»   » ಅನಿಲ್, ಉದಯ್ ಇದ್ದಿದ್ರೆ...ಇಂದು 'ಕುರುಕ್ಷೇತ್ರ' ಕದನವಾಡುತ್ತಿದ್ದರು.!

ಅನಿಲ್, ಉದಯ್ ಇದ್ದಿದ್ರೆ...ಇಂದು 'ಕುರುಕ್ಷೇತ್ರ' ಕದನವಾಡುತ್ತಿದ್ದರು.!

Posted By:
Subscribe to Filmibeat Kannada

'ಮಾಸ್ತಿಗುಡಿ' ದುರಂತದಲ್ಲಿ ಖಳನಟರಾದ ಅನಿಲ್ ಮತ್ತು ರಾಘವ ಉದಯ್ ಸಾವನ್ನಪ್ಪಿದರು. ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ದುರಂತ ಸಾವಿಗೀಡಾದ ಇವರಿಬ್ಬರು ಇಂದು ಬದುಕಿದಿದ್ದಿದ್ರೆ ಅನೇಕ ದೊಡ್ಡ ದೊಡ್ಡ ಅವಕಾಶಗಳು ಅವರ ಪಾಲಾಗುತ್ತಿತ್ತು. ಅದರಲ್ಲಿ 'ಕುರುಕ್ಷೇತ್ರ' ಸಿನಿಮಾ ಕೂಡ ಒಂದು.

'ಕುರುಕ್ಷೇತ್ರ'ದಲ್ಲಿ ಕಾಣಿಸದ ಕನ್ನಡದ ಸ್ಟಾರ್ ನಟರು: ಅಸಲಿ ಕಾರಣ ಕೊಟ್ಟ ಮುನಿರತ್ನ!

'ಕುರುಕ್ಷೇತ್ರ' ಸಿನಿಮಾದ ಭೀಮನ ಪಾತ್ರಕ್ಕೆ ಬಾಲಿವುಡ್ ನಟ ಡ್ಯಾನಿಶ್ ಈಗ ಆಯ್ಕೆ ಆಗಿದ್ದಾರೆ. ಒಂದು ವೇಳೆ ಇಂದು ಅನಿಲ್ ಮತ್ತು ಉದಯ್ ಇದ್ದಿದ್ದರೆ ಅವರಲ್ಲಿ ಒಬ್ಬರಿಗೆ 'ಕುರುಕ್ಷೇತ್ರ'ದ ಭೀಮನಾಗಿ ನಟಿಸುವ ಅವಕಾಶ ಸಿಗುತ್ತಿತ್ತು. ಈ ವಿಷಯವನ್ನು ಹೇಳಿದ್ದು ಸ್ವತಃ ನಿರ್ಮಾಪಕ ಮುನಿರತ್ನ.!

Munirathna spoke about Anil and Raghava Uday.

'ಕುರುಕ್ಷೇತ್ರ' ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ಮುನಿರತ್ನ 'ಈ ಚಿತ್ರದಲ್ಲಿ ಹೆಚ್ಚು ಕನ್ನಡದ ಕಲಾವಿದರೇ ನಟಿಸಿದ್ದಾರೆ. ಆದರೆ ಭೀಮನ ಪಾತ್ರದಲ್ಲಿ ಡ್ಯಾನಿಶ್ ನಟಿಸಿದ್ದು, ಅನಿಲ್ ಮತ್ತು ಉದಯ್ ಇದ್ದಿದ್ದರೆ ಈ ಚಿತ್ರದಲ್ಲಿ ಅವರನ್ನೇ ಭೀಮನಾಗಿ ಆಯ್ಕೆ ಮಾಡುತಿದ್ವೀ' ಅಂತ ಹೇಳಿದರು.

'ಕುರುಕ್ಷೇತ್ರ' ಚಿತ್ರದ ಯಾವ್ಯಾವ ಪಾತ್ರಗಳಲ್ಲಿ ಯಾವ್ಯಾವ ನಟರು ಮಿಂಚಲಿದ್ದಾರೆ ನೋಡಿ..

ಅನಿಲ್ ಹಾಗೂ ಉದಯ್ ಎಂಬ ಉದಯೋನ್ಮುಖ ಕಲಾವಿದರ ಸಾವು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಅನ್ನೋದು ನಿರ್ಮಾಪಕ ಮುನಿರತ್ನ ರವರ ಮಾತುಗಳಲ್ಲೇ ಸ್ಪಷ್ಟ.

English summary
Producer Muniratna spoke about Anil and Raghava Uday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada