿಂಗ್ ಸ್ಟಾರ್ ವಿಭಿನ್ನ ರೂಪಗಳಲ್ಲಿ ಮಿಂಚಲಿರುವ ಚಿತ್ರ ಇದು. [ಜೂನಿಯರ್ ಸಾಹಸಸಿಂಹನಾಗಿ ಘರ್ಜಿಸಿದ ಯಶ್]

Mr and Mrs Ramachari1

'ರಾಮಾಚಾರಿ'ಯ ರೋಷಾವೇಷವನ್ನು 'ಸ್ಯಾಂಡಲ್ ವುಡ್ ನ ನೂತನ ರಾಮಾಚಾರಿ' ಯಶ್ ಅನುಕರಣೆ ಮಾಡಿರುವುದು ಚಿತ್ರದ ಬಹುದೊಡ್ಡ ಸ್ಪೆಷಾಲಿಟಿ. ಸೊಕ್ಕಿನ 'ರಾಮಾಚಾರಿ'ಯ ಅಪ್ಪಟ ಭಕ್ತನಾಗಿರುವ ಯಶ್, ಚಿತ್ರಕ್ಕೋಸ್ಕರ ತಮ್ಮ ಎದೆಯ ಮೇಲೆ 'ರಾಮಾಚಾರಿ'ಯ ಚಿತ್ತಾರವನ್ನೂ ಅಚ್ಚಾಗಿಸಿಕೊಂಡಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಅಷ್ಟೇ ಅಲ್ಲದೇ, ಥೇಟ್ ಸಾಹಸಸಿಂಹ ವಿಷ್ಣು ಅವರಂತೆ ಕೈಗೆ ಖಡಗ ಧರಿಸಿ, ವಿಲನ್ ಗಳನ್ನ ಬಗ್ಗು ಬಡಿದಿದ್ದಾರೆ. ಮತ್ತೊಮ್ಮೆ ತಮ್ಮ ಒಲುಮೆಯ ಗೆಳತಿ ರಾಧಿಕಾ ಪಂಡಿತ್ ಜೊತೆಯಾಗಿರುವ ಯಶ್, ತೆರೆಮೇಲೆ ಕಮಾಲ್ ಮಾಡುವುದಕ್ಕೆ ದಿನಗಣನೆ ಶುರುವಾಗಿದೆ.

Mr and Mrs Ramachari3

ಈಗಾಗಲೇ ರಿಲೀಸ್ ಆಗಿರುವ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಟ್ರೇಲರ್ ಸಖತ್ ಖಡಕ್ ಆಗಿದೆ. ಹಾಡುಗಳಂತೂ ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಅದರಲ್ಲೂ ಯಶ್ ದನಿಯಾಗಿರುವ 'ಅಣ್ತಮ್ಮ' ಹಾಡು ಕೇಳುವುದಕ್ಕೂ, ನೋಡುವುದಕ್ಕೂ ಮಜವಾಗಿದೆ ಅಂತಿದ್ದಾರೆ ಯಶ್ ಅಭಿಮಾನಿಗಳು. ['ರಾಮಾಚಾರಿ' ಅನ್ನುವ ಹೆಸರೇ ಪ್ರಾಬ್ಲಂ..!]

ಇಷ್ಟೆಲ್ಲಾ ವಿಶೇಷತೆಗಳಿರುವ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ನಿರ್ದೇಶಕ ಸಂತೋಷ್ ಅನಂದ್ ರಾಮ್. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತೆರೆಗೆ ಬರುತ್ತಿರುವ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'ಗೆ ಚಾಲೆಂಜ್ ಹಾಕೋಕೆ ರಾಕ್ ಸ್ಟಾರ್ 'ಜೋತಿ ಅಲಿಯಾಸ್ ಕೋತಿರಾಜ್' ಕೂಡ ತಯಾರಾಗಿದ್ದಾರೆ.

Mr and Mrs Ramachari2

ಚಿತ್ರದುರ್ಗದ ಕೋಟೆಯನ್ನ ಸರಸರ ಏರುತ್ತಾ ಎಲ್ಲರನ್ನ ಚಿಕಿತಗೊಳಿಸುತ್ತಿದ್ದ 'ಜೋತಿ ಅಲಿಯಾಸ್ ಕೋತಿರಾಜ್' ಬಣ್ಣ ಹಚ್ಚಿರುವ ಮೊದಲ ಸಿನಿಮಾ ಇದು. ದೀಪಿಕಾ ದಾಸ್, ಐಶಾನಿ ಶೆಟ್ಟಿ, ರಮೇಶ್ ಭಟ್, ಸಂಕೇತ್ ಕಾಶಿರಂತಹ ದೊಡ್ಡ ತಾರಾಬಳಗವಿರುವ ಜೋತಿ ರಾಜನ ನೈಜಕಥೆಗೆ ಆಕ್ಷನ್ ಕಟ್ ಹೇಳಿರುವುದು ಸೆಬಾಸ್ಟಿನ್ ಡೇವಿಡ್. [ಮಂಗಳೂರಿಗರಿಗೆ ಮೋಡಿ ಮಾಡಿದ ಜ್ಯೋತಿರಾಜ್]

ಒಟ್ನಲ್ಲಿ, ಎರಡು ವಿಭಿನ್ನ ಸಿನಿಮಾಗಳು ಈ ವಾರ (ಡಿಸೆಂಬರ್ 25) ಚಿತ್ರಮಂದಿರಕ್ಕೆ ಲಗ್ಗೆ ಇಡಲಿವೆ. ಗಲ್ಲಪಟ್ಟಿಗೆಗಾಗಿ ರಾಕಿಂಗ್ ಸ್ಟಾರ್ ಮತ್ತು ರಾಕ್ ಸ್ಟಾರ್ ನಡುವೆ ಯುದ್ಧ ನಡೆಯಲಿದೆ. ಇದರಲ್ಲಿ ಗೆಲುವಿನ ಸಿಹಿ ಯಾರಿಗೆ ಲಭಿಸುತ್ತೋ, ಎಲ್ಲಾ ಪ್ರೇಕ್ಷಕರ ಟೇಸ್ಟ್ ಮೇಲೆ ನಿಂತಿದೆ. (ಫಿಲ್ಮಿಬೀಟ್ ಕನ್ನಡ)

English summary
Its Mr and Mrs Ramachari v/s Jothi alias Kothiraj this week. Both the movies are releasing on December 25th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada