»   » ಶ್ರೀಮುರಳಿ ಹುಟ್ಟುಹಬ್ಬಕ್ಕೆ 'ಮಫ್ತಿ' ಟೀಸರ್ ಉಡುಗೊರೆ

ಶ್ರೀಮುರಳಿ ಹುಟ್ಟುಹಬ್ಬಕ್ಕೆ 'ಮಫ್ತಿ' ಟೀಸರ್ ಉಡುಗೊರೆ

Posted By:
Subscribe to Filmibeat Kannada

'ಉಗ್ರಂ', 'ರಥಾವರ' ಚಿತ್ರಗಳ ಸೂಪರ್ ಸಕ್ಸಸ್ ಬಳಿಕ ನಟ ಶ್ರೀಮುರಳಿ 'ಮಫ್ತಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಶ್ರೀಮುರಳಿ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ 'ಮಫ್ತಿ' ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡುತ್ತಿರುವುದು ವಿಶೇಷ.

ಸೆಂಚುರಿ ಸ್ಟಾರ್-ರೋರಿಂಗ್ ಸ್ಟಾರ್ ಕಾಂಬಿನೇಷನ್ ನಲ್ಲಿ ರೆಡಿ ಆಗುತ್ತಿರುವ 'ಮಫ್ತಿ' ಚಿತ್ರದ ಮೊದಲ ಟೀಸರ್ ಶ್ರೀಮುರಳಿ ಹುಟ್ಟುಹಬ್ಬದಂದು ಬಿಡುಗಡೆ ಆಗಲಿದೆ.[ಶ್ರೀಮುರಳಿ-ಶಿವಣ್ಣ ಚಿತ್ರದ ಬಗ್ಗೆ ಸುಮ್ಮನೆ ಗಾಸಿಪ್ ಹಬ್ಬಿಸ್ಬೇಡಿ.!]

mufti-teaser-to-release-on-srimurali-s-birthday

ಹೌದು, ಡಿಸೆಂಬರ್ 17 ರಂದು ಶ್ರೀಮುರಳಿ ಜನ್ಮದಿನ. ಬರ್ತಡೇ ದಿನ ಅಭಿಮಾನಿಗಳಿಗೆ ಉಡುಗೊರೆ ರೂಪದಲ್ಲಿ 'ಮಫ್ತಿ' ಟೀಸರ್ ಬಿಡುಗಡೆ ಮಾಡಲು ಶ್ರೀಮುರಳಿ ಮನಸ್ಸು ಮಾಡಿದ್ದಾರೆ.[ಕನ್ನಡಾಭಿಮಾನಿಗಳಿಗೆ ನಟ ಶ್ರೀಮುರಳಿ ಕೊಟ್ಟ 'ಬಾಂಬ್' ನ್ಯೂಸ್ ಏನು?]

ನರ್ತನ್ ಆಕ್ಷನ್ ಕಟ್ ಹೇಳುತ್ತಿರುವ ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡುತ್ತಿರುವ ಸಿನಿಮಾ 'ಮಫ್ತಿ'. ಈ ಚಿತ್ರದಲ್ಲಿ ಶ್ರೀಮುರಳಿ ಜೊತೆ ಶಾನ್ವಿ ಶ್ರೀವಾಸ್ತವ ಜೋಡಿಯಾಗಿದ್ದಾರೆ.

'ಮಫ್ತಿ' ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

English summary
Kannada Actor Shiva Rajkumar and SriMurali starrer 'Mufti' teaser will release on Srimurali's birthday (December 17th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada