»   » ನನ್ನ ಹೆಂಡ್ತಿ ವಿಜಯಲಕ್ಷ್ಮಿಗೆ ಪ್ರಿಯಕರನಿದ್ದಾನೆ ಎಂದ ದರ್ಶನ್

ನನ್ನ ಹೆಂಡ್ತಿ ವಿಜಯಲಕ್ಷ್ಮಿಗೆ ಪ್ರಿಯಕರನಿದ್ದಾನೆ ಎಂದ ದರ್ಶನ್

Posted By:
Subscribe to Filmibeat Kannada

ಎಲ್ಲಾ ಸುದ್ದಿ ಮಾಧ್ಯಮಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಬ್ರೇಕಿಂಗ್ ನ್ಯೂಸ್ ಮಾಡಿದ್ದಾರೆ. ಅದು ಸಿನಿಮಾ ವಿಚಾರಕ್ಕೆ ಅಲ್ಲವೇ ಅಲ್ಲ. ಬದಲಾಗಿ ಮತ್ತೊಮ್ಮೆ ತಮ್ಮ 'ಗಲಾಟೆ ಸಂಸಾರ'ದಿಂದಾಗಿ.!

ವರ್ಷಗಳ ಹಿಂದೆ ಪತ್ನಿ ವಿಜಯಲಕ್ಷ್ಮಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಜೈಲು ಕದ ತಟ್ಟಿ ಬಂದಿದ್ದ ನಟ ದರ್ಶನ್ ಈಗ ಮತ್ತೆ ಅಂತದ್ಧೇ ವಿಚಾರದಿಂದಾಗಿ ಹೆಡ್ ಲೈನ್ಸ್ ಮಾಡಿದ್ದಾರೆ. [ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಹಬ್ಬಿರುವ ಗಾಸಿಪ್ ನಿಜವೇ?]

ಪತಿ ದರ್ಶನ್ ವಿರುದ್ಧ ಪತ್ನಿ ವಿಜಯಲಕ್ಷ್ಮಿ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. [ನಟ ದರ್ಶನ್-ವಿಜಯಲಕ್ಷ್ಮಿ ಸಂಸಾರದಲ್ಲಿ ಮತ್ತೆ ಸುಂಟರಗಾಳಿ]

ಈ ಬಗ್ಗೆ 'ಪಬ್ಲಿಕ್ ಟಿವಿ' ವಾಹಿನಿ ಜೊತೆ ಮಾತನಾಡಿದ ದರ್ಶನ್, ತಮ್ಮ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮುಂದೆ ಓದಿ....

'ಗಲಾಟೆ' ಬಗ್ಗೆ ದರ್ಶನ್ ತುಟಿ ಬಿಚ್ಚಿದ್ದಾರೆ!

ಪತ್ನಿ ವಿಜಯಲಕ್ಷ್ಮಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತುಟಿ ಬಿಚ್ಚಿದ್ದಾರೆ. ಪತ್ನಿ ಬಗ್ಗೆ ದರ್ಶನ್ ಏನು ಹೇಳಿದ್ದಾರೆ ಅಂತ ತಿಳಿಯಲು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

ಪತ್ನಿ ಬಗ್ಗೆ ದರ್ಶನ್ ಗಂಭೀರ ಆರೋಪ!

ತಮ್ಮ ಪತ್ನಿ ವಿಜಯಲಕ್ಷ್ಮಿಗೆ ಪ್ರಿಯಕರನಿದ್ದು, ಆಕೆ ಆತನಿಗೆ ತಮ್ಮಿಂದ ಕದ್ದ Audi ಕಾರನ್ನು ಕೊಟ್ಟಿದ್ದಾರೆ. ಇದನ್ನು ಕೇಳಲು ತಾವು ವಿಜಯಲಕ್ಷ್ಮಿ ವಾಸವಿದ್ದ ಅಪಾರ್ಟ್ಮೆಂಟ್ ಕಡೆಗೆ ಹೋಗಿದ್ದುದ್ದಾಗಿ ನಟ ದರ್ಶನ್ 'ಪಬ್ಲಿಕ್ ಟಿವಿ'ಗೆ ತಿಳಿಸಿದ್ದಾರೆ. [ಪತ್ನಿ ಲಕ್ಷ್ಮಿ ಕೈ ಕೊಟ್ರೆ ಬಾಸ್ ದರ್ಶನ್ ಗೆ ಚಿಪ್ಪೇ ಗತಿ]

ನಟ ದರ್ಶನ್ ಹೇಳಿದ್ದೇನು?

''ನನ್ನ Audi ಕಾರನ್ನು ವಿಜಯಲಕ್ಷ್ಮಿ ಕದ್ದುಕೊಂಡು ಹೋಗಿ ಆಕೆಯ ಬಾಯ್ ಫ್ರೆಂಡ್ ಗೆ ಕೊಟ್ಟಿದ್ದಳು. ನಾನು ನನ್ನ ಕಾರನ್ನು ವಾಪಸ್ ಕೊಡು ಅಂತ ಕೇಳಲು ಆಕೆಯ ಮನೆಯ ಬಳಿ ತೆರಳಿದ್ದೆ. ಅಷ್ಟರಲ್ಲಿ ಎಲ್ಲೋ ಗುದ್ದಿಸಿ ತಂದು ಕಾರನ್ನು ನಿಲ್ಲಿಸಿದ್ದರು. ಅದಕ್ಕೆ ಸಾಕ್ಷಿಯಾಗಿ ಕಾರಿನ ಗ್ಲಾಸ್ ಪೀಸ್ ಗಳು ಅಲ್ಲೇ ಬಿದ್ದಿವೆ. ಬೇಕಾದ್ರೆ ಹೋಗಿ ನೋಡಿ'' ಅಂತ ದರ್ಶನ್ ಹೇಳಿಕೆ ನೀಡಿದ್ದಾರೆ. [ಪತ್ರಿಕೆ-ಮಾಧ್ಯಮದವರು ದರ್ಶನ್ ನ ಕೀಳಾಗಿ ನೋಡ್ತಿದ್ದಾರಾ?]

ವಿಜಯಲಕ್ಷ್ಮಿ ಜೊತೆ ಮಾತನಾಡಿಲ್ಲ!

''ಈ ಸಂದರ್ಭದಲ್ಲಿ ನನ್ನ ಹಾಗೂ ವಿಜಯಲಕ್ಷ್ಮಿ ನಡುವೆ ಮುಖಾಮುಖಿಯೇ ಆಗಿಲ್ಲ. ಸೆಕ್ಯೂರಿಟಿ ಗಾರ್ಡ್ ಒಬ್ಬ ಎದುರಿಗೆ ಸಿಕ್ಕಿದ್ದ. ಅವನು ಕೆಟ್ಟದಾಗಿ ವರ್ತಿಸಿದ್ದಕ್ಕೆ ಮಾತಿನ ಚಕಮಕಿ ನಡೆಯಿತು. ಅಷ್ಟೆ'' ಅಂತ 'ಪಬ್ಲಿಕ್ ಟಿವಿ'ಗೆ ದರ್ಶನ್ ಹೇಳಿದ್ದಾರೆ. [ಪತ್ನಿ ಮೇಲೆ ಹಲ್ಲೆ ಪ್ರಕರಣ; ದರ್ಶನ್ ಗೆ ಕ್ಲೀನ್ ಚಿಟ್]

ಪತ್ನಿ ಮೇಲೆ ದರ್ಶನ್ ಗಂಭೀರ ಆರೋಪ!

ಪತ್ನಿ ವಿಜಯಲಕ್ಷ್ಮಿಗೆ ಬಾಯ್ ಫ್ರೆಂಡ್ ಇರುವುದಾಗಿ ದರ್ಶನ್ ಗಂಭೀರ ಆರೋಪ ಮಾಡಿದ್ದಾರೆ. [ನಟ ದರ್ಶನ್ ಸಹ ಕೈದಿಗಳಿಂದ ಕಣ್ಣೀರಧಾರೆ]

ಪ್ರತ್ಯೇಕ ವಾಸ!

ಈಗಾಗಲೇ ಎಲ್ಲರೂ ಗಮನಿಸಿರುವ ಹಾಗೆ, ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನ ಫ್ಲಾಟ್ ಒಂದರಲ್ಲಿ ಮಗ ವಿನೀಶ್ ಜೊತೆ ವಿಜಯಲಕ್ಷ್ಮಿ ಪ್ರತ್ಯೇಕ ವಾಸವಿದ್ದಾರೆ.

ದರ್ಶನ್ ಇರುವುದೇ ಬೇರೆ ಕಡೆ!

ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ಸ್ವಂತ ಮನೆಯಲ್ಲಿ ದರ್ಶನ್ ವಾಸವಿದ್ದಾರೆ. [ಚಾಲೇಂಜಿಂಗ್ ಸ್ಟಾರ್ ಕಿವಿ ಹಿಂಡಿದ ನಮ್ಮ ಓದುಗರು]

ಕೆಲ ತಿಂಗಳಿನಿಂದ ಪ್ರತ್ಯೇಕ ವಾಸ

ದರ್ಶನ್ ಹಾಗೂ ವಿಜಯಲಕ್ಷ್ಮಿ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದ ಕಾರಣ ಕೆಲ ತಿಂಗಳುಗಳಿಂದ ಇಬ್ಬರು ಒಟ್ಟಿಗೆ ಇಲ್ಲ.

English summary
Kannada Actor Darshan is in News again for wrong reasons. Vijayalakshmi, Darshan's wife has approached the Chennammanakere Achukattu Police asking them to warn her husband for his 'Bad Conduct'. While reacting to the issue, Darshan has made serious allegation against his wife.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada