For Quick Alerts
  ALLOW NOTIFICATIONS  
  For Daily Alerts

  'ಮಲ್ಟಿಪ್ಲೆಕ್ಸ್'ಗಳಲ್ಲಿ ಇನ್ನೂ ಸಿಗುತ್ತಿಲ್ಲ 200 ರೂಗೆ ಸಿನಿಮಾ ಟಿಕೆಟ್

  By Suneel
  |

  2017 ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ ಸಿಎಂ ಸಿದ್ದರಾಮಯ್ಯ, 'ಮಲ್ಟಿಪ್ಲೆಕ್ಸ್'ಗಳಿಗೆ ಏಕರೀತಿಯ ಪ್ರವೇಶದರ ನೀತಿ ಆದೇಶ ಹೊರಿಡಿಸಿದ್ದರು. ಸಿನಿ ಪ್ರೇಮಿಗಳಿಗೆ 'ಸಿನಿಮಾ ಭಾಗ್ಯ' ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶದಂತೆ ಇಂದಿನಿಂದ (ಏಪ್ರಿಲ್ 1) ಯಾವುದೇ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಯಾವುದೇ ಚಿತ್ರಕ್ಕೆ 200 ರೂಪಾಯಿಗಿಂತ ಹೆಚ್ಚು ಹಣ ಪಡೆಯುವ ಹಾಗಿರಲಿಲ್ಲ.['ಮಲ್ಟಿಫ್ಲೆಕ್ಸ್'ಗಳಿಗೆ ಸಿದ್ದು ಸರ್ಕಾರ ಶಾಕ್: ಚಿತ್ರಪ್ರೇಮಿಗಳಿಗೆ 'ಸಿನಿಮಾ ಭಾಗ್ಯ']

  ಆದರೆ ಸಿದ್ದು ಆದೇಶ ಮಲ್ಟಿಪ್ಲೆಕ್ಸ್ ಮಾಲೀಕರಿಗೆ ತಲುಪಿಲ್ಲವೋ ಏನೋ ಗೊತ್ತಿಲ್ಲ. ಆನ್ ಲೈನ್ ನಲ್ಲಿ ಯಾವುದೇ ಸಿನಿಮಾ ಬುಕ್ ಮಾಡಲು ಹೋದರು 200 ರೂಪಾಯಿಗಿಂತ ಹೆಚ್ಚಿನ ಬೆಲೆಯೇ ಇದೆ.

  ಬೇಕಿದ್ರೆ ಟಿಕೆಟ್ ಬುಕ್ ಮಾಡಲು ಟ್ರೈ ಮಾಡಿ ನೋಡಿ

  ಬೇಕಿದ್ರೆ ಟಿಕೆಟ್ ಬುಕ್ ಮಾಡಲು ಟ್ರೈ ಮಾಡಿ ನೋಡಿ

  ಹೌದು, ಬಜೆಟ್ ಮಂಡನೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ನೀಡಿದ ಆದೇಶದಂತೆ ಇಂದಿನಿಂದ ರಾಜ್ಯದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಯಾವುದೇ ಸಿನಿಮಾಗೆ 200 ರೂಪಾಯಿಗಿಂತ ಹೆಚ್ಚಿನ ಹಣ ಪಡೆಯುವಂತಿಲ್ಲ. ಆದರೆ ಈ ಆದೇಶವನ್ನು ಹಲವು ಮಲ್ಟಿಪ್ಲೆಕ್ಸ್ ಗಳು ಪಾಲಿಸಿಲ್ಲ.

  ಕನ್ನಡ ಚಿತ್ರಗಳ ಟಿಕೆಟ್ ದರವೇ 240 ಕ್ಕಿಂತ ಹೆಚ್ಚು

  ಕನ್ನಡ ಚಿತ್ರಗಳ ಟಿಕೆಟ್ ದರವೇ 240 ಕ್ಕಿಂತ ಹೆಚ್ಚು

  ಕೆಲವು ಸಾಧಾರಣ ಮಲ್ಟಿಪ್ಲೆಕ್ಸ್ ಗಳನ್ನು ಹೊರತುಪಡಿಸಿದರೆ ಒರಾಯನ್ ಮಾಲ್, ಸಿನಿಪೊಲಿಸ್ ಮತ್ತು ಇತರೆ ಹಲವು ಚಿತ್ರಮಂದಿರಗಳಲ್ಲಿ 240 ಕ್ಕಿಂತ ಹೆಚ್ಚಿನ ದರವೇ ಒಂದು ಟಿಕೆಟ್ ಬೆಲೆಯಾಗಿ ನಿಗದಿಯಾಗಿದೆ.

  ಸರ್ಕಾರ ಆದಷ್ಟು ಬೇಗ ಕಠಿಣ ಕ್ರಮ ಕೈಗೊಳ್ಳಬೇಕು

  ಸರ್ಕಾರ ಆದಷ್ಟು ಬೇಗ ಕಠಿಣ ಕ್ರಮ ಕೈಗೊಳ್ಳಬೇಕು

  ಕನ್ನಡ ಚಿತ್ರೋದ್ಯಮ ಅಭಿವೃದ್ಧಿಗಾಗಿ ಕೈಗೊಂಡಿರುವ ಈ ಕ್ರಮಕ್ಕೆ, ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಸ್ಪಂದಿಸದ ಕಾರಣ ಸರ್ಕಾರ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕಿದೆ.

  ವಾರ್ತಾ ಇಲಾಖೆ ನಿರ್ದೇಶಕರು ಹೇಳಿದ್ದೇನು?

  ವಾರ್ತಾ ಇಲಾಖೆ ನಿರ್ದೇಶಕರು ಹೇಳಿದ್ದೇನು?

  ಮಲ್ಟಿಪ್ಲೆಕ್ಸ್ ಗಳು ಇಂದಿನಿಂದ ಸಿನಿಮಾ ಟಿಕೆಟ್ ದರ ಕಡಿಮೆ ಮಾಡದಿರಲು ಕಾರಣವೇನು ಎಂಬುದಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೆಶಕರಾದ ಎನ್.ಆರ್.ವಿಶುಕುಮಾರ್ ಅವರು ಆದೇಶ ಇನ್ನೂ ಸಹ ಕೈಸೇರಿಲ್ಲದಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಕನ್ನಡ ಚಿತ್ರ ಪ್ರದರ್ಶನ ಕಡ್ಡಾಯ

  ಕನ್ನಡ ಚಿತ್ರ ಪ್ರದರ್ಶನ ಕಡ್ಡಾಯ

  ರಾಜ್ಯದಲ್ಲಿ ಸಿನಿ ಪ್ರಿಯರ, 'ಮಲ್ಟಿಪ್ಲೆಕ್ಸ್'ಗಳಲ್ಲಿ ಕನ್ನಡ ಚಿತ್ರಗಳು ಹೆಚ್ಚಾಗಿ ಪ್ರದರ್ಶನವಾಗುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ, ಕನ್ನಡ ಸಿನಿಮಾ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಿ ಬಜೆಟ್ ಮಂಡನೆ ವೇಳೆ ಆದೇಶ ಹೊರಡಿಸಲಾಗಿತ್ತು. ಅಲ್ಲದೆ ಪ್ರತಿ ದಿನ ಒಂದು ಪರದೆಯಲ್ಲಿ ಮಧ್ಯಾಹ್ನ 1.30 ರಿಂದ 7.30 ರವರೆಗಿನ ಪ್ರಮುಖ ಅವಧಿಯಲ್ಲಿ ಕನ್ನಡ ಚಲನಚಿತ್ರ ಪ್ರದರ್ಶನ ಕಡ್ಡಾಯ ಎಂದು ಸರ್ಕಾರ ಸೂಚಿಸಿತ್ತು. ಈ ಆದೇಶವನ್ನು ಮಲ್ಟಿಪ್ಲೆಕ್ಸ್ ಗಳು ಪಾಲಿಸುತ್ತಿವೆಯೇ ಎಂಬುದರ ಮೇಲೆಯೂ ನಿಗಾವಹಿಸಬೇಕಿದೆ.

  English summary
  In an excellent move by Karnataka Government, the ticket prices in Karnataka multiplexes have been capped at Rs 200 on 2017 Budget. But Multiplex Tickets Prices For Kannada Movie Not decreased even today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X