»   » 6 ಗಂಟೆಗೆ ಮೊದಲ ಶೋ : ಗಾಂಧಿನಗರದ ತುಂಬ 'ಮಫ್ತಿ' ಮೇನಿಯಾ!

6 ಗಂಟೆಗೆ ಮೊದಲ ಶೋ : ಗಾಂಧಿನಗರದ ತುಂಬ 'ಮಫ್ತಿ' ಮೇನಿಯಾ!

Posted By:
Subscribe to Filmibeat Kannada

'ಮಫ್ತಿ' ಸಿನಿಮಾ ನಾಳೆ ರಾಜ್ಯಾದಂತ್ಯ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ರಾಜ್ಯದ 300 ಚಿತ್ರಮಂದಿರಗಳಲ್ಲಿ ಹಾಗೂ ಹೊರ ರಾಜ್ಯದ 100 ಥಿಯೇಟರ್ ಗಳಲ್ಲಿ 'ಮಫ್ತಿ' ತೆರೆಗೆ ಬರುತ್ತಿದೆ.

'ಊರ್ವಶಿಯಲ್ಲಿ ಮಫ್ತಿ' : ಕನ್ನಡ ಸಿನಿಮಾದ ಹವಾ ಶುರು ಆಯ್ತು

ಗಾಂಧಿನಗರದ ತುಂಬ ಈಗ 'ಮಫ್ತಿ' ಮೇನಿಯಾ ಶುರುವಾಗಿದೆ. ಕೆ.ಜಿ.ರಸ್ತೆಯ ಸಂತೋಷ್ ಚಿತ್ರಮಂದಿರದಲ್ಲಿ ಮೂರು ದಿನ ಮುಂಚಿತವಾಗಿ ಚಿತ್ರದ ಕಟ್ ಔಟ್ ತಲೆ ಎತ್ತಿ ನಿಂತಿದೆ. ವಾರಕ್ಕೆ ಮೊದಲೇ ಬುಕ್ಕಿಂಗ್ ಶುರುವಾಗಿದ್ದು, ಬೆಂಗಳೂರಿನ 55ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

'Mufti' movie will be releasing in 400 theaters

ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಾದ ವೀರೇಶ್, ಊರ್ವಶಿ, ಬಾಲಾಜಿ ಸೇರಿದಂತೆ ರಾಜ್ಯದ ಅನೇಕ ಚಿತ್ರಮಂದಿರಗಳ ಮುಂದೆ 'ಮಫ್ತಿ' ಕಟ್ ಔಟ್ ಮತ್ತು ಪೋಸ್ಟರ್ ರಾರಾಜಿಸುತ್ತಿವೆ. ಇನ್ನು ಚಿತ್ರಕ್ಕೆ ಸಿಕ್ಕಾಪಟ್ಟೆ ಕ್ರೇಜ್ ಇದ್ದು, ಬಾಲಾಜಿ ಥಿಯೇಟರ್ ನಲ್ಲಿ ಬೆಳ್ಳಗೆ 6 ಗಂಟೆಗೆ ಮೊದಲ ಶೋ ಶುರು ಆಗಲಿದೆ.

ಅಂದಹಾಗೆ, 'ಮಫ್ತಿ' ಸಿನಿಮಾ ಶ್ರೀ ಮುರಳಿ ಮತ್ತು ಶಿವಣ್ಣ ನಟನೆಯ ಚಿತ್ರವಾಗಿದೆ. ನರ್ತನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. 'ತಾರಾಕ್' ಬೆಡಗಿ ಶಾನ್ವಿ ಶ್ರೀವತ್ಸವ್ ಚಿತ್ರದ ನಾಯಕಿ ಆಗಿದ್ದು, ರವಿಬಸೂರ್ ಸಂಗೀತ ಚಿತ್ರದಲ್ಲಿದೆ. ಡಿಸೆಂಬರ್ 1ಕ್ಕೆ ಅಂದರೆ ನಾಳೆ ಈ ಸಿನಿಮಾ ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ.

English summary
Srimurali and Shiva Rajkumar starrer 'Mufti' movie will be releasing in 400 theater Tomorrow (December 1st). The movie is directed by Narthan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada