For Quick Alerts
  ALLOW NOTIFICATIONS  
  For Daily Alerts

  'ಲವ್ ಮಾಕ್ ಟೇಲ್-2' ಕಥೆ ಕೇಳಿ ಸಖತ್ ಥ್ರಿಲ್ ಆದ ರಘು ದೀಕ್ಷಿತ್

  |

  ಲವ್ ಮಾಕ್ ಟೇಲ್ ಸಿನಿಮಾ ಯಶಸ್ಸಿನ ನಂತರ ಡಾರ್ಲಿಂಗ್ ಮತ್ತು ಮಿಲನ ನಾಗರಾಜ್ ಇಬ್ಬರು ಪಾರ್ಟ್-2ನಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ನಲ್ಲಿ ಪಾರ್ಟ್-2 ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿ ಇರುವು ಡಾರ್ಲಿಂಗ್ ಕೃಷ್ಣ ಲಾಕ್ ಡೌನ್ ಮುಗಿಯುತ್ತಿದ್ದಂತೆ ಚಿತ್ರೀಕರಣ ಪ್ರಾರಂಭಿಸಲು ಸಿದ್ಧರಾಗಿದ್ದಾರೆ.

  Recommended Video

  ಲವ್ ಮಾಕ್‍ಟೇಲ್-2 ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ ಡಾರ್ಲಿಂಗ್ ಕೃಷ್ಣ | Darling Krishna |FILMIBEAT KANNADA

  ಲವ್ ಮಾಕ್ ಟೇಲ್-2 ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಪಾರ್ಟ್-1 ಯಶಸ್ಸಿನ ನಂತರ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಈ ನಡುವೆ ಲವ್ ಮಾಕ್ ಟೇಲ್-2 ಕಥೆ ಕೇಳಿ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಸಖತ್ ಥ್ರಿಲ್ ಆಗಿದ್ದಾರೆ. ಮುಂದೆ ಓದಿ..

  'ಲವ್ ಮಾಕ್ ಟೇಲ್' ತೆಲುಗು ರಿಮೇಕ್ ಗೆ ಟೈಟಲ್ ಫಿಕ್ಸ್: ಆದಿ-ನಿಧಿಮಾ ಪಾತ್ರದಲ್ಲಿ ಸ್ಟಾರ್ ಕಲಾವಿದರು'ಲವ್ ಮಾಕ್ ಟೇಲ್' ತೆಲುಗು ರಿಮೇಕ್ ಗೆ ಟೈಟಲ್ ಫಿಕ್ಸ್: ಆದಿ-ನಿಧಿಮಾ ಪಾತ್ರದಲ್ಲಿ ಸ್ಟಾರ್ ಕಲಾವಿದರು

  ಪಾರ್ಟ್-2 ಬಗ್ಗೆ ರಘು ದೀಕ್ಷಿತ್ ಹೇಳಿದ್ದನು?

  ಪಾರ್ಟ್-2 ಬಗ್ಗೆ ರಘು ದೀಕ್ಷಿತ್ ಹೇಳಿದ್ದನು?

  "ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಘು ದೀಕ್ಷಿತ್ ಚಿತ್ರದ ಕಥೆ ಕೇಳಿ ಸಖತ್ ಥ್ರಿಲ್ ಆಗಿರುವುದಾಗಿ ಹೇಳಿದ್ದಾರೆ. ಕೊನೆಗೂ ಲವ್ ಮಾಕ್ ಟೇಲ್ -2 ಸಿನಿಮಾದ ಕಥೆ ಕೇಳಿದೆ. ಕಥೆ ಕೇಳಿ ಸಖತ್ ಥ್ರಿಲ್ ಆದೆ. ಪಾರ್ಟ್-1ಗಿಂತ ಉತ್ತಮವಾಗಿದೆ. ನಾನು ತುಂಬಾ ಉತ್ಸುಕನಾಗಿದ್ದೀನಿ" ಎಂದು ಬರೆದುಕೊಂಡಿದ್ದಾರೆ.

  ಪಾರ್ಟ್-2ನಲ್ಲಿ ಯಾರೆಲ್ಲ ಇರಲಿದ್ದಾರೆ?

  ಪಾರ್ಟ್-2ನಲ್ಲಿ ಯಾರೆಲ್ಲ ಇರಲಿದ್ದಾರೆ?

  ಪಾರ್ಟ್-2ನಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನು ಕುತೂಹಲ ಅಭಿಮಾನಿಗಳಲ್ಲಿದೆ. ವಿಜಯ್ ಪಾತ್ರದಲ್ಲಿ ನಟಿಸಿದ್ದ ಅಭಿಲಾಷ್ ಮತ್ತು ಸುಷ್ಮಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಖುಷಿ ಆಚಾರ್ ಎರಡನೆಯ ಭಾಗದಲ್ಲಿಯೂ ಇರಲಿದ್ದಾರೆ. ಹಾಗೂ ಆದಿ ಪಾತ್ರದಲ್ಲಿ ನಟಿಸಿದ್ದ ನಾಯಕ ಕೃಷ್ಣ ಹೊಸ ಕಥೆ ಹೇಳಲಿದ್ದಾರೆ. ಆದರೆ ನಿಧಿಮಾ, ಜೋ ಮತ್ತು ಅದಿತಿ ಪಾತ್ರಗಳು ಮತ್ತೆ ಬರಲಿವೆಯೇ ಎನ್ನುವುದನ್ನು ಕೃಷ್ಣ ಬಹಿರಂಗಪಡಿಸಿಲ್ಲ.

  ಲವ್ ಮಾಕ್‌ಟೇಲ್-2ನಲ್ಲಿ ಇರಲಿದ್ದಾರೆ ಹೊಸ ನಾಯಕಿ: ಯಾರು ಆ ನಟಿ?ಲವ್ ಮಾಕ್‌ಟೇಲ್-2ನಲ್ಲಿ ಇರಲಿದ್ದಾರೆ ಹೊಸ ನಾಯಕಿ: ಯಾರು ಆ ನಟಿ?

  ಪಾರ್ಟ್-2ನಲ್ಲಿ ಇರಲಿದ್ದಾರೆ ಹೊಸ ನಾಯಕಿ

  ಪಾರ್ಟ್-2ನಲ್ಲಿ ಇರಲಿದ್ದಾರೆ ಹೊಸ ನಾಯಕಿ

  ಲವ್ ಮಾಕ್ ಟೇಲ್-2ನಲ್ಲಿ ಹೊಸ ನಾಯಕಿಯೊಬ್ಬರು ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಯಾರು ಎನ್ನುವುದು ಬಹಿರಂಗವಾಗಿಲ್ಲ. ಸೂಕ್ತ ನಟಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಪಾರ್ಟ್-1ಗೆ ಸಂಗೀತ ನೀಡಿದ್ದ ರಘು ದೀಕ್ಷಿತ್ ಸಂಗೀತ ಪಾರ್ಟ್-2ನಲ್ಲಿಯೂ ಅವರ ಸಂಗೀತ ಇರಲಿದೆ.

  ಮತ್ತೊಂದು ಖುಷಿ ಸುದ್ದಿ ಹಂಚಿಕೊಂಡ 'ಲವ್ ಮಾಕ್‌ಟೇಲ್' ತಂಡಮತ್ತೊಂದು ಖುಷಿ ಸುದ್ದಿ ಹಂಚಿಕೊಂಡ 'ಲವ್ ಮಾಕ್‌ಟೇಲ್' ತಂಡ

  ಚುಕ್ಕಲ ಪಲ್ಲಕಿಲೋ'ಆಗಿ ತೆಲುಗಿಗೆ ಎಂಟ್ರಿ ಕೊಟ್ಟ ಲವ್ ಮಾಕ್ ಟೇಲ್

  ಚುಕ್ಕಲ ಪಲ್ಲಕಿಲೋ'ಆಗಿ ತೆಲುಗಿಗೆ ಎಂಟ್ರಿ ಕೊಟ್ಟ ಲವ್ ಮಾಕ್ ಟೇಲ್

  ಕನ್ನಡದ ಲವ್ ಮಾಕ್ ಟೇಲ್ ಸಿನಿಮಾ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಈಗಾಗಲೆ ಟೈಟಲ್ ಸಹ ಫಿಕ್ಸ್ ಆಗಿದೆ. ಚಿತ್ರಕ್ಕೆ 'ಚುಕ್ಕಲ ಪಲ್ಲಕಿಲೋ' ಎಂದು ಎಂದು ಟೈಟಲ್ ಇಡಲಾಗಿದೆ. ವಿಶೇಷ ಅಂದರೆ 'ಚುಕ್ಕಲ ಪಲ್ಲಕಿಲೋ' ಚಿರಂಜೀವಿ ಅಭಿನಯದ 'ಸ್ಟೇಟ್ ರೌಡಿ' ಸಿನಿಮಾದ ಪ್ರಸಿದ್ಧ ಹಾಡಿನ ಸಾಲು ಇದಾಗಿದೆ. ಚಿತ್ರಕ್ಕೆ ಕನ್ನಡದ ನಿರ್ದೇಶಕ ನಾಗಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆದರೆ ಆದಿ ನಿಧಿಮಾ ಪಾತ್ರದಲ್ಲಿ ಯಾರೆಲಲ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಬಹಿರಂಗವಾಗಿಲ್ಲ.

  English summary
  Music Director Raghu Dixit Heard the story of love mocktail-2 and Thrilled. He said it's way better than that of part 1.
  Thursday, June 4, 2020, 20:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X