»   » ಶಿವಣ್ಣ, ಶ್ರೀಮುರಳಿ ಜೋಡಿಯ 'ಮಫ್ತಿ' ಬಿಡುಗಡೆಯ ದಿನಾಂಕ ನಿಗದಿ

ಶಿವಣ್ಣ, ಶ್ರೀಮುರಳಿ ಜೋಡಿಯ 'ಮಫ್ತಿ' ಬಿಡುಗಡೆಯ ದಿನಾಂಕ ನಿಗದಿ

Posted By:
Subscribe to Filmibeat Kannada
ಮಫ್ತಿ ಸಿನಿಮಾದ ಟ್ರೈಲರ್ ಗೆ ಫಿದಾ ಆದ ಸೆಲೆಬ್ರಿಟಿಗಳು | Filmibeat Kannada

ಟ್ರೇಲರ್ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಧೂಳೆಬ್ಬಿಸುತ್ತಿರುವ 'ಮಫ್ತಿ' ಸಿನಿಮಾದ ಬಿಡುಗಡೆಯ ದಿನಾಂಕ ಇದೀಗ ನಿಗದಿ ಆಗಿದೆ. ಸಿನಿಮಾವನ್ನು ಇದೇ ಡಿಸೆಂಬರ್ ತಿಂಗಳಿನಲ್ಲಿ ತೆರೆಗೆ ತರಲು ಚಿತ್ರತಂಡ ತಯಾರಿ ನಡೆಸಿದೆ.

ಗಾಂಧಿನಗರದಲ್ಲಿ 'ಮಫ್ತಿ' ಸಿನಿಮಾ ಈಗಾಗಲೇ ದೊಡ್ಡ ಹೈಪ್ ಸೃಷ್ಟಿ ಮಾಡಿದೆ. ಶಿವಣ್ಣ ಮತ್ತು ಶ್ರೀಮುರಳಿ ಜೋಡಿ ಎನ್ನುವ ಕಾರಣಕ್ಕೆ ಚಿತ್ರದ ನಿರೀಕ್ಷೆ ಡಬಲ್ ಆಗಿದೆ. ಇನ್ನು ಟ್ರೇಲರ್ ಬಂದ ಮೇಲಂತೂ ಚಿತ್ರದ ಅಸಲಿ ಖದರ್ ತಿಳಿಯಿತು. ಟ್ರೇಲರ್ ನೋಡಿದವರಿಗೆ ಸಿನಿಮಾ ನೋಡುವ ಬಯಕೆ ಹುಟ್ಟಿಕೊಂಡಿತ್ತು.

'Mufti' movie will release on December 1

ನರ್ತನ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಶ್ರೀಮುರಳಿ ಜೊತೆ ಶಾನ್ವಿ ಶ್ರೀವಾಸ್ತವ ನಾಯಕಿಯಾಗಿದ್ದಾರೆ. ಅಂದಹಾಗೆ, 'ಮಫ್ತಿ' ಸಿನಿಮಾ ಡಿಸೆಂಬರ್ 1ಕ್ಕೆ ಬಿಡುಗಡೆಯಾಗಲಿದ್ದು, ಬರೋಬ್ಬರಿ 300ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಸಿನಿಮಾ ರಿಲೀಸ್ ಆಗಲಿದೆ.

English summary
'Mufti' movie is likely to release on December 1st. ಮಫ್ತಿ ಸಿನಿಮಾ ಡಿಸೆಂಬರ್ 1ಕ್ಕೆ ಬಿಡುಗಡೆಯಾಗಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X