»   » 'ಕುರುಕ್ಷೇತ್ರ'ದಲ್ಲಿ ಕಾಣಿಸದ ಕನ್ನಡದ ಸ್ಟಾರ್ ನಟರು: ಅಸಲಿ ಕಾರಣ ಕೊಟ್ಟ ಮುನಿರತ್ನ!

'ಕುರುಕ್ಷೇತ್ರ'ದಲ್ಲಿ ಕಾಣಿಸದ ಕನ್ನಡದ ಸ್ಟಾರ್ ನಟರು: ಅಸಲಿ ಕಾರಣ ಕೊಟ್ಟ ಮುನಿರತ್ನ!

Posted By:
Subscribe to Filmibeat Kannada

'ಕುರುಕ್ಷೇತ್ರ' ಕನ್ನಡದ ದೊಡ್ಡ ಮಟ್ಟದ ಸಿನಿಮಾ. ಈ ಸಿನಿಮಾ ಶುರುವಾದಾಗಿನಿಂದ ಚಿತ್ರದಲ್ಲಿ ಕನ್ನಡದ ಎಲ್ಲ ಸ್ಟಾರ್ ನಟರು ನಟಿಸುತ್ತಾರೆ ಎನ್ನುವ ಮಾತುಗಳು ಹೆಚ್ಚಾಗಿತ್ತು.

ನಿರ್ಮಾಪಕ ಮುನಿರತ್ನ ಅವರು ಸಹ ಕನ್ನಡದ ಸ್ಟಾರ್ ಹೀರೋಗಳು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಾರೆ ಅಂತ ಹೇಳಿದ್ದರು. ಆದರೆ ಕೊನೆಗೂ 'ಕುರುಕ್ಷೇತ್ರ' ಚಿತ್ರದಲ್ಲಿ ನಟ ಉಪೇಂದ್ರ, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುದೀಪ್, ಯಶ್ ನಟಿಸಲೇ ಇಲ್ಲ.

'ಕುರುಕ್ಷೇತ್ರ'ಕ್ಕೆ ಅದ್ಧೂರಿ ಚಾಲನೆ: ಎಲ್ಲ ಊಹಾಪೋಹಗಳಿಗೆ ಸಿಕ್ತು ಉತ್ತರ

ಕನ್ನಡದ ಸ್ಟಾರ್ ನಟರು 'ಕುರುಕ್ಷೇತ್ರ' ಸಿನಿಮಾದಲ್ಲಿ ಯಾಕೆ ನಟಿಸಿಲ್ಲ..? ಎಂಬ ಪ್ರಶ್ನೆಗೆ ಸದ್ಯ ನಿರ್ಮಾಪಕ ಮುನಿರತ್ನ ಉತ್ತರಿಸಿದ್ದಾರೆ. ಮುಂದೆ ಓದಿ...

ಮೊದಲೇ ತಿಳಿಸಬೇಕಿತ್ತು

''ಈ ರೀತಿಯ ಒಂದು ಅದ್ದೂರಿ ಸಿನಿಮಾ ಮಾಡಬೇಕು ಎಂದರೆ ಎರಡು ವರ್ಷದ ಹಿಂದೆಯೇ ಪ್ರತಿಯೊಂದು ಕಲಾವಿದರನ್ನು ನಾನು ಭೇಟಿ ಮಾಡಬೇಕಾಗಿತ್ತು. 2017ರಲ್ಲಿ ನಾನು ಈ ರೀತಿ 'ಕುರುಕ್ಷೇತ್ರ' ಚಿತ್ರ ಮಾಡುತ್ತೇನೆ ಅಂತ ಮೊದಲೇ ಅವರಿಗೆ ತಿಳಿಸಬೇಕಿತ್ತು'' - ಮುನಿರತ್ನ, ನಿರ್ಮಾಪಕ.

ಎಲ್ಲ ಒಪ್ಪುತ್ತಿದ್ದರು

''ಎರಡು ವರ್ಷದ ಹಿಂದೆ ನಾನು ಎಲ್ಲ ನಟರಿಗೆ ನೀವು ನನ್ನ ಸಿನಿಮಾದಲ್ಲಿ ನಟಿಸಿ ಅಂತ ಕೇಳಿದ್ದರೆ ಖಂಡಿತ ಎಲ್ಲ ನಟರು ತಮ್ಮ ಡೇಟ್ ಸರಿದೂಗಿಸಿಕೊಂಡು ಹೊಗುತ್ತಿದ್ದರು'' - ಮುನಿರತ್ನ, ನಿರ್ಮಾಪಕ.

'ಬಾಹುಬಲಿ'ಯನ್ನ ಮೀರಿಸುವಂತಿದೆ 'ಕುರುಕ್ಷೇತ್ರ'ದ ಫಸ್ಟ್ ಲುಕ್ ಟೀಸರ್

ಉಳಿದ ನಿರ್ಮಾಪಕರು ಇದ್ದಾರೆ

''ನಾನು ಎರಡು ತಿಂಗಳ ಹಿಂದೆ ಏಕಾಏಕಿ ಸಿನಿಮಾ ಮಾಡುವುದಕ್ಕೆ ಹೊರಟಾಗ ಉಳಿದ ನಿರ್ಮಾಪಕರು ಗತಿ ಏನಾಗಬೇಕು. ಆ ನಿರ್ಮಾಪಕರನ್ನು ಬಿಟ್ಟು ನನಗೆ ಡೇಟ್ ಕೊಡಿ ಅಂತ ಹೇಳುವುದು ತಪ್ಪಾಗುತ್ತದೆ'' - ಮುನಿರತ್ನ, ನಿರ್ಮಾಪಕ.

ಎರಡು ವರ್ಷದ ಹಿಂದೆ ಮಾಡಬೇಕಿತ್ತು

''ನಾನು ಎರಡು ವರ್ಷದ ಹಿಂದೆ ಚಿತ್ರ ಮಾಡುವ ನಿರ್ಧಾರ ಮಾಡಿದ್ದರೆ ಸುದೀಪ್, ಶಿವರಾಜ್ ಕುಮಾರ್, ಪುನೀತ್, ಉಪೇಂದ್ರ ಎಲ್ಲರೂ ಈ ಚಿತ್ರದಲ್ಲಿ ಇರುತ್ತಿದ್ದರು. ಆದರೆ ಈಗ ನನ್ನಿಂದ ಬೇರೆ ನಿರ್ಮಾಪಕರಿಗೆ ತೊಂದರೆ ಆಗುವುದು ಸೂಕ್ತ ಅಲ್ಲ.'' - ಮುನಿರತ್ನ, ನಿರ್ಮಾಪಕ.

'ಕುರುಕ್ಷೇತ್ರ' ಚಿತ್ರದ ಯಾವ್ಯಾವ ಪಾತ್ರಗಳಲ್ಲಿ ಯಾವ್ಯಾವ ನಟರು ಮಿಂಚಲಿದ್ದಾರೆ ನೋಡಿ..

ಅಸಲಿ ಕಾರಣ

'ಕುರುಕ್ಷೇತ್ರ' ಸಿನಿಮಾದಲ್ಲಿ ಕನ್ನಡದ ಸ್ಟಾರ್ ನಟರು ನಟಿಸದಿರುವುದಕ್ಕೆ ಮುಖ್ಯ ಕಾರಣ ಡೇಟ್ಸ್ ಸಮಸ್ಯೆ. ಸದ್ಯ ಕನ್ನಡದ ಬಹುಪಾಲು ನಟರೂ ಮೂರ್ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಸೋ, 'ಕುರುಕ್ಷೇತ್ರ' ಚಿತ್ರಕ್ಕಾಗಿ ಅವರ ಡೇಟ್ ಹೊಂದಾಣಿಕೆ ಆಗುತ್ತಿಲ್ಲ ಎನ್ನುತ್ತಾರೆ ನಿರ್ಮಾಪಕ ಮುನಿರತ್ನ

English summary
Producer Munirathna spoke about the Star Actors who are not a part of 'Kurukshetra' Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada