»   » 'ಊರ್ವಶಿಯಲ್ಲಿ ಮಫ್ತಿ' : ಕನ್ನಡ ಸಿನಿಮಾದ ಹವಾ ಶುರು ಆಯ್ತು

'ಊರ್ವಶಿಯಲ್ಲಿ ಮಫ್ತಿ' : ಕನ್ನಡ ಸಿನಿಮಾದ ಹವಾ ಶುರು ಆಯ್ತು

Posted By:
Subscribe to Filmibeat Kannada

ಬೆಂಗಳೂರಿನ ಕೆಲ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳಿಗಿಂತ ಬೇರೆ ಭಾಷೆಯ ಸಿನಿಮಾಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿರುತ್ತದೆ. ಆ ರೀತಿಯ ಚಿತ್ರಮಂದಿರಗಳ ಪೈಕಿ ಊರ್ವಶಿ ಚಿತ್ರಮಂದಿರ ಕೂಡ ಒಂದಾಗಿತ್ತು. ಆದರೆ ಈಗ ನಿಧಾನವಾಗಿ ಈ ಚಿತ್ರಮಂದಿರ ಬದಲಾಗುತ್ತದೆ.

ಗಾಂಧಿನಗರದಲ್ಲಿ 'ಮಫ್ತಿ' ಸಿನಿಮಾಗೆ ಸಿಕ್ಕ ಚಿತ್ರಮಂದಿರ ಯಾವುದು.?

ಹಿಂದಿ, ತಮಿಳು, ತೆಲುಗು ಸಿನಿಮಾಗಳ ಪೋಸ್ಟರ್, ಕಟ್ ಔಟ್ ಗಳೆ ಊರ್ವಶಿ ಚಿತ್ರಮಂದಿರದ ಮುಂದೆ ಹೆಚ್ಚಾಗಿ ರಾರಾಜಿಸುತ್ತಿರುತ್ತದೆ. ಆದರೆ ಈಗ ಕನ್ನಡ ಸಿನಿಮಾ ಅಲ್ಲಿ ರಿಲೀಸ್ ಆಗುವುದು ಹೆಚ್ಚಾಗುತ್ತಿದೆ. ಸದ್ಯ ಈ ವಾರ 'ಮಫ್ತಿ' ಸಿನಿಮಾ ಊರ್ವಶಿಯಲ್ಲಿ ರಿಲೀಸ್ ಆಗುತ್ತಿದೆ.

'Mufti' movie will be releasing in Urvashi theater

ಇತ್ತೀಚಿಗಷ್ಟೆ ಧ್ರುವ ಸರ್ಜಾ ನಟನೆಯ 'ಭರ್ಜರಿ' ಸಿನಿಮಾ ಊರ್ವಶಿ ಥಿಯೇಟರ್ ನಲ್ಲಿ ಬಿಡುಗಡೆಯಾಗಿತ್ತು. ಅದರ ಹಿಂದೆ ಈಗ 'ಮಫ್ತಿ' ಚಿತ್ರ ಕೂಡ ಅಲ್ಲಿಯೇ ತೆರೆಗೆ ಬರುತ್ತಿದೆ. ಜೊತೆಗೆ ಈಗಾಗಲೇ ಮೊದಲ ದಿನದ ಮೊದಲ ಶೋ ಟಿಕೆಟ್ ಕೂಡ ಬಹುತೇಕ ಬುಕ್ ಆಗಿದೆ.

'Mufti' movie will be releasing in Urvashi theater

ಅಂದಹಾಗೆ, 'ಮಫ್ತಿ' ಸಿನಿಮಾ ಶ್ರೀ ಮುರಳಿ ಮತ್ತು ಶಿವಣ್ಣ ನಟನೆಯ ಸಿನಿಮಾವಾಗಿದೆ. ನರ್ತನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಡಿಸೆಂಬರ್ 1ಕ್ಕೆ ಈ ಸಿನಿಮಾ ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ.

English summary
'Mufti' movie will be releasing in Urvashi theater on December 1st.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada