For Quick Alerts
  ALLOW NOTIFICATIONS  
  For Daily Alerts

  ಕನ್ನಡದ 'ಮಮ್ಮಿ' ತೆಲುಗಿನಲ್ಲಿ 'ಚಿನ್ನಾರಿ'

  By Bharath Kumar
  |

  ನಟಿ ಪ್ರಿಯಾಂಕ ಉಪೇಂದ್ರ ಅಭಿನಯದ 'ಮಮ್ಮಿ-ಸೇವ್ ಮಿ' ಚಿತ್ರ, ಬಿಡುಗಡೆಗೆ ಮುಂಚೆ ಹೆಚ್ಚು ಸದ್ದು ಮಾಡುತ್ತಿದೆ. ಈಗಾಗಲೇ ಟ್ರೈಲರ್ ನಿಂದ ಸಖತ್ ಥ್ರಿಲ್ಲಿಂಗ್ ಎನಿಸಿರುವ 'ಮಮ್ಮಿ' ಪ್ರೇಕ್ಷಕರಲ್ಲಿ ಭಯ ಹುಟ್ಟಿಸಿದೆ. ಬರಿ ಟ್ರೈಲರ್ ನೋಡಿನೇ, ಗಾಂಧಿನಗರದ ಮಂದಿ ಚಪ್ಪಾಳೆ ಹೊಡೆಯುತ್ತಿದ್ದಾರೆ.

  ಇಂತಹ ಸೆನ್ಸೆಷ್ನಲ್ ಹುಟ್ಟುಹಾಕಿರುವ ಮಮ್ಮಿ, ಈಗ ಮತ್ತೊಂದು ಯಶಸ್ಸಿನತ್ತ ಸಾಗಿದೆ. ಹೌದು, 'ಮಮ್ಮಿ ಸೇವ್ ಮಿ' ಚಿತ್ರ ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ, ಪರಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ.[ಥ್ರಿಲ್ಲಿಂಗ್ ಆಗಿದೆ 'ಮಮ್ಮಿ-ಸೇವ್ ಮಿ' ಹೊಸ ಟ್ರೈಲರ್]

  ಈಗಾಗಲೇ ತೆಲುಗಿನಲ್ಲಿ ಡಬ್ಬಿಂಗ್ ಕೆಲಸ ಪೂರ್ಣವಾಗಿದ್ದು, 'ಚಿನ್ನಾರಿ' ಎಂಬ ಟೈಟಲ್ ಫಿಕ್ಸ್ ಆಗಿದೆ. ಕನ್ನಡದಲ್ಲಿ ಕೆ ರವಿಕುಮಾರ್ ಬಂಡವಾಳ ಹಾಕಿದ್ದರೇ, ತೆಲುಗಿನಲ್ಲಿ ಮಹೇಶ್ ರೆಡ್ಡಿ ಎಂಬುವರು ಬಂಡವಾಳ ಹೂಡಿದ್ದಾರೆ. ಇನ್ನೂ ಇತ್ತೀಚೆಗೆ ತೆಲುಗು ವರ್ಷನ್ ಟ್ರೈಲರ್ ರಿಲೀಸ್ ಆಗಿದ್ದು, 'ಭಲೇ ಭಲೇ ಮಗಾಡಿವೂಯ್', 'ಬಾಬು ಬಂಗಾರಂ' ಖ್ಯಾತಿಯ ನಿರ್ದೇಶಕ ಮಾರುತಿ ಬಿಡುಗಡೆ ಮಾಡಿದರು.[ಸಖತ್ ಥ್ರಿಲ್ಲಿಂಗ್ ಆಗಿದೆ 'ಮಮ್ಮಿ-ಸೇವ್ ಮಿ' ಟ್ರೈಲರ್ ]

  Mummy Save Me is dubbed in Telugu as Chinnari

  ಇನ್ನೂ, 'ಮಮ್ಮಿ' ಚಿತ್ರದ ಟ್ರೈಲರ್ ನೋಡಿದ ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆಯೊಂದು, ತಮಿಳು ಹಾಗೂ ಹಿಂದಿಯ ರಿಮೇಕ್ ರೈಟ್ಸ್ ಖರೀದಿಸಲು ಮುಂದಾಗಿದೆಯಂತೆ.[ಯುವ ನಿರ್ದೇಶಕನ ಪ್ರಯೋಗಕ್ಕೆ ಬೆಚ್ಚಿಬಿದ್ದ ಗಾಂಧಿನಗರ.!]

  'ಮಮ್ಮಿ-ಸೇವ್ ಮಿ' ನಾಯಕಿ ಪ್ರಧಾನ ಚಿತ್ರವಾಗಿದ್ದು, ವಿದೇಶದಲ್ಲಿ ನಡೆದ ಒಂದು ನೈಜಕಥೆಯನ್ನ ಆಧರಿಸಿದ ಸಿನಿಮಾ. ಚಿತ್ರದಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಅವರು 7 ತಿಂಗಳ ಗರ್ಭಿಣಿ ಪಾತ್ರವನ್ನ ನಿರ್ವಹಿಸಿದ್ದಾರೆ. ಅವರ ಪಾತ್ರಕ್ಕೆ ಈಗಾಗಲೇ ಎಲ್ಲ ಕಡೆಯಿಂದ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಇನ್ನೂ ಖ್ಯಾತ ಬಾಲನಟಿ ಯುವಿನಾ ಪಾರ್ಥವಿ ಕೂಡ ಚಿತ್ರದಲ್ಲಿ ಅಭಿನಯಿಸಿದ್ದು, ಪ್ರಿಯಾಂಕ ಉಪೇಂದ್ರ ಅವರ ಮಗಳ ಪಾತ್ರದಲ್ಲಿ ಯುವಿನಾ ಕಾಣಿಸಿಕೊಂಡಿದ್ದಾರೆ.[ಹಾಲಿವುಡ್ ಶೈಲಿಯಲ್ಲಿ 'ಮಮ್ಮಿ'ಗೆ ರೀ-ರೆಕಾರ್ಡಿಂಗ್]

  ಯುವ ನಿರ್ದೇಶಕ ಲೋಹಿತ್ ಅವರು ಆಕ್ಷನ್-ಕಟ್ ಹೇಳಿದ್ದು, ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಯೋಜನೆ ಮಾಡಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೇ, ಇದೇ ತಿಂಗಳಲ್ಲಿ ''ಮಮ್ಮಿ-ಸೇವ್ ಮಿ' ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ.

  English summary
  Kannada Actress Priyanka Upendra starrer 'Mummy Save Me' is dubbed in Telugu as 'Chinnari'. Also there is a demand for Hindi and Tamil Remake rights of 'Mummy Save Me'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X