»   » ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ಭಟ್ರ ಭರ್ಜರಿ ಗಿಫ್ಟ್

ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ಭಟ್ರ ಭರ್ಜರಿ ಗಿಫ್ಟ್

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅವರ ಈ ವರ್ಷದ ಹುಟ್ಟುಹಬ್ಬಕ್ಕೆ ಯೋಗರಾಜ್ ಭಟ್ ಒಂದು ಭರ್ಜರಿ ಗಿಫ್ಟ್ ನೀಡುವುದಕ್ಕೆ ಪ್ಲಾನ್ ಮಾಡಿದ್ದಾರೆ. ಜುಲೈ 2ಕ್ಕೆ ಗಣೇಶ್ ಅವರ ಬರ್ತಡೇ ಇದ್ದು, ಅಂದು 'ಮುಗುಳುನಗೆ' ಸಿನಿಮಾದ ಹಾಡುಗಳನ್ನು ರಿಲೀಸ್ ಮಾಡುವುದಕ್ಕೆ ಚಿತ್ರತಂಡ ನಿರ್ಧಾರ ಮಾಡಿದೆ.

ಭಟ್ಟರ 'ಮುಗುಳುನಗೆ' ನೋಡಿದ ಮೊದಲ ವೀಕ್ಷಕ ದುನಿಯಾ ಸೂರಿ ಏನಂದ್ರು?

'ಮುಗುಳುನಗೆ' ಗಣೇಶ್ ಮತ್ತು ಯೋಗರಾಜ್ ಭಟ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಮೂರನೇ ಸಿನಿಮಾ. ಎರಡು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಗಣೇಶ್ ಮತ್ತು ಯೋಗರಾಜ್ ಭಟ್ ಜೋಡಿ ಈ ಚಿತ್ರದ ಮೂಲಕ ಹ್ಯಾಟ್ರಿಕ್ ಬಾರಿಸುವ ತವಕದಲ್ಲಿದೆ. ಅಲ್ಲದೆ ಚಿತ್ರದ ಹಾಡುಗಳ ಮೇಲೆ ಸಹ ಸಖತ್ ನಿರೀಕ್ಷೆ ಇದೆ. ಮುಂದೆ ಓದಿ...

ಗಣೇಶ್ ಹುಟ್ಟುಹಬ್ಬಕ್ಕೆ ಗಿಫ್ಟ್

ಈ ವರ್ಷದ ಗಣೇಶ್ ಹುಟ್ಟುಹಬ್ಬಕ್ಕೆ 'ಮುಗುಳುನಗೆ' ಸಿನಿಮಾದ ಹಾಡುಗಳನ್ನು ಅವರ ಫ್ಯಾನ್ಸ್ ಗೆ ಕೇಳಿಸುವ ಪ್ಲಾನ್ ಮಾಡಿದೆ ಚಿತ್ರತಂಡ.

ನಾಲ್ಕು ಹುಡುಗಿಯರ ಜೊತೆ 'ಮುಗುಳು ನಗೆ' ಬೀರಿದ ಗಣಪ

ವಿ.ಹರಿಕೃಷ್ಣ ಮ್ಯೂಸಿಕ್

'ಮುಗುಳುನಗೆ' ಸಿನಿಮಾಗೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಎಂದಿನಂತೆ ಈ ಚಿತ್ರದಲ್ಲಿಯೂ ಹರಿಕೃಷ್ಣ ಟ್ಯೂನ್ ಗೆ ಭಟ್ಟರ ಸಾಲುಗಳು ಬೆರೆತು ಮ್ಯಾಜಿಕ್ ಮಾಡಲಿದೆ.

ಮತ್ತೆ ಹಾರಲಿದೆ 'ಗಾಳಿಪಟ': ಭಟ್ಟರ ಅಡ್ಡಾಗೆ ಬಂದ ಮತ್ತೊಬ್ಬ ಸ್ಟಾರ್ ನಟ!

ಗೆಲುವು ಅನಿವಾರ್ಯ

ಗಣೇಶ್ ಮತ್ತು ಯೋಗರಾಜ್ ಭಟ್ ಅವರ ಇತ್ತೀಚಿನ ಸಿನಿಮಾಗಳು ದೊಡ್ಡ ಮಟ್ಟದ ಸಕ್ಸಸ್ ಕಂಡಿಲ್ಲ. ಸೋ, 'ಮುಗುಳುನಗೆ' ಸಿನಿಮಾದ ಗೆಲುವು ಇಬ್ಬರಿಗೂ ಅಗತ್ಯವಿದೆ.

'ಮುಗುಳುನಗೆ' ಚಿತ್ರಕ್ಕಾಗಿ ಹೇಗಿದ್ದ ಗಣೇಶ್ ಹೇಗಾದ್ರೂ ನೋಡಿ!

ಸೂರಿ ಮೆಚ್ಚುಗೆ

ಇತ್ತೀಚಿಗಷ್ಟೆ 'ಮುಗುಳುನಗೆ' ಸಿನಿಮಾ ನೋಡಿದ ನಿರ್ದೇಶಕ ಸೂರಿ ಚಿತ್ರವನ್ನು ಬಹಳ ಮೆಚ್ಚಿಕೊಂಡಿದ್ದು, ಇದು ಯೋಗರಾಜ್ ಭಟ್ ಕಂಬ್ಯಾಕ್ ಸಿನಿಮಾ ಎಂದಿದ್ದಾರೆ.

ನಾಲ್ಕು ನಾಯಕಿಯರು

'ಮುಗುಳುನಗೆ' ಚಿತ್ರದಲ್ಲಿ ನಾಲ್ಕು ಜನ ನಾಯಕಿಯರಿದ್ದು, ಆಶಿಕಾ ರಂಗನಾಥ್, ನಿಖಿತಾ ನಾರಾಯಣ್, ಅಪೂರ್ವ ಆರೋರ, ಮತ್ತು ವಿಶೇಷ ಪಾತ್ರದಲ್ಲಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ.

ನಿರೀಕ್ಷೆ ಹೆಚ್ಚಿದೆ.!

'ಮುಗುಳುನಗೆ' ಹಾಡುಗಳು ಮತ್ತು ಸಿನಿಮಾದ ಮೇಲೆ ಸ್ಯಾಂಡಲ್ ವುಡ್ ಪ್ರೇಕ್ಷಕರು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಗಣೇಶ್ ಹುಟ್ಟುಹಬ್ಬಕ್ಕೆ ಹಾಡುಗಳ ಅನಾವರಣ ಆಗಲಿದ್ದು, ಸಿನಿಮಾ ಆಗಸ್ಟ್ ವೇಳೆಗೆ ತೆರೆಗೆ ಬರಬಹುದು.

English summary
'Mugulu Nage' kannada movie audio will be releasing on Ganesh's birthday (July 2nd)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada