»   » ಚಿತ್ರಮಂದಿರಗಳಲ್ಲಿ ಹೊರಗಿನ ಆಹಾರ ನಿರ್ಬಂಧಿಸುವಂತಿಲ್ಲ: ಬಾಂಬೆ ಹೈಕೋರ್ಟ್‌

ಚಿತ್ರಮಂದಿರಗಳಲ್ಲಿ ಹೊರಗಿನ ಆಹಾರ ನಿರ್ಬಂಧಿಸುವಂತಿಲ್ಲ: ಬಾಂಬೆ ಹೈಕೋರ್ಟ್‌

Posted By:
Subscribe to Filmibeat Kannada

ಚಲನಚಿತ್ರಮಂದಿರಗಳಲ್ಲಿ ಹೊರಗಿನಿಂದ ತಂದ ಆಹಾರ ಪದಾರ್ಥ ಬಳಸದಂತೆ ನಿಷೇಧ ಹೇರುವಂತಿಲ್ಲ ಎಂದು ಬಾಂಬೆ ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಮಲ್ಟಿಫ್ಲೆಕ್ಸ್ ಸೇರಿದಂತೆ ಚಿತ್ರಮಂದಿರಗಳಲ್ಲಿ ತಿಂಡಿ-ತಿನಿಸು ಬೆಲೆ ದುಬಾರಿಯಾಗಿದೆ. ಕುಡಿಯುವ ನೀರಿನ ಬೆಲೆ ಹೆಚ್ಚಾಗಿದೆ.

ಇದನ್ನ ಖಂಡಿಸಿ ಮುಂಬೈ ಹೈ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಾಗಿತ್ತು. ಅನಾರೋಗ್ಯದಿಂದ ವ್ಯಕ್ತಿ ಬಳಲುತ್ತಿದ್ದರೆ ಆತನ ಬದುಕಿನ ಹಕ್ಕನ್ನು ಇದರಿಂದ ನಿರಾಕರಿಸಿದಂತಾಗುತ್ತದೆ ಎಂದು ವ್ಯಕ್ತಿಯೊಬ್ಬರು ಹೈಕೋರ್ಟ್‌ ಮೊರೆ ಹೋಗಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠ, 'ಥಿಯೇಟರ್‌ನ ಒಳಗೆ ಯಾವುದೇ ಥರದ ತಿನಿಸು ಮಾರಾಟ ಮಾಡಬಾರದು ಅಥವಾ ಥಿಯೇಟರ್‌ಗೆ ಯಾರೂ ಆಹಾರ ಕೊಂಡೊಯ್ಯಲು ಅವಕಾಶ ನೀಡಬಾರದು. ಇಲ್ಲವೇ, ಹೊರಗಿನಿಂದ ಆಹಾರ-ನೀರು ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಬೇಕು ಹಾಗೂ ಥಿಯೇಟರ್‌ ನೊಳಗೂ ತಿಂಡಿ ಮಾರಾಟಕ್ಕೆ ಅನುವು ಮಾಡಿಕೊಡಬೇಕು' ಎಂದು ಖಡಕ್ಕಾಗಿ ಸೂಚಿಸಿದೆ.

Multiplexes cannot prohibit outside food says Bombay high court

ಇದು ಮುಂಬೈ ಹೈ ಕೋರ್ಟ್ ನೀಡಿರುವ ತೀರ್ಪು. ಪ್ರಸ್ತುತ ಕರ್ನಾಟಕದಲ್ಲೂ ಬಹುತೇಕ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಆಹಾರ ಮತ್ತು ತಿನಿಸು ತರುವುದನ್ನು ನಿರ್ಬಂಧಿಸಲಾಗಿದೆ. ಇದರ ವಿರುದ್ಧ ಕೂಡ ಕನ್ನಡ ಪ್ರೇಕ್ಷಕರು ಹಾಗೂ ಕೆಲವು ಸಿನಿಮಾ ನಿರ್ಮಾಪಕರು ಪ್ರತಿಭಟನೆ, ಹೋರಾಟ ಮಾಡುತ್ತಿದ್ದಾರೆ. ಆದ್ರೆ, ಯಾವುದೇ ಬದಲವಾಣೆ ಇಲ್ಲ.

English summary
The Bombay high court on Wednesday reiterated that patrons cannot be unilaterally prohibited from bringing their own food and water bottles inside theatres and multiplexes when vendors are allowed to serve inside at exorbitant prices.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X