»   » ಬಣ್ಣ ಹಚ್ಚಿದ ಜಿ.ಕೆ.ವೆಂಕಟೇಶ್ ಮೊಮ್ಮಗ ಪೃಥ್ವಿ

ಬಣ್ಣ ಹಚ್ಚಿದ ಜಿ.ಕೆ.ವೆಂಕಟೇಶ್ ಮೊಮ್ಮಗ ಪೃಥ್ವಿ

Posted By:
Subscribe to Filmibeat Kannada

ಮೂಕಾಂಬಿಕಾ ಕ್ರಿಯೇಷನ್ಸ್ ಲಾಂಛನದಲ್ಲಿ ನೂತನ ಸಿನಿಮಾವೊಂದು ಆರಂಭವಾಗುತ್ತಿದೆ. ಪ್ರೀತಮ್ ಗುಬ್ಬಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ 'ಪ್ರೊಡಕ್ಷನ್ ನಂ.1' ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಮೊಮ್ಮಗ ಪೃಥ್ವಿ ಹೀರೋ ಆಗಿ ಆಯ್ಕೆ ಆಗಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ಜಿ.ಕೆ.ವೆಂಕಟೇಶ್. ಇವರ ಮೊಮ್ಮಗ ಈಗ ನಾಯಕ ನಟನಾಗಿ ಬೆಳ್ಳಿ ತೆರೆ ಮೇಲೆ ಮಿಂಚುವುದಕ್ಕೆ ಸಿದ್ಧವಾಗಿದ್ದಾರೆ. ಈಗಾಗಲೇ ಚಿತ್ರದ ಫೋಟೋಶೂಟ್ ಕೂಡ ನಡೆದಿದೆ.

prithvi

ವಿ.ಹರಿಕೃಷ್ಣ ಸಂಗೀತ ನಿರ್ದೇಶನ, ಹರ್ಷ ನೃತ್ಯ ಸಂಯೋಜನೆ, ರವಿವರ್ಮಾ ಸಾಹಸ ಇರುವ 'ಪ್ರೊಡಕ್ಷನ್ ನಂ.1' ಚಿತ್ರ ಸೆಪ್ಟೆಂಬರ್ 10 ರಿಂದ ಶೂಟಿಂಗ್ ಆರಂಭಿಸಿ ಮೈಸೂರು ಮತ್ತು ಊಟಿಯ ರಮ್ಯಾ ತಾಣಗಳಲ್ಲಿ ಚಿತ್ರೀಕರಣಗೊಳ್ಳಲಿದೆ.

prithvi

ಮೊದಲ ಬಾರಿಗೆ ಕ್ಯಾಮರಾ ಮುಂದೆ ನಟಿಸಲು ಅಣಿಯಾಗಿರುವ ಪೃಥ್ವಿ ಈಗಾಗಲೇ ನಟನೆ, ನೃತ್ಯ, ಸಾಹಸ ಸೇರಿದಂತೆ ಸಿನಿಮಾಗೆ ಬೇಕಿರುವ ಹಲವು ಬಗೆಯ ತರಬೇತಿ ಪಡೆದು, ಪೂರ್ಣ ಪ್ರಮಾಣದ ತಯಾರಿ ನಡೆಸಿ ಬಂದಿದ್ದಾರೆ.

ಪೃಥ್ವಿಯ ಜೊತೆಗೆ ಮಾಳವಿಕ ಮೋಹನ್ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಪವಿತ್ರ ಲೋಕೇಶ್, ಅಚ್ಯುತ್ ಕುಮಾರ್, ಸಾಧು ಕೋಕಿಲ, ರಂಗಾಯಣ ರಘು ಮತ್ತು ಸಂಪತ್ ಸೇರಿದಂತೆ ಅನೇಕರ ತಾರಾಗಣವಿದೆ.

English summary
Veteran Kannada Music Director G.K.Venkatesh's grand son Prithvi has turned hero with Preetham Gubbi's new project. The yet-to-be titled film is all set to go on floors shortly.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada