twitter
    For Quick Alerts
    ALLOW NOTIFICATIONS  
    For Daily Alerts

    ಕಿಚ್ಚನ 'ಹೆಬ್ಬುಲಿ' ಶೂಟಿಂಗ್ ಗೆ ಮೈಸೂರಿನಲ್ಲಿ ತಡೆ

    By Suneetha
    |

    ಮೈಸೂರಿನ ರಾಮಕೃಷ್ಣ ನಗರದ ಸರ್ಕಲ್ ನಲ್ಲಿ ಪೂರ್ವ ಅನುಮತಿ ಪಡೆಯದೇ ನಡೆಯುತ್ತಿದ್ದ ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಶೂಟಿಂಗ್ ಅನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧಿಕಾರಿಗಳು ತಡೆಗಟ್ಟಿರುವ ಘಟನೆ ಶುಕ್ರವಾರ (ಜೂನ್ 24) ದಂದು ನಡೆದಿದೆ.

    ನಿನ್ನೆ ಬೆಳಗ್ಗೆ ಸುಮಾರು 7.30ರಿಂದ ಚಿತ್ರದ ಶೂಟಿಂಗ್ ಗೆ ಸರ್ಕಲ್ ನಲ್ಲಿ ಸೆಟ್ ಹಾಕಿ ಚಿತ್ರೀಕರಣ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ಕೆಲಕಾಲ ಅಡ್ಡಿಯುಂಟಾಯಿತು. ಇದರಿಂದ ಬೇಸತ್ತ ಕೆಲ ಸಾರ್ವಜನಿಕರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗೆ ಸುದ್ದಿ ಮುಟ್ಟಿಸಿದ್ದಾರೆ.[ಯಶ್-ರಾಧಿಕಾರ ಹೊಸ ಚಿತ್ರದ ಶೂಟಿಂಗ್ ಗೆ ಗಂಡಾಂತರ]

    'MUDA' officials stop shooting of Actor Sudeep's Kannada Movie 'Hebbuli'

    ಕಮಿಷನರ್ ಆದೇಶದಂತೆ ಸ್ಥಳಕ್ಕೆ ಆಗಮಿಸಿದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಕೆ.ಟಿ ರವಿ ಅವರು ಸರ್ಕಲ್ ವ್ಯಾಪ್ತಿ ಮುಡಾಗೆ ಸೇರಿದ್ದರಿಂದ ಮೊದಲೇ ಅನುಮತಿ ಪಡೆಯಬೇಕು. ಯಾವುದೇ ಪೂರ್ವಾನುಮತಿ ಪಡೆಯದೇ ಚಿತ್ರೀಕರಣ ನಡೆಸುವಂತಿಲ್ಲ. ಆದ್ದರಿಂದ ತಕ್ಷಣ ಶೂಟಿಂಗ್ ನಿಲ್ಲಿಸಬೇಕೆಂದು ಹೇಳಿದರು.

    ಆದರೆ ಚಿತ್ರೀಕರಣ ನಡೆಸಲು ಈಗಾಗಲೇ ವಾರ್ತಾ ಮತ್ತು ಪ್ರಚಾರ ಇಲಾಖೆಯಿಂದ ಅನುಮತಿ ಪಡೆದುಕೊಂಡು ಶೂಟಿಂಗ್ ನಡೆಸುತ್ತಿದ್ದೇವೆ ಎಂದು ಚಿತ್ರದ ನಿರ್ಮಾಪಕರು ತಿಳಿ ಹೇಳಲು ಪ್ರಯತ್ನಿಸಿದರು.[ಶೂಟಿಂಗ್ ಹಂತದಲ್ಲೇ ರೆಕಾರ್ಡ್ ಬ್ರೇಕ್ ಮಾಡಿದ ಕಿಚ್ಚನ 'ಹೆಬ್ಬುಲಿ']

    ಆದರೂ ಕೂಡ ಇದನ್ನು ಒಪ್ಪದ ರವಿ ಅವರು ಪ್ರಾಧಿಕಾರದಿಂದಲೂ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅನುಮತಿ ಇಲ್ಲದೆ ಚಿತ್ರೀಕರಣ ನಡೆಸಿದರೆ, ವಾಹನ ಸಂಚಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ' ಎಂದು ಹೇಳಿದ್ದಾರೆ.

    ಇದರ ಪರಿಣಾಮವಾಗಿ ಚಿತ್ರೀಕರಣ ನಿಲ್ಲಿಸಿದ ಚಿತ್ರತಂಡದವರು, 2 ದಿನಗಳವರೆಗೆ ‍ಷರತ್ತುಬದ್ಧ ಅನುಮತಿ ಪಡೆದುಕೊಂಡು ನಂತರ ಚಿತ್ರೀಕರಣ ನಡೆಸುವುದಾಗಿ ಅಧಿಕಾರಿಗಳಿಗೆ ಮನವರಿಕೆ ಮಾಡಿದರು.['ಹೆಬ್ಬುಲಿ' ಕಿಚ್ಚನ ಮತ್ತೊಂದು ಶಿಕಾರಿ ಕಬೀರ್ ದುಹಾನ್]

    ಒಟ್ನಲ್ಲಿ ರಸ್ತೆ ಮಧ್ಯದಲ್ಲಿ ಸುದೀಪ್ ಅವರನ್ನು ಕಂಡ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳುವುದರಲ್ಲಿ ಬ್ಯುಸಿ ಆದ್ದರಿಂದ ಕೆಲಕಾಲ ಜನಜಂಗುಳಿ ಏರ್ಪಟ್ಟಿತ್ತು. (ಚಿತ್ರಕೃಪೆ: ಸುದೀಪ್ ಅಭಿಮಾನಿಗಳು, ಫೇಸ್ ಬುಕ್)

    English summary
    'Mysuru Urban Development Authority' (MUDA) officials stop the shooting of Kannada Movie 'Hebbuli' at Ramakrishna Circle in the city. For not taking requisite permission. Kannada Actor Sudeep, Kannada Actor ravichandran, Actress Amala Paul in the lead role.
    Saturday, June 25, 2016, 10:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X