»   » ವಿಡಿಯೋ : ಸಖತ್ ರಗಡ್ ಆಗಿರುವ 'ಮಫ್ತಿ' ಟ್ರೇಲರ್ ರಿಲೀಸ್

ವಿಡಿಯೋ : ಸಖತ್ ರಗಡ್ ಆಗಿರುವ 'ಮಫ್ತಿ' ಟ್ರೇಲರ್ ರಿಲೀಸ್

Posted By:
Subscribe to Filmibeat Kannada

ಕನ್ನಡದ ಈ ವರ್ಷ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ಮಫ್ತಿ' ಚಿತ್ರದ ಟ್ರೇಲರ್ ಇದೀಗ ರಿಲೀಸ್ ಆಗಿದೆ. ಸಖತ್ ರಗಡ್ ಆಗಿರುವ ಈ ಟ್ರೇಲರ್ ನಲ್ಲಿ ಒಂದು ಕಡೆ ಶಿವಣ್ಣ ಇನ್ನೊಂದು ಕಡೆ ಶ್ರೀ ಮುರಳಿ ಹವಾ ಎಬ್ಬಿಸಿದ್ದಾರೆ.

ಟ್ರೇಲರ್ ನೋಡುವವರಿಗೆ 'ಉಗ್ರಂ' ಮತ್ತು 'ರಥಾವಾರ' ಚಿತ್ರಗಳು ನೆನಪಿಗೆ ಬರುತ್ತದೆ. ಅದೇ ಕಾರಣದಿಂದ ಈ ಸಿನಿಮಾದ ಮೇಲೆ ಕ್ರೇಜ್ ತುಂಬನೇ ಜೋರಾಗಿದೆ. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಟ್ರೇಲರ್ ಸಿಕ್ಕಾಪಟ್ಟೆ ಸೂಪರ್ ಆಗಿದೆ.

'Mufti' movie trailer released

ಟ್ರೇಲರ್ ನಲ್ಲಿ ಶಿವಣ್ಣನ ಲುಕ್ ಬಗ್ಗೆ ಹೇಳುವುದಕ್ಕಿಂತ ನೋಡಿಯೇ ಆನಂದ ಪಡಬೇಕು. ಹಿಂದೆ ಎಂದು ಕಾಣಿಸಿಕೊಳ್ಳದ ರಾ ಲುಕ್ ನಲ್ಲಿ ಶಿವಣ್ಣ ಇಲ್ಲಿ ದರ್ಶನ ನೀಡಿದ್ದಾರೆ. ನರ್ತನ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. 'ಮಫ್ತಿ' ಚಿತ್ರವನ್ನು ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೀಮುರಳಿ ಜೊತೆ ಶಾನ್ವಿ ಶ್ರೀವಾಸ್ತವ ನಾಯಕಿಯಾಗಿದ್ದಾರೆ.

English summary
Watch Video : 'Mufti' kannada movie trailer released.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada