»   » ಭೈರತಿ ರಣಗಲ್ಲು ಅಭಿನಯಕ್ಕೆ ಸ್ಯಾಂಡಲ್ ವುಡ್ ಕ್ಲೀನ್ ಬೌಲ್ಡ್

ಭೈರತಿ ರಣಗಲ್ಲು ಅಭಿನಯಕ್ಕೆ ಸ್ಯಾಂಡಲ್ ವುಡ್ ಕ್ಲೀನ್ ಬೌಲ್ಡ್

Posted By:
Subscribe to Filmibeat Kannada

ಭೈರತಿ ರಣಗಲ್ಲು... ಏನಪ್ಪಾ ಹೆಸರೇ ಬೇರೇ ರೀತಿಯಲ್ಲಿ ಸೌಂಡ್ ಆಗ್ತಿದೆ ಅಂತ ಅನ್ನಿಸೋದು ಸಹಜ. ಈ ಹೆಸರು ಎಷ್ಟರ ಮಟ್ಟಿಗೆ ಫೇಮಸ್ ಆಗಿದೆ ಅಂದ್ರೆ ಸಾಮಾಜಿಕ ಜಾಲತಾಣ ಹಾಗೂ ಗಾಂಧಿನಗರದಲ್ಲಿ ಈ ಹೆಸರಿನದ್ದೇ ಸೌಂಡು. ಶುಕ್ರವಾರ ರಿಲೀಸ್ ಆದ ಮಫ್ತಿ ಸಿನಿಮಾವನ್ನ ನೋಡಿದ ಪ್ರೇಕ್ಷಕರಿಗೆ ಖಂಡಿತವಾಗಿಯೂ ಭೈರತಿ ರಣಗಲ್ ಯಾರು? ಆ ಪಾತ್ರದ ಪವರ್ ಏನು ಅನ್ನೋದು ಗೊತ್ತಾಗಿರುತ್ತೆ.

ನೂರಿಪ್ಪತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ, ವಿಭಿನ್ನ ಪಾತ್ರಗಳಲ್ಲಿ ಶಿವರಾಜ್ ಕುಮಾರನ್ನ ನೋಡಿದ್ರೂ ಕೂಡ ಅಭಿಮಾನಿಗಳನ್ನ ಈ ಪಾತ್ರ ಕಾಡಿದಷ್ಟು ಮತ್ಯಾವ ಕ್ಯಾರೆಕ್ಟರ್ ಕಾಡಿಲ್ಲ. ಮಿತ ಭಾಷಿಯಾಗಿ ಭೈರತಿ ರಣಗಲ್ ಪಾತ್ರದಲ್ಲಿ ಶಿವರಾಜ್ ಕುಮಾರ್ ಅಭಿನಯಕ್ಕೆ ಗಾಂಧಿನಗರದ ಮಂದಿ ಸೇರಿದಂತೆ ಇಡೀ ಕನ್ನಡ ಸಿನಿಮಾ ಪ್ರೇಕ್ಷಕರು ಫಿದಾ ಆಗಿದ್ದಾರೆ. ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನಿಂದ ಶೋಗಳು ಹೆಚ್ಚಾಗಿವೆ. ಮುಂದೆ ಓದಿರಿ...

ಮಲ್ಟಿಫ್ಲೆಕ್ಸ್ ನಲ್ಲಿ ಸಖತ್ ರೆಸ್ಪಾನ್ಸ್

ಕಳೆದ ಶುಕ್ರವಾರವಷ್ಟೇ ಬಿಡುಗಡೆಯಾಗಿರುವ 'ಮಫ್ತಿ' ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಸಾಕಷ್ಟು ದಿನಗಳಿಂದ ಕಾದಿದ್ದ ಅಭಿಮಾನಿಗಳು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ರು. ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿ ಥಿಯೇಟರ್ ಗಳ ಮಾಲೀಕರು ಮತ್ತು ಮಲ್ಟಿಫ್ಲೆಕ್ಸ್ ನಲ್ಲಿ ಪ್ರದರ್ಶನದ ಸಂಖ್ಯೆ ಹೆಚ್ಚಾಗಿದೆ.

ಇಂದಿನಿಂದ ಹೆಚ್ಚಾಯ್ತು 25ಶೋಗಳು

ಮಫ್ತಿ ಚಿತ್ರಕ್ಕೆ ಫ್ಯಾಮಿಲಿ ಆಡಿಯನ್ಸ್ ಹೆಚ್ಚಾಗಿದ್ದಾರೆ. ಮಲ್ಟಿಫ್ಲೆಕ್ಟ್ ನಲ್ಲಿ ಎಲ್ಲಾ ಶೋಗಳು ಭರ್ತಿಯಾಗಿರುವ ಕಾರಣದಿಂದ ಇಂದಿನಿಂದ ಮಲ್ಟಿಫ್ಲೆಕ್ಸ್ ನಲ್ಲಿ 25 ಶೋಗಳನ್ನ ಹೆಚ್ಚು ಮಾಡಿದ್ದಾರೆ. ಅದರ ಜೊತೆಯಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರದಿಂದ ಸಿನಿಮಾಗೆ ಭರ್ಜರಿ ಡಿಮ್ಯಾಂಡ್ ಇದೆ.

ಶಿವಣ್ಣನ ಮೆಚ್ಚಿಕೊಂಡ ಅಭಿಮಾನಿಗಳು

ಮಫ್ತಿ ಸಿನಿಮಾದಲ್ಲಿನ ಶಿವಣ್ಣನ ಪಾತ್ರಕ್ಕೆ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿದೆ. ಈ ಹಿಂದೆ ಶಿವರಾಜ್ ಕುಮಾರ್ ಇಂತಹ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ. ಆದ್ದರಿಂದ ಭೈರತಿ ರಣಗಳ್ ಪಾತ್ರವನ್ನ ಸಿನಿ ರಸಿಕರು ಮೆಚ್ಚಿಕೊಂಡಾಡಿದ್ದಾರೆ.

ಮಫ್ತಿ ಚಿತ್ರ ನೋಡಲು ಬಂದ್ರು ಶಿವರಾಜ್ ಕುಮಾರ್

ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿರುವ 'ಮಫ್ತಿ' ಸಿನಿಮಾವನ್ನ ಇಂದು ಪ್ರೇಕ್ಷಕರ ಜೊತೆ ಶಿವರಾಜ್ ಕುಮಾರ್ ನೋಡಿದ್ದಾರೆ. ಭೈರತಿ ರಣಗಲ್ಲು ಪಾತ್ರವನ್ನ ತೆರೆ ಮೇಲೆ ಕಂಡು ಖುಷಿ ಪಟ್ಟಿದ್ದಾರೆ.

English summary
Multiplex increase number of shows from today for Kannada Movie 'Mafti' .

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada