»   » ನಟ ಮುಖ್ಯಮಂತ್ರಿ ಚಂದ್ರು ಮಗ ಹೀರೋ ಆಗಿ ಬಂದ್ರು

ನಟ ಮುಖ್ಯಮಂತ್ರಿ ಚಂದ್ರು ಮಗ ಹೀರೋ ಆಗಿ ಬಂದ್ರು

Posted By:
Subscribe to Filmibeat Kannada
ಮುಖ್ಯಮಂತ್ರಿ ಚಂದ್ರು ಮಗ ಇದೀಗ ಹೀರೋ | Filmibeat Kannada

ಇತ್ತೀಚಿಗಷ್ಟೆ ಪೋಷಕ ನಟಿ ಮಾರಿಮುತ್ತು ಖ್ಯಾತಿಯ ಸರೋಜಮ್ಮ ಅವರ ಮೊಮ್ಮಗಳು ಜಯಶ್ರೀ ಆರಾಧ್ಯ ಚಿತ್ರರಂಗಕ್ಕೆ ಬಂದಿದ್ದರು. ಅದರ ಹಿಂದೆಯೇ ಈಗ ಕನ್ನಡದ ಖ್ಯಾತ ಪೋಷಕ ನಟರಾದ ಮುಖ್ಯಮಂತ್ರಿ ಚಂದ್ರು ಅವರ ಕುಟುಂಬ ಕುಡಿ ಸಿನಿಮಾರಂಗಕ್ಕೆ ಬರಲು ಸಜ್ಜಾಗಿ ನಿಂತಿದೆ.

ನಟ ಮುಖ್ಯಮಂತ್ರಿ ಚಂದ್ರು ಅವರ ಮಗನ ಹೆಸರು ಶರತ್. ಶರತ್ ಅವರನ್ನು ಕೂಡ ಒಬ್ಬ ನಟ ಮಾಡಬೇಕು ಎಂಬುದು ಮುಖ್ಯಮಂತ್ರಿ ಚಂದ್ರು ಅವರ ಬಹು ವರ್ಷದ ಕನಸಾಗಿತ್ತು. ಅದೇ ರೀತಿ ಅವರ ಕನಸು ಈಗ ನನಸಾಗುವ ಸಮಯ ಬಂದಿದೆ. ಯಾಕಂದ್ರೆ ಈ ಹಿಂದೆ ಕೆಲವು ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದ್ದ ಮುಖ್ಯಮಂತ್ರಿ ಚಂದ್ರು ಪುತ್ರ ಶರತ್ ಈಗ ಮೊದಲ ಬಾರಿಗೆ ಹೀರೋ ಆಗಿದ್ದಾರೆ. ಅಪ್ಪನ ರೀತಿ ಹೆಸರು ಮಾಡುವ ಕನಸು ಹೊತ್ತು ಶರತ್ ಈಗ ಸ್ಯಾಂಡಲ್ ವುಡ್ ಕೋಟೆ ಒಳಗೆ ಬಂದಿದ್ದಾರೆ. ಮುಂದೆ ಓದಿ...

ಹೀರೋ ಆದ ಶರತ್

ಮುಖ್ಯ ಮಂತ್ರಿ ಚಂದ್ರು ಅವರ ಮಗ ಶರತ್ ಈಗ ಹೀರೋ ಆಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ. ನೋಡುವುದಕ್ಕೆ ತುಂಬ ಸುಂದರವಾಗಿರುವ ಈ ಹುಡುಗ ಹೀರೋ ಆಗುವುದಕ್ಕೆ ಹೇಳಿ ಮಾಡಿಸಿದ ಹಾಗೆ ಇದ್ದಾರೆ.

ಸುದೀಪ್ ಸಿನಿಮಾದಲ್ಲಿ ನಟನೆ

ಶರತ್ ಈ ಹಿಂದೆ ನಟ ಕಿಚ್ಚ ಸುದೀಪ್ ಅವರ 'ರನ್ನ' ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದರು. ಅಷ್ಟೆ ಅಲ್ಲದೆ ಬಹುನಿರೀಕ್ಷಿತ 'ದಿ ವಿಲನ್' ಸಿನಿಮಾದಲ್ಲಿಯೂ ಒಂದು ಮುಖ್ಯ ಪಾತ್ರದಲ್ಲಿ ಶರತ್ ಕಾಣಿಸಿಕೊಂಡಿದ್ದಾರೆ.

ನಿರ್ದೇಶನ

ವಿನಯ್ ಭಾರಧ್ವಜ್ ತಮ್ಮ ಮೊದಲ ನಿರ್ದೇಶಕದ ಸಿನಿಮಾಗೆ ಹೀರೋ ಆಗಿ ಶರತ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ವಿನಯ್ ಈ ಹಿಂದೆ ಶಾರ್ಟ್ ಫಿಲ್ಮ್ ಗಳನ್ನು ಮಾಡಿದ್ದು, ಕೆಲವು ಜನಪ್ರಿಯ ಸಿನಿಮಾ ಕಾರ್ಯಕ್ರಮಗಳನ್ನು ಹೊಸ್ಟ್ ಮಾಡಿದ್ದರು.

'ಚಂದ್ರು' ಮಕ್ಕಳು

ಮುಖ್ಯಮಂತ್ರಿ ಚಂದ್ರು ಅವರ ಮಗ ಶರತ್ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಅವರಿಗೆ ಜೊತೆಯಾಗಲಿದ್ದಾರೆ. ಅದರ ಪೈಕಿ ಸಿಹಿ ಕಹಿ ಚಂದ್ರು ಮಗಳು ಹಿತಾ ಚಂದ್ರಶೇಖರ್ ಕೂಡ ಒಬ್ಬರಾಗಿದ್ದಾರೆ.

ರೊಮ್ಯಾಂಟಿಕ್ ಕಾಮಿಡಿ ಸಿನಿಮಾ

ಶರತ್ ಅವರ ಈ ಹೊಸ ಸಿನಿಮಾ ಒಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದೆ. ಇನ್ನು ಸಿನಿಮಾಗೆ ಟೈಟಲ್ ಫಿಕ್ಸ್ ಆಗಿಲ್ಲ. ಮಾರ್ಚ್ 20 ರಿಂದ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ಶುರುವಾಗಲಿದೆಯಂತೆ.

ಅಕ್ಕ ಮಹಾದೇವಿ ಅವರ ವಚನ

ವಿಶೇಷ ಅಂದರೆ ಈ ಹಿಂದೆ ಅಕ್ಕ ಮಹಾದೇವಿ ಅವರ 'ಕನಸ ಕಂಡೆ..' ವಚನದ ವಿಡಿಯೋವನ್ನು ವಿನಯ್ ಭಾರಧ್ವಜ್ ಮಾಡಿದ್ದರು. ಆ ವಿಡಿಯೋದಲ್ಲಿಯೂ ನಟ ಶರತ್ ಮತ್ತು ನಟಿ ಹಿತಾ ಚಂದ್ರಶೇಖರ್ ನಟಿಸಿದ್ದರು.

English summary
Kannada actor Mukhyamantri Chandru son Sharath is going to be launched as a full fledged hero. Vinay Bharadwaj will be directing Sharath's first movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada