Don't Miss!
- News
Breaking; ಸರ್ಕಾರಿ ನೌಕರರ ವರ್ಗಾವಣೆ ಹೊಸ ಸುತ್ತೋಲೆ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Automobiles
ಹೋಂಡಾ ಆಕ್ಟೀವಾ 6Gಗೆ ಸೆಡ್ಡು ಹೊಡೆಯಲು ಮಾರುಕಟ್ಟೆಗಿಳಿದ ಹೀರೋ Xoom... ಏನಿದರ ವಿಶೇಷತೆ!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಿಲ್ಲರೆ ಸಮಸ್ಯೆ ಇದ್ದರೂ 'ಮಮ್ಮಿ' ನೋಡಲು ನೂಕುನುಗ್ಗಲು.!
500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳು ಬ್ಯಾನ್ ಆದ್ಮೇಲೆ ಬ್ಯಾಂಕ್ ಗಳು ಹೌಸ್ ಫುಲ್ ಆಗಿತ್ತು. ಥಿಯೇಟರ್ ಗಳು ಖಾಲಿ ಹೊಡೆಯುತ್ತಿತ್ತು. ಕರೆನ್ಸಿ ಸಮಸ್ಯೆಯಿಂದ 'ನಟರಾಜ ಸರ್ವೀಸ್' ಸೇರಿದಂತೆ ರಿಲೀಸ್ ಆದ ಎಲ್ಲಾ ಚಿತ್ರಗಳ ಕಲೆಕ್ಷನ್ ಡಲ್ ಆಯ್ತು.
ಕನ್ನಡ ಚಿತ್ರರಂಗ ಲಾಸ್ ನಲ್ಲಿ ಇರುವಾಗಲೇ ಸ್ಯಾಂಡಲ್ ವುಡ್ ನ ಅಕ್ಷರಶಃ 'ಸೇವ್' ಮಾಡಿರುವುದು 'ಮಮ್ಮಿ ಸೇವ್ ಮಿ' ಸಿನಿಮಾ.! [ವಿಮರ್ಶೆ: ಗುಂಡಿಗೆ ಗಟ್ಟಿ ಮಾಡಿಕೊಂಡು ಮಿಸ್ ಮಾಡದೇ 'ಮಮ್ಮಿ' ನೋಡಿ]
ಹೌದು, ಚಿಲ್ಲರೆ ಸಮಸ್ಯೆ ಇದ್ದರೂ 'ಮಮ್ಮಿ ಸೇವ್ ಮಿ' ಚಿತ್ರವನ್ನ ನೋಡೋಕೆ ಕರುನಾಡ ಜನತೆ ಹಿಂದೇಟು ಹಾಕುತ್ತಿಲ್ಲ. ಬಹುತೇಕ ಮಲ್ಟಿಪ್ಲೆಕ್ಸ್ ಗಳಲ್ಲಿ 'ಮಮ್ಮಿ ಸೇವ್ ಮಿ' ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಲ್ಲಿಗೆ, ಭರ್ಜರಿ ಕಲೆಕ್ಷನ್ ಮಾಡುವಲ್ಲಿ 'ಮಮ್ಮಿ ಸೇವ್ ಮಿ' ಸಿನಿಮಾ ಯಶಸ್ವಿ ಆಗಿದೆ.

'ಮಮ್ಮಿ ಸೇವ್ ಮಿ' ಚಿತ್ರಕ್ಕೆ ಡಿಮ್ಯಾಂಡೋ ಡಿಮ್ಯಾಂಡು.!
ಕಳೆದ ವಾರ ಬೆಂಗಳೂರಿನಾದ್ಯಂತ ಒಟ್ಟು 41 ಸ್ಕ್ರೀನ್ ಗಳಲ್ಲಿ 'ಮಮ್ಮಿ ಸೇವ್ ಮಿ' ಚಿತ್ರ ಬಿಡುಗಡೆ ಆಗಿತ್ತು. ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಎಲ್ಲೆಲ್ಲೂ 'ಮಮ್ಮಿ ಸೇವ್ ಮಿ' ಚಿತ್ರಕ್ಕೆ ಹೌಸ್ ಫುಲ್ ಬೋರ್ಡ್ ಬೀಳಲು ಶುರು ಆಯ್ತು. ಡಿಮ್ಯಾಂಡ್ ಹೆಚ್ಚಾಗುತ್ತಿದ್ದಂತೆ ಚಿತ್ರದ ಥಿಯೇಟರ್ ಲಿಸ್ಟ್ ಕೂಡ ಉದ್ದ ಬೆಳೆಯುತ್ತಿದೆ. ['ಮಮ್ಮಿ' ದೆವ್ವ ನೋಡಿ ಭಯ ಭೀತಗೊಂಡ ವಿಮರ್ಶಕರು.!]

ಕರ್ನಾಟಕದಾದ್ಯಂತ ಉತ್ತಮ ಪ್ರತಿಕ್ರಿಯೆ
'ಮಮ್ಮಿ ಸೇವ್ ಮಿ' ಪಕ್ಕಾ ಕ್ಲಾಸ್ ಸಿನಿಮಾ. ಇದರಲ್ಲಿ ಪ್ರಿಯಾಂಕಾ ಉಪೇಂದ್ರ ಬಿಟ್ಟರೆ ಬೇರೆ ಯಾವ ಸ್ಟಾರ್ ಕೂಡ ಇಲ್ಲ. ಹೀಗಿದ್ದರೂ, ಕರ್ನಾಟಕದಾದ್ಯಂತ 161 ಥಿಯೇಟರ್ ಗಳಲ್ಲಿ 'ಮಮ್ಮಿ ಸೇವ್ ಮಿ' ಸಿನಿಮಾ ರಿಲೀಸ್ ಆಗಿತ್ತು. ಎಲ್ಲಾ ಸೆಂಟರ್ ಗಳಲ್ಲಿ ಚಿತ್ರದ ಕಲೆಕ್ಷನ್ ಜೋರಾಗಿದೆ.

ಕಲೆಕ್ಷನ್ ಎಷ್ಟಾಗಿದೆ?
ಮೂಲಗಳ ಪ್ರಕಾರ, ನಾಲ್ಕು ದಿನಗಳಲ್ಲಿ 'ಮಮ್ಮಿ ಸೇವ್ ಮಿ' ಚಿತ್ರ 2.22 ಕೋಟಿ ಕಲೆಕ್ಷನ್ ಮಾಡಿದೆ.

ಹೊಸಬರ ಶ್ರಮಕ್ಕೆ ಸಿಕ್ಕ ಪ್ರತಿಫಲ
ಯುವ ನಿರ್ದೇಶಕ ಲೋಹಿತ್ ಆಕ್ಷನ್ ಕಟ್ ಹೇಳಿದ ಮೊದಲ ಚಿತ್ರ 'ಮಮ್ಮಿ ಸೇವ್ ಮಿ'. ಚೊಚ್ಚಲ ಚಿತ್ರದಲ್ಲಿಯೇ ಲೋಹಿತ್ ಕನ್ನಡಿಗರ ಮನ ಗೆದ್ದಿದ್ದಾರೆ.