»   » ಒಂಚೂರು ನೀವು ನಾವುಗಳು ನೋಡ್ಬೇಕಾದ ಚಿತ್ರಗಳು

ಒಂಚೂರು ನೀವು ನಾವುಗಳು ನೋಡ್ಬೇಕಾದ ಚಿತ್ರಗಳು

Posted By:
Subscribe to Filmibeat Kannada

ಅದು ಯಾವುದೇ ನಗರವಾಗಿರಲಿ, ಇದೇ ರೀತಿಯ ಚಿತ್ರಗಳು ಕಣ್ಣಿಗೆ ಬಿದ್ದೇ ಬೀಳುತ್ತವೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ಕೋಲ್ಕತ್ತಾ ಹೀಗೆ ನೀವು ಎಲ್ಲಿಗೆ ಹೋದರೂ ಚದುರಿದ ಬದುಕಿನ ಚಿತ್ರಗಳನ್ನು ಕಾಣಬಹುದು. ಅಂತಹದ್ದೇ ಕೆಲವು ಚಿತ್ರಗಳು ಇಲ್ಲಿವೆ ನೋಡಿ.

ಇಲ್ಲಿ ಹಾಟ್ ತಾರೆಗಳಿಲ್ಲ, ಬಿಂಕದ ಬೆಡಗಿಯರಿಲ್ಲ. ಎಲ್ಲವೂ ಬದುಕಿನ ಸ್ತಬ್ಧ ಚಿತ್ರಗಳಂತೆ ಭಾಸವಾಗುವ ಸಿಟಿ ಲೈಫಿನ ಚಿತ್ರಗಳು. ಇಲ್ಲಿ ಭೂತಗನ್ನಡಿ ಹಾಕಿ ಹುಡುಕಿದರೂ ನಿಮಗೆ ಸನ್ನಿ ಲಿಯೋನ್, ವೀಣಾ ಮಲಿಕ್, ದೀಪಿಕಾ ಪಡುಕೋಣೆ ಕಾಣಿಸೋಲ್ಲ. ಆದರೆ ನಗರದ ಕೋಣೆಯ ಬಾಗಿಲುಗಳು ತೆರೆದುಕೊಳ್ಳುತ್ತವೆ.


ಕೆಲವು ಚಿತ್ರಗಳನ್ನು ನೋಡುತ್ತಿದ್ದರೆ ಕವಿ ಮನಸು ಗರಿಗೆದರುತ್ತದೆ. ಅಲ್ಲೇ ಒಂದು ಕವನ ಸ್ಫುರಿಸುತ್ತದೆ. ನೆನಪುಗಳು ಇನ್ನೆತ್ತಲೋ ಸರಿಯುತ್ತವೆ. ಭಾವನೆಗಳು ವೀಣೆ ಮಿಡಿಯುತ್ತದೆ. ಮಂಕು ಕವಿದ ಮನಸ್ಸು ಕೊಂಚ ತಂಪಾಗುತ್ತದೆ. ಬಾಲ್ಯದ ಚಿತ್ರಗಳು ಬಿಚ್ಚಿಕೊಳ್ಳುತ್ತವೆ. ನೆನಪುಗಳ ಚಕ್ರ ಜಯಂಟ್ ವ್ಹೀಲ್ ನಂತೆ ಸುತ್ತುತ್ತದೆ.

ಪಂಚರ್ ಅಂಗ್ಡಿ ಟೈರುಗಳು, ಏಳು ಏಂಟು ಸ್ವರಗಳು, ಮನೆ ಮೇಲೆ ವಾಟರ್ ಟ್ಯಾಂಕುಗಳು, ಬೆಣ್ಣೆ ಬಿಸ್ಕತ್ ಚಕ್ಲಿಗಳು, ಅಮ್ಮ ಅಪ್ಪ ಮಕ್ಳು, ಒಂಚೂರು ನೀವು ನಾವುಗಳು, ಏನೋ ರಿಲೇಷನ್ ಗಳು, ಎಂಥ ಕನೆಕ್ಷನ್ ಗಳು, ಎಲ್ಲ ಟ್ವೆಂಟಿ ಟ್ವೆಂಟಿ ಮ್ಯಾಚುಗಳು, ಎಲ್ರುದು ಒಳ್ಳೆ ಕೂಸುಗಳು.

ಎಸ್ಎಸ್ ಲ್ ಸಿಗಳು ಪಿಯುಸಿಗಳು ಸಿಇಟಿಗಳು, ಇಂಜಿನಿಯರಿಂಗು ಪಂಜಿನಿಯರಿಂಗು ಮೆಡಿಕಲ್ ಗಳು, ಹಲ್ಲು ಕಿವಿ ಮುಗು ಬಾಯಿ ಡಾಕ್ಟ್ರುಗಳು, ಹೊಸ ಹುಡುಗಿಯರ ಮಿಡಿತಗಳು ಹಳೆ ಹೃದಯಗಳ ಕೆರೆತಗಳು.

ಪೆನ್ಸಿಲುಗಳು ರಬ್ಬರುಗಳು ರಿಬ್ಬನ್ನುಗಳು ಮುತ್ತು ಜಡೆಗಳು, ಬಿಲ್ಡಿಂಗುಗಳು ಹೆಲ್ಮೆಟ್ಟುಗಳು, ಮಳೆಗಾಲಗಳು ಒದ್ದೆ ಕೊಡೆಗಳು, ಮ್ಯಾರೆಜ್ ಬ್ಯುರೋಗಳು ಹೂವು ಮುಡಿದ ಚೌಲ್ಟ್ರಿಗಳು, ಹೆರಿಗೆ ವಾರ್ಡುಗಳು ಸಾಂಬ್ರಾಣಿಗಳು.

ಕರೆಂಟುಗಳು, ಕಾಗೆ ಕಾಲ್ ಗಳು, ಸಂಸಾರಗಳು, ರಾಗಿ ಬಾಲ್ ಗಳು, ಆತ್ಮಶಾಂತಿ ಅಂಗ್ಡಿಗಳು, ದೇವರ ಮೋಬೈಲ್ ನಂಬರ್ ಗಳು, ಅಪ್ಳ ಸಂಡ್ಗೆ ಹುಟ್ಟು ಸಾವು ಸಾಂಪಲ್ಲುಗಳು, ಎಲ್ಲಾ ಮಹಾ ಬೋರುಗಳು, ಹೊಡೆದ ಟೆನ್ನಿಸ್ ಬಾಲುಗಳು, ನಗುವುದು ಮರೆತಿದೆ ಹೃದಯಗಳು.

ಇದೇನಿದು 'ಪಂಚರಂಗಿ' ಹಾಡುಗಳು ಅಂದುಕೊಳ್ತಿದ್ದೀರಾ! ಹೌದು ಯೋಗರಾಜ್ ಭಟ್ಟರು ಈ ರೀತಿಯ ಚಿತ್ರಗಳನ್ನು ನೋಡಿಯೇ ಆ ರೀತಿಯ ಹಾಡು ಬರುದಿರುವುದು. ನಿಮಗೂ ಈ ಸಿಟಿ ಲೈಫಿನ ಚಿತ್ರಗಳು ಇಷ್ಟವಾಗಬಹುದು.

ನಿಮ್ಮ ಬಳಿಯೂ ಚಿತ್ರಗಳಿದ್ದರೆ (ಕಾಪಿರೈಟ್ ಉಲ್ಲಂಘಿಸದೆ ನೀವೇ ತೆಗೆದ ಚಿತ್ರಗಳು) ದಯವಿಟ್ಟು ನಮಗೆ ಕಳುಹಿಸಿ ಕೊಡಿ. ಸಿಟಿ ಲೈಫ್ ಆದರೂ ಪರ್ವಾಗಿಲ್ಲ ಹಳ್ಳಿ ಲೈಫಾದರೂ ಓಕೆ. ನಮ್ಮ ಇ-ಮೇಲ್ ವಿಳಾಸ. (ಒನ್ ಇಂಡಿಯಾ ಕನ್ನಡ)

English summary
See and Celebrate the life of Hyderabad, 400 years of historical city with the help of Kandukuri Ramesh Babu's camera eye.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada