For Quick Alerts
  ALLOW NOTIFICATIONS  
  For Daily Alerts

  MM2 ಬುಕ್ಕಿಂಗ್ ಆರಂಭ: ಸಿಡ್ನಿಯಲ್ಲಿ ಬಹುತೇಕ ಸೀಟುಗಳು ಭರ್ತಿ

  By Suneetha
  |

  ಸೂಪರ್ ಹಿಟ್ ಹಾಡುಗಳ ಮೂಲಕ ಚಿತ್ರದ ಬಿಡುಗಡೆಗೆ ಎಲ್ಲರನ್ನೂ ಕಾಯುವಂತೆ ಮಾಡಿದ 'ಮುಂಗಾರು ಮಳೆ 2', ಮುಂದಿನ ತಿಂಗಳು (ಸೆಪ್ಟೆಂಬರ್ 9) ತೆರೆ ಕಾಣುತ್ತಿದೆ.

  ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಕರಾವಳಿ ಬೆಡಗಿ ನೇಹಾ ಶೆಟ್ಟಿ ಇದೇ ಮೊದಲ ಬಾರಿಗೆ ಒಂದಾಗಿ ಕಾಣಿಸಿಕೊಂಡಿರುವ 'ಮುಂಗಾರು ಮಳೆ 2' ಬಿಡುಗಡೆಗೆ ಮುನ್ನವೇ ದಾಖಲೆ ಸೃಷ್ಟಿಸಿದೆ.[ಆಡಿಯೋ ವಿಮರ್ಶೆ: ಹಾಡುಗಳ ವರ್ಷಧಾರೆ 'ಮುಂಗಾರು ಮಳೆ']

  ಅಂದಹಾಗೆ ಬರೀ ನಮ್ಮಲ್ಲಿ ಮಾತ್ರವಲ್ಲದೇ, ವಿದೇಶದಲ್ಲೂ ಬಹಳ ಜೋರಾಗಿ ಮಳೆ ಸುರಿಯಲಿದ್ದು, ಈಗಾಗಲೇ ಥಿಯೇಟರ್ ಲಿಸ್ಟ್ ಕೂಡ ಹೊರಬಿದ್ದಿದೆ. ಚಿತ್ರದಲ್ಲಿ ನಾಲ್ವರು ನಾಯಕಿಯರು ಮಿಂಚಿದ್ದು, ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.[ಸೆಪ್ಟೆಂಬರ್ ನಲ್ಲಿ 'ಮುಂಗಾರು ಮಳೆ 2' ಆರ್ಭಟ ಆರಂಭ.?]

  ಅಂದು ಯೋಗರಾಜ್ ಭಟ್ರು ಮಾಡಿದ ಕಮಾಲ್ ನೋಡಿ ಪ್ರೇಕ್ಷಕರು ವಾವ್...ಎಂದಿದ್ದರು, ಇಂದು ಶಶಾಂಕ್ ಅವರು ಯಾವ ರೀತಿ ಪ್ರೇಕ್ಷಕರಿಗೆ ಮೋಡಿ ಮಾಡಲಿದ್ದಾರೆ ಅನ್ನೋದು ಮುಂದಿನ ತಿಂಗಳಿನಲ್ಲಿ ತಿಳಿಯಲಿದೆ. ವಿದೇಶಗಳ ಥಿಯೇಟರ್ ಲಿಸ್ಟ್ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ.....

  ಥಿಯೇಟರ್ ಲಿಸ್ಟ್

  ಥಿಯೇಟರ್ ಲಿಸ್ಟ್

  ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸೌತ್ ಈಸ್ಟ್ ಏಷ್ಯಾ, ಯು.ಕೆ, ಯುರೋಪ್, ಫ್ರಾನ್ಸ್, ಹೋಲೆಂಡ್, ಜರ್ಮನಿ, ಐರ್ಲಾಂಡ್, ಸ್ವೀಡನ್, ಡೆನ್ಮಾರ್ಕ್, ಕೆನಡಾ, ಯು.ಎಸ್.ಎ, ಇಟಲಿ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಗ್ರ್ಯಾಂಡ್ ಆಗಿ ತೆರೆ ಕಾಣಲಿದೆ.['ಸರಿಯಾಗಿ ನೆನಪಿದೆ' ಹಾಡಿನ ಧಾಟಿಯಲ್ಲಿ ಅಭಿಮಾನಿಯ ಪ್ರಯತ್ನ]

  ಬಹುತೇಕ ಸೀಟುಗಳು ಭರ್ತಿ

  ಬಹುತೇಕ ಸೀಟುಗಳು ಭರ್ತಿ

  ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ, ಸಿಡ್ನಿಯಲ್ಲಿ ಈಗಾಗಲೇ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು, ಬಹುತೇಕ ಎಲ್ಲಾ ಸೀಟ್ ಗಳು ಭರ್ತಿ ಆಗಿವೆ. ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಎಂದು ಸ್ವತಃ ನಿರ್ದೇಶಕ ಶಶಾಂಕ್ ಅವರೇ ಟ್ವೀಟ್ ಮಾಡಿ, ಸಂತಸವನ್ನು ಹಂಚಿಕೊಂಡಿದ್ದಾರೆ.['ಮುಂಗಾರು ಮಳೆ 2' ನಲ್ಲಿ ಗಣಿಗೆ ಎಷ್ಟು ಜನ ನಾಯಕಿಯರು.?]

  ವಿದೇಶದಲ್ಲಿ ಮಳೆಯ ಆರ್ಭಟ

  ವಿದೇಶದಲ್ಲಿ ಮಳೆಯ ಆರ್ಭಟ

  ಈ ಮೊದಲು 'ರಂಗಿತರಂಗ', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಅಂತ ಹಲವು ಕನ್ನಡದ ಸದಭಿರುಚಿಯ ಚಿತ್ರಗಳು ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ವಿದೇಶದಲ್ಲಿ ವಿಸ್ತರಿಸಿರೋದು ಸಂತಸದ ಸಂಗತಿ. ಇದೀಗ ಈ ಎಲ್ಲಾ ಸಿನಿಮಾಗಳ ಸಾಲಿಗೆ 'ಮುಂಗಾರು ಮಳೆ 2' ಹೊಸ ಸೇರ್ಪಡೆಯಾಗಿದೆ. ಶಶಾಂಕ್ ಅವರ ಮಳೆ ಕೂಡ ಹೊಸ ಇತಿಹಾಸ ಸೃಷ್ಟಿಸಲಿ.

  ಕರ್ನಾಟಕ ಮತ್ತು ವಿದೇಶದಲ್ಲಿ ಏಕಕಾಲಕ್ಕೆ

  ಕರ್ನಾಟಕ ಮತ್ತು ವಿದೇಶದಲ್ಲಿ ಏಕಕಾಲಕ್ಕೆ

  ಈಗಾಗಲೇ ಹಾಡುಗಳು ಸೂಪರ್ ಹಿಟ್ ಆಗಿರುವ ಕಾರಣ ಸಿನಿಮಾ ಗೆದ್ದೇ ಗೆಲ್ಲುತ್ತೆ, ಅನ್ನೋ ಭರವಸೆಯಲ್ಲಿದ್ದಾರೆ ನಿರ್ದೇಶಕ ಶಶಾಂಕ್ ಅವರು. ಅಂತೂ ಕರ್ನಾಟಕದಲ್ಲಿ ರಿಲೀಸ್ ಆಗೋ ದಿನಾನೇ, ವಿದೇಶದಲ್ಲೂ ಈ ಸಿನಿಮಾ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ ಅಂದ್ರೆ ಕನ್ನಡ ಚಿತ್ರರಂಗ ಎಲ್ಲಿಗೋ ಹೋಗುತ್ತಿದೆ ಅಂತಾಯ್ತು ಅಲ್ವಾ.

  English summary
  Kannada actor Ganesh and Actress Neha Shetty starrer Kannada movie 'Mungaru Male 2' is all set for a grand release in the U.S., U.K., U.A.E, Australia, New Zealand and other key international markets on September 9th. Its makers have released its overseas schedule lists. The movie is directed by Shashank.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X