»   » ಮುತಾಲಿಕ್ ಪೌರುಷಕ್ಕೇ ಸವಾಲೆಸೆದ ಮುನಿರತ್ನ

ಮುತಾಲಿಕ್ ಪೌರುಷಕ್ಕೇ ಸವಾಲೆಸೆದ ಮುನಿರತ್ನ

Posted By:
Subscribe to Filmibeat Kannada

ಶ್ರೀರಾಮಸೇನೆ ಸೇರಿದಂತೆ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಹಿಂದೂ ಪರ ಸಂಘಟನೆಗಳಿಂದ 'ಕಠಾರಿವೀರ ಸುರಸುಂದರಾಂಗಿ' ಚಿತ್ರದ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕ ಮುನಿರತ್ನ ಪ್ರತಿಕ್ರಿಯಿಸಿದ್ದಾರೆ.

ಕಾನೂನು ಚೌಕಟ್ಟಿನಲ್ಲಿ ಹೋರಾಡಿ. ಅದುಬಿಟ್ಟು ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ ಎಂದು ಮುತಾಲಿಕ್‌ಗೆ ಮುನಿರತ್ನ ನೇರವಾಗಿ ಟಿವಿ ವಾಹಿನಿಗಳ ಮೂಲಕ ಹೇಳಿದರು. ಹಿಂದೂ ಧರ್ಮದ ಬಗ್ಗೆ ನಮಗೂ ಅಪಾರ ಗೌರವವಿದೆ. ಕಾನೂನು ಚೌಕಟ್ಟಿನಲ್ಲೇ ಚಿತ್ರವನ್ನು ಬಿಡುಗಡೆ ಮಾಡಿದ್ದೇನೆ ಎಂದಿದ್ದಾರೆ ಮುನಿರತ್ನ.

ಹಿಂದೂ ಧರ್ಮದ ಮೇಲೆ ಗೌರವವಿದ್ದಂತೆ ಸಂವಿಧಾನದ ಮೇಲೂ ನಿಮಗೆ ಗೌರವವಿದ್ದರೆ ಕಾನೂನು ಚೌಕಟ್ಟಿನಲ್ಲಿ ಹೋರಾಡಿ. ಅದುಬಿಟ್ಟು ಪೋಸ್ಟರ್‌ಗಳನ್ನು ಹರಿಯುವುದು, ಚಿತ್ರ ಪ್ರದರ್ಶನಕ್ಕೆ ತೊಂದರೆ ಮಾಡುವುದು ಸರಿಯಲ್ಲ ಎಂದು ತೀಕ್ಷ್ಣವಾಗಿ ಮುನಿರತ್ನ ಹೇಳಿದರು.

ಮುತಾಲಿಕ್ ಅವರೇ ಸಿನಿಮಾ ಮೇಲೆ ನಿಮ್ಮ ಪೌರುಷ ತೋರಿಸಬೇಡಿ. ಮುಂಬೈನಲ್ಲಿ ಉಗ್ರರು ದಾಳಿ ನಡೆಸಿದಾಗ ಎಲ್ಲಿ ಹೋಗಿತ್ತು ನಿಮ್ಮ ಪೌರುಷ ಎಂದು ಪ್ರಶ್ನಿಸಿರುವ ಮುನಿರತ್ನ, ಉಗ್ರರ ಎದುರು ಹೋಗಿ ನಿಮ್ಮ ಪೌರುಷ ತೋರಿಸಿ ಎಂದು ಅವರನ್ನು ಛೇಡಿಸಿದರು.

ಮುತಾಲಿಕ್ ಅವರ ಮುಖಕ್ಕೆ ಮಸಿ ಬಳಿದಾಗ ತೀವ್ರವಾಗಿ ಖಂಡಿಸಿದವನು ನಾನು. ಅವರ ಬೆಂಬಲಕ್ಕೆ ನಿಂತವನು. ನಾನು ಪದೇ ಪದೇ ಹೇಳುತ್ತಿದ್ದೇನೆ. ಕಾನೂನನ್ನು ಕೈಗೆತ್ತಿಕೊಳ್ಳಬೇಡಿ. ಕಾನೂನು ಚೌಕಟ್ಟಿನಲ್ಲಿ ಹೋರಾಡಿ. ನಾನು ಸುಮ್ಮನಿರುವ ವ್ಯಕ್ತಿಯಲ್ಲ ಎಂದು ಮುತಾಲಿಕ್ ಅವರಿಗೆ ಮುನಿರತ್ನ ಎಚ್ಚರಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

English summary
Katari Veera Surasundarangi producer Munirathna reacts to Sri Ram Sene chief Pramod Muthalik. The organisations alleges that the scenes in the film 'Katari Veera' is disrespectful towards Hindu deities and it has hurt Hindu religious sentiments.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada