»   » ಕನ್ನಡದ ಬಿಸಿ ಬೇಳೆಬಾತ್ ಬದ್ಲು ಹೈದರಾಬಾದ್ ಬಿರಿಯಾನಿ ಉಂಡ ಕುಮಾರಣ್ಣ.!

ಕನ್ನಡದ ಬಿಸಿ ಬೇಳೆಬಾತ್ ಬದ್ಲು ಹೈದರಾಬಾದ್ ಬಿರಿಯಾನಿ ಉಂಡ ಕುಮಾರಣ್ಣ.!

Posted By: ಹರಾ
Subscribe to Filmibeat Kannada

ಹುಟ್ಟಿದ್ದು ಕನ್ನಡ ನಾಡಿನ ನೆಲದಲ್ಲಿ...ಬೆಳೆದದ್ದು ಕನ್ನಡ ಮಣ್ಣಿನ ಸೊಗಡಿನಲ್ಲಿ...ಅಧಿಕಾರ ಪಡೆದದ್ದು ಕನ್ನಡಿಗರ ಪ್ರೋತ್ಸಾಹದಿಂದ...ಖ್ಯಾತಿ, ಜನಪ್ರಿಯತೆ...ಎಲ್ಲವೂ ಗಳಿಸಿದ್ದು ಇದೇ ಕರ್ನಾಟಕದಲ್ಲಿ.!

ಆದ್ರೆ ಮಗನ ವಿಚಾರದಲ್ಲಿ ಮಾತ್ರ ಇದೇ ಕರ್ನಾಟಕ ಮತ್ತು ಕನ್ನಡ ಚಿತ್ರರಂಗಕ್ಕಿಂತ ಪಕ್ಕದ ತೆಲುಗು ಚಿತ್ರರಂಗವೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರವರಿಗೆ ಮುಖ್ಯವಾಗ್ಹೋಯ್ತಾ.? ['ಜಾಗ್ವಾರ್' ಬರೋ ಮುನ್ನವೇ 3 ತೆಲುಗು ಚಿತ್ರಕ್ಕೆ ನಿಖಿಲ್ ಬುಕ್ ಆಗಿದ್ದಾರಾ?]


ಹೀಗಂತ ಪ್ರಶ್ನೆ ಕೇಳುತ್ತಿರುವವರು ಖಂಡಿತ ನಾವಲ್ಲ. ಬದಲಾಗಿ, ಪಿಸು-ಪಿಸು ಅಂತ ಮಾತನಾಡಿಕೊಳ್ಳುತ್ತಿರುವವರು ಕನ್ನಡ ಸಿನಿ ಪ್ರೇಮಿಗಳು.!


ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರವರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರವರ ಮಗ ನಿಖಿಲ್ ಕುಮಾರ್ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಾಗಿನಿಂದಲೂ ಕುತೂಹಲ ಗರಿಗೆದರಿರುವುದು ಕನ್ನಡ ಚಿತ್ರರಂಗದಲ್ಲಿ. 'ಜಾಗ್ವಾರ್' ಬಗ್ಗೆ ಹೆಚ್ಚು ಹೈಪ್ ಕ್ರಿಯೇಟ್ ಆಗಿರುವುದು ಇದೇ ಸ್ಯಾಂಡಲ್ ವುಡ್ ನಲ್ಲಿ.


ಹೀಗಿದ್ದರೂ, ಇದೇ ಸ್ಯಾಂಡಲ್ ವುಡ್ ನ ಕಡೆಗಣಿಸಿ ತೆಲುಗು ಸಿನಿ ಅಂಗಳದಲ್ಲಿ ಮೊದಲು 'ಜಾಗ್ವಾರ್' ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಇದರಿಂದ ಸಹಜವಾಗಿ ಕನ್ನಡದ ಮಣ್ಣಿನ ಮಕ್ಕಳು ಬೇಸರಗೊಂಡಿದ್ದಾರೆ. ಮುಂದೆ ಓದಿ.....


ಹೈದರಾಬಾದ್ ನಲ್ಲಿ ಅದ್ಧೂರಿ ಕಾರ್ಯಕ್ರಮ.!

ನಿನ್ನೆ (ಭಾನುವಾರ, ಜುಲೈ 31) ಹೈದರಾಬಾದ್ ನ ಪ್ರತಿಷ್ಟಿತ ಹೋಟೆಲ್ ನಲ್ಲಿ, ಟಾಲಿವುಡ್ ದಿಗ್ಗಜರ ಸಮ್ಮುಖದಲ್ಲಿ 'ಜಾಗ್ವಾರ್' ಚಿತ್ರದ ತೆಲುಗು ಟೀಸರ್ ಬಿಡುಗಡೆ ಮಾಡಲಾಯ್ತು. [ಎಕ್ಸ್ ಕ್ಲೂಸಿವ್ ಚಿತ್ರಗಳು ; ನಿಖಿಲ್ ಕುಮಾರಸ್ವಾಮಿ ಯಾರಿಗೂ ಕಮ್ಮಿ ಇಲ್ಲ!]


ಯಾರೆಲ್ಲಾ ಇದ್ದರು.?

ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರ್, ಮಹದೇವ್ ಸೇರಿದಂತೆ 'ಜಾಗ್ವಾರ್' ಚಿತ್ರತಂಡಕ್ಕೆ ಶುಭ ಹಾರೈಸಲು ಖ್ಯಾತ ತೆಲುಗು ನಿರ್ಮಾಪಕ ಅಲ್ಲು ಅರವಿಂದ್, ಸುರೇಶ್ ಬಾಬು ಮತ್ತು ಹಲವು ಗಣ್ಯರು ಆಗಮಿಸಿದ್ದರು. [ವಿಡಿಯೋ: 'ಕ್ಲಾಸ್'ಗೂ 'ಮಾಸ್'ಗೂ ನಿಖಿಲ್ ಕುಮಾರ್ 'ಬಾಸ್' ಆಗ್ಬಹುದು.!]


ತೆಲುಗಿನಲ್ಲಿ ಮಾತು ಆರಂಭಿಸಿದ ನಿಖಿಲ್ ಕುಮಾರ್

''ಮಹದೇವ್ ರವರು ತೆಲುಗಿನಲ್ಲಿ ಮಾತನಾಡಿ ಅಂತ ಒಂದು ವರ್ಷದಿಂದ ಫೋರ್ಸ್ ಮಾಡುತ್ತಿದ್ದಾರೆ. ನನಗೂ ಕೂಡ ತೆಲುಗು ಅಂದ್ರೆ ತುಂಬಾ ಇಷ್ಟ. ಮುಂದಿನ ಆಡಿಯೋ ರಿಲೀಸ್ ಸಂದರ್ಭದಲ್ಲಿ ನಾನು ಖಂಡಿತ ತೆಲುಗಿನಲ್ಲಿ ಚೆನ್ನಾಗಿ ಮಾತನಾಡುತ್ತೇನೆ. ಪ್ಲೀಸ್ ಇದೊಂದು ಬಾರಿ ಕ್ಷಮಿಸಿ'' ಅಂತ ತೆಲುಗಿನಲ್ಲಿ ಹೇಳಿ (ಕನ್ನಡಕ್ಕೆ ಅನುವಾದಿಸಲಾಗಿದೆ) ಇಂಗ್ಲೀಷ್ ನಲ್ಲಿ ಮಾತನ್ನ ಮುಂದುವರಿಸಿದರು ನಿಖಿಲ್ ಕುಮಾರ್. ['ಜಾಗ್ವಾರ್' ಅಡ್ಡದಿಂದ ಬಂದಿರುವ ತಾಜಾ ಫೋಟೋ ಇದು.!]


ಆಂಗ್ಲ ಭಾಷೆಯಲ್ಲಿ ಮಾತಿಗಿಳಿದ ಎಚ್.ಡಿ.ಕುಮಾರಸ್ವಾಮಿ

''ನಾನು ಚಿತ್ರರಂಗಕ್ಕೆ ಕಾಲಿಡುವುದಕ್ಕೆ ಕರ್ನಾಟಕದಲ್ಲಿ ಡಾ.ರಾಜ್ ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಸ್ಫೂರ್ತಿ. ತೆಲುಗಿನಲ್ಲಿ ನಾನು ಎನ್.ಟಿ.ಆರ್ ಚಿತ್ರಗಳನ್ನ ನೋಡಿದ್ದೇನೆ. ನಾನು 100 ಕ್ಕೂ ಹೆಚ್ಚು ಚಿತ್ರಗಳನ್ನು ವಿತರಣೆ ಮಾಡಿ, 6 ಚಿತ್ರಗಳನ್ನ ನಿರ್ಮಾಣ ಮಾಡಿದ್ದೇನೆ. ರಾಜಕೀಯಕ್ಕೆ ಕಾಲಿಟ್ಟ ಮೇಲೆ ಚಿತ್ರರಂಗದಲ್ಲಿ ಗಮನ ಕಡಿಮೆ ಆಯ್ತು'' - ಎಚ್.ಡಿ.ಕುಮಾರಸ್ವಾಮಿ


ತೆಲುಗು ಭಾಷಿಕರ ಆಶೀರ್ವಾದ ಬೇಕು

''ಇವತ್ತು ನನಗೆ ತೆಲುಗು ಭಾಷಿಕರ ಆಶೀರ್ವಾದ ಬೇಕು. ಯಾಕಂದ್ರೆ ಚಿತ್ರರಂಗ ಯಾವುದೇ ಭಾಷೆಗೆ ಸೀಮಿತವಾಗಿಲ್ಲ. ಯಾರು ಬೇಕಾದರೂ, ಯಾವ ಭಾಷೆಯಲ್ಲಿ ಬೇಕಾದರೂ ನಟಿಸಬಹುದು. ಇದೇ ಕಾರಣಕ್ಕೆ ನಾವು ದ್ವಿಭಾಷೆಯಲ್ಲಿ ಚಿತ್ರ ನಿರ್ಮಿಸೋಕೆ ನಿರ್ಧಾರ ಮಾಡಿದ್ವಿ. ಅದರ ಕ್ರೆಡಿಟ್ ಸಲ್ಲಬೇಕಾಗಿರುವುದು ವಿಜಯೇಂದ್ರ ಪ್ರಸಾದ್ ರವರಿಗೆ'' - ಎಚ್.ಡಿ.ಕುಮಾರಸ್ವಾಮಿ


ದ್ವಿಭಾಷೆಯಲ್ಲಿ ನಿರ್ಮಾಣ ಮಾಡಲು ಕಾರಣ.?

''ವಿಜಯೇಂದ್ರ ಪ್ರಸಾದ್ ರವರು ನನ್ನ ಭೇಟಿ ಮಾಡಿದಾಗ ನನಗೆ ಕೇಳಿದ್ರು - ''ನಿಮ್ಮ ಮಗನನ್ನು ಯಾಕೆ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತ ಮಾಡಿಕೊಳ್ಳುತ್ತೀರಾ.? ತೆಲುಗಿನಲ್ಲೂ ಪರಿಚಯ ಮಾಡಲು ಅನುಮತಿ ಕೊಡಿ'' ಅಂತ ಕೇಳಿದರು. ಅವರ ಸಲಹೆ ಮೇರೆಗೆ ತೆಲುಗು-ಕನ್ನಡದಲ್ಲಿ 'ಜಾಗ್ವಾರ್' ನಿರ್ಮಾಣ ಮಾಡಲು ಮುಂದಾಗಿದ್ವಿ'' - ಎಚ್.ಡಿ.ಕುಮಾರಸ್ವಾಮಿ


ನನ್ನ ಮಗನಿಗೆ ಆಶೀರ್ವಾದ ಮಾಡಿ

''ನಾನು ಅನೇಕ ತೆಲುಗು ಚಿತ್ರಗಳನ್ನು ಕರ್ನಾಟಕದಲ್ಲಿ ವಿತರಣೆ ಮಾಡಿದ್ದೇನೆ. ಇಂದು ನಾನು ಈ ವೇದಿಕೆಯಲ್ಲಿ ನನ್ನ ಮಗನಿಗೆ ಆಶೀರ್ವಾದ ಮಾಡಿ ಅಂತ ತೆಲುಗು ಭಾಷಿಕರಲ್ಲಿ ವಿನಂತಿ ಮಾಡುತ್ತೇನೆ'' - ಎಚ್.ಡಿ.ಕುಮಾರಸ್ವಾಮಿ


ತೆಲುಗು ಚಿತ್ರರಂಗದಲ್ಲಿ ಇಂಟ್ರೆಸ್ಟ್ ಜಾಸ್ತಿ.!

''He is most interested in Telugu Film Industry. ಹೀಗಾಗಿ, ಭವಿಷ್ಯದಲ್ಲಿ ನಾವು ಯಾವುದೇ ಚಿತ್ರ ನಿರ್ಮಾಣ ಮಾಡಿದರೂ, ಕನ್ನಡ ಹಾಗೂ ತೆಲುಗಿನಲ್ಲಿ ತಯಾರು ಮಾಡುತ್ತೇವೆ. ಅದಕ್ಕೆ ಎಲ್ಲರ ಆಶೀರ್ವಾದ ಬೇಕು'' - ಎಚ್.ಡಿ.ಕುಮಾರಸ್ವಾಮಿ


ವಿಡಿಯೋ ನೋಡಿ,

ಹೈದರಾಬಾದ್ ನಲ್ಲಿ ನಡೆದ 'ಜಾಗ್ವಾರ್' ಟೀಸರ್ ಬಿಡುಗಡೆ ಸಮಾರಂಭದಲ್ಲಿ ನಿಖಿಲ್ ಮತ್ತು ಎಚ್.ಡಿ.ಕುಮಾರಸ್ವಾಮಿ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ....


'ಜಾಗ್ವಾರ್' ಅದ್ಧೂರಿ ಆಗಿ ಲಾಂಚ್ ಆಗಿದ್ದು ಕರ್ನಾಟಕದಲ್ಲಿ.!

'ಜಾಗ್ವಾರ್' ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನಲ್ಲಿ ಅದ್ಧೂರಿ ಆಗಿ ನಡೆದಿತ್ತು.


ಯೂಟ್ಯೂಬ್ ನಲ್ಲಿ ಬಿಡುಗಡೆ ಆಗಿದೆ ಕನ್ನಡದ ಟೀಸರ್.!

'ಜಾಗ್ವಾರ್' ಕನ್ನಡ ಅವತರಣಿಕೆಯ ಟೀಸರ್ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ.


ಇಲ್ಲೂ ಸಮಾರಂಭ ಮಾಡ್ತಾರಂತೆ.!

ಮೂಲಗಳ ಪ್ರಕಾರ, ಇದೇ ವಾರ 'ಜಾಗ್ವಾರ್' ಚಿತ್ರದ ಕನ್ನಡ ಟೀಸರ್ ಬಿಡುಗಡೆ ಸಮಾರಂಭ ಖಾಸಗಿ ಹೊಟೇಲ್ ನಲ್ಲಿ ನಡೆಯಲಿದೆ.


ತೆಲುಗು ಮಾರ್ಕೆಟ್ ದೊಡ್ಡದು.!

ಯಾರು ಏನೇ ಮಾತನಾಡಿಕೊಂಡರೂ, ಕನ್ನಡಕ್ಕಿಂತ ತೆಲುಗು ಚಿತ್ರರಂಗದ ಮಾರ್ಕೆಟ್ ದೊಡ್ಡದು ಎಂಬುದು ಸತ್ಯ.


English summary
Karnataka Ex CM H.D.Kumaraswamy son Nikhil Kumar's debut movie 'Jaguar' (Telugu Version) teaser is released with great grandeur in Hyderabad on July 31st. In this event, H.D.Kumaraswamy said that his son is interested in Telugu Film Industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada